ತೂಕ ಜಾಸ್ತಿ ಇದೆ ಅಂತ ಚಿಂತೆ ಮಾಡ್ತಿದ್ದೀರಾ..? ಚಿಂತೆ ಬಿಡಿ ಈ ಟಿಪ್ಸ್ ಟ್ರೈ ಮಾಡಿ..!

21 Jun 2018 12:40 PM | Health
4377 Report

ಸಾಮಾನ್ಯವಾಗಿ ದೇಹದ ತೂಕ ಹೆಚ್ಚಾದರೆ ಜನರ ಮಧ್ಯೆ ಬೆರೆಯುವುದಕ್ಕೆ ಹಿಂಜರಿಯುತ್ತೇವೆ. ನಾವು ಇಷ್ಟಪಡುವ ಬಟ್ಟೆಯನ್ನುಹಾಕಿಕೊಳ್ಳಲು ಆಗದೆ ಕಷ್ಟಪಡುವಂತಾಗುತ್ತದೆ. ತೂಕದ ಸಮಸ್ಯೆಯಿಂದ ಕೆಲವೊಮ್ಮೆ ಮುಜುಗರವನ್ನು ಅನುಭವಿಸುವ ಪರಿಸ್ಥಿತಿ ಬರುತ್ತದೆ.  ಚಿಂತೆ ಬಿಡಿ ಈ ಟಿಪ್ಸ್ ಗಳನ್ನು ಅನುಸರಿಸಿ ತೂಕವನ್ನು ಕಡಿಮೆ ಮಾಡಿಕೊಳ್ಳಿ.

ಕೆಲವೊಮ್ಮೆ ನಮಗೆ ಗೊತ್ತಿಲ್ಲದೆ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಅಂತಹ ಬದಲಾವಣೆಗಳಲ್ಲಿ ತೂಕ ಹೆಚ್ಚಾಗುವುದು ಕೂಡ ಒಂದು. ಅನಿಯಮಿತ ಆಹಾರ ಸೇವನೆ, ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗದೆ ಇದ್ದಾಗ, ಹಾರ್ಮೋನ್ ಕೊರತೆಯಿಂದಾಂಗಿಯೂ ಕೂಡ ತೂಕ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ. ತೂಕ ಕಡಿಮೆ ಮಾಡಿಕೊಳ್ಳೋದು ಹೇಗೆ ಎನ್ನುವ ಚಿಂತಗೆ ಫುಲ್ ಸ್ಟಾಪ್ ಇಟ್ಟು ಮುಂದೆ ಓದಿ.. ನಿಮಗೆ ತಿಳಿಯುತ್ತದೆ. ತೂಕ ಕಡಿಮೆ ಮಾಡಿಕೊಳ್ಳೋದು ಹೇಗೆ ಅಂತ..?

ತೆಂಗಿನ ಎಣ್ಣೆ ಮತ್ತು ಅಕ್ಕಿಯನ್ನು ಬಳಸಿ- ಅಕ್ಕಿ ಮತ್ತು ತೆಂಗಿನ ಎಣ್ಣೆಯನ್ನು ಬಳಸಿ ಮಾಡುವ ರೆಸಿಪಿ ನಿಮ್ಮ ತೂಕವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗುತ್ತದೆ.  

ತೆಂಗಿನ ಎಣ್ಣೆ ಮತ್ತು ಅಕ್ಕಿಯ ರೆಸಿಪಿ ಮಾಡುವುದು ಹೇಗೆ?

ಪ್ಯಾನ್‎ ಗೆ ಸ್ವಲ್ಪ ನೀರನ್ನು ಹಾಕಿ ಕಾಯಿಸಿಕೊಳ್ಳಿ , ನಂತರ ಕಾದ ನೀರಿಗೆ ಒಂದು ಚಮಚ ತೆಂಗಿನ ಎಣ್ಣೆಯನ್ನು ಹಾಕಿ ಚೆನ್ನಾಗಿ ಕಲಸಿ, ಆ ಮಿಶ್ರಣಕ್ಕೆ ½ ಕಪ್ ಅಕ್ಕಿಯನ್ನು ಬೆರಸಿ, ಆ ನೀರಿನಲ್ಲಿ ಅಕ್ಕಿ ಚೆನ್ನಾಗಿ ಬೇಯಲಿ. ಬೆಂದ ಮೇಲೆ ಆ ಮಿಶ್ರಣವನ್ನು ಸುಮಾರು 12 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿ ಇಡಿ. ತದ ನಂತರ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಮಿಶ್ರಣವನ್ನು ಸೇವಿಸಿದರೆ ಬೇಗನೆ ನಿಮ್ಮ ತೂಕವನ್ನು ಕಳೆದುಕೊಳ್ಳಬಹುದು.

ನಿಂಬೆ ಮತ್ತು ನೀರು-  ನಿಂಬೆ ರಸವು ನಮ್ಮ ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸ್ವಲ್ಪ ಬೆಚ್ಚಗಿರುವ ನೀರಿಗೆ ಸ್ವಲ್ಪ ನಿಂಬೆ ರಸವನ್ನು ಹಾಕಿಕೊಂಡು ಬೆಳಗಿನ ಸಮಯದಲ್ಲಿ  ಪ್ರತಿನಿತ್ಯವೂ ಸೇವಿಸಿದರೆ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ.

ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿ- ದೇಹದ ತೂಕವನ್ನು ಹೆಚ್ಚಿಸುವಲ್ಲಿ ಸಕ್ಕರೆಯ ಅಂಶವು ಕೂಡ ಪ್ರಮುಖವಾಗುತ್ತದೆ.  ಹಾಗಾಗಿ ನಾವು ಬಳಸುವ ಆಹಾರದಲ್ಲಿ ಸಕ್ಕರೆಯ ಅಂಶವನ್ನು ಕಡಿಮೆ ಮಾಡಬೇಕು. ಸಕ್ಕರೆ ಮಿಶ್ರಿತಿ ಪದಾರ್ಥಗಳಾದ ಐಸ್‌ಕ್ರೀಂ, ಬೇಕರಿ ತಿಂಡಿಗಳು ಮತ್ತು ಸಿಹಿತಿಂಡಿಗಳ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಬೇಕು.

ವರ್ಕೌಟ್ ಮತ್ತು ಯೋಗ- ಪ್ರತಿದಿನ ವರ್ಕ್ ಔಟ್ ಮಾಡುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.ಅದೇ ರೀತಿ ಯೋಗವನ್ನು ಕೂಡ ಮಾಡಿ ತೂಕ ಇಳಿಸಿಕೊಳ್ಳಬಹುದು.ಯೋಗವು ಕೇವಲ ದೇಹದ ತೂಕವನ್ನಷ್ಟೆ ಕಡಿಮೆ ಮಾಡುವುದಿಲ್ಲ ಅದರ ಜೊತೆಗೆ ಮನಸಿನ ನೆಮ್ಮದಿಯನ್ನು ಸುಧಾರಿಸುತ್ತದೆ.ಅದೇ ರೀತಿ ಒತ್ತಡವನ್ನು ಕೂಡ ಕಡಿಮೆ ಮಾಡಿ ದೇಹವು ಸ್ಥಿರತೆಯಿಂದ  ಇರುವಂತೆ ಮಾಡುತ್ತದೆ.

ಗ್ರೀನ್ ಟೀ ಬಳಸಿ- ಗ್ರೀನ್ ಟೀ ತೂಕ ತಗ್ಗಿಸಲು ಬಹಳ ಪರಿಣಾಮಕಾರಿ ಎಂದು ಹೇಳಬಹುದು. ಹಾಗು ಇದು ಯಾವುದೇ ರೀತಿಯ ತೂಕ ತಗ್ಗಿಸುವ ಮಾತ್ರೆಗಳ ಸಹಾಯವಿಲ್ಲದೆ ದೇಹದ ತೂಕ ತಗ್ಗಿಸಲು ಸಹಕಾರಿಯಾಗುತ್ತದೆ. ಉತ್ತಮ ಗುಣಮಟ್ಟದ ಹಸಿರು ಚಹಾ ಎಲೆಗಳನ್ನು ಕುದಿಯುವ ನೀರಿನಲ್ಲಿ ಹಾಕಿ. ನಂತರ ಒಂದೆರಡು ನಿಮಿಷ ಚೆನ್ನಾಗಿ ಕುದಿಸಬೇಕು. ನಂತರ ಗ್ರೀನ್ ಟೀ ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ. ಹೀಗೆ ಪ್ರತಿ ದಿನ ಎರಡು ಮೂರು ಸಲ ಮಾಡಿದಲ್ಲಿ ಕೆಲವೇ ದಿನಗಳಲ್ಲಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಊಟದ ಸೇವನೆ ಸರಿಯಿರಬೇಕು-  ಸರಿಯಾದ ಸಮಯಕ್ಕೆ ಆಹಾರ ನಮ್ಮ ದೇಹಕ್ಕೆ ಸೇರಬೇಕು. ತಿಂಡಿ ಬಿಡುವುದು, ಊಟ ಬಿಡುವುದು ಹೀಗೆ ಮಾಡಿದರೆ ದೇಹದಲ್ಲಿ ಅಸಮತೋಲನ ಸ್ಥಿತಿಯು ಹೆಚ್ಚಾಗಿ ಅನಾರೋಗ್ಯಕ್ಕೆ ತುತ್ತಾಗುವ ಸಾದ್ಯತೆಯು ಇರುತ್ತದೆ. ಊಟವನ್ನು ಬಿಟ್ಟರೆ ತೂಕ ಹೆಚ್ಚಾಗುವ ಸಾಧ್ಯತೆಯು ಇರುತ್ತದೆ. ಹಾಗಾಗಿ ಸರಿಯಾದ ಸಮಯಕ್ಕೆ ಊಟವನ್ನು ಮಾಡಿ.

ದಿನ ಹಸನ್ಮುಖಿಯಾಗಿರಬೇಕು- ನಗುವುದರಿಂದ ನಮ್ಮ ಜೀವನ ಸುಖಮಯವಾಗಿರುತ್ತದೆ. ಅಷ್ಟೆ ಅಲ್ಲದೆ ನಗುವುದರಿಂದ ನಮ್ಮ ದೇಹದಲ್ಲಿರುವ ಕ್ಯಾಲೋರಿ ಕಡಿಮೆಯಾಗಿ ದೇಹದ ತೂಕ ಕಡಿಮೆಯಾಗುತ್ತದೆ. ಕಡಿಮೆ ಅಂದರೂ ನಗುವುದರಿಂದ 40 ರಷ್ಟು ಕ್ಯಾಲೋರಿಗಳು ಕಡಿಮೆಯಾಗುತ್ತವೆ. ಹಾಗಾಗಿ ದಿನ ನೀವು ನಗಿ ಇತರರನ್ನು ಕೂಡ ನಗಿಸಿ.

ದೇಹದ ತೂಕ ಹೆಚ್ಚಾದರೆ ನಾನಾ ಸಮಸ್ಯೆಗಳು ಎದುರಾಗುತ್ತವೆ.ಕೆಲವೊಮ್ಮೆ ದೇಹದ ತೂಕ ಹೆಚ್ಚಾಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯು ಹೆಚ್ಚಿರುತ್ತದೆ. ಹಾಗಾಗಿ ಈ ಮೇಲಿನ ಟಿಪ್ಸ್ ಗಳನ್ನು ಬಳಸಿಕೊಂಡ ದೇಹದ ತೂಕವನ್ನು ಕಡಿಮೆಮಾಡಿಕೊಳ್ಳಿ. ಈ ವಿಷಯವನ್ನು ನೀವು  ತಿಳಿದುಕೊಂಡು ಇತರರಿಗೂ ಕೂಡ ಷೇರ್ ಮಾಡಿ.

Edited By

Manjula M

Reported By

Manjula M

Comments