ಆರೋಗ್ಯದ ಅಕ್ಷಯ ಪಾತ್ರೆ ಈ ಕಿವಿ ಹಣ್ಣು..! ಇದರ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಿ…

09 Jun 2018 1:32 PM | Health
3954 Report

ಸಾಮಾನ್ಯವಾಗಿ ನಮ್ಮ ದೇಹಕ್ಕೆ ಪೌಷ್ಟಿಕಾಂಶದ ಅಗತ್ಯತೆ ಹೆಚ್ಚಾಗಿರುತ್ತದೆ.ಲೈಫ್ ಸ್ಟೈಲ್ ಬದಲಾಗಿಯೋ ಅಥವಾ ಒತ್ತಡದ ಬದುಕಿನ ಮಧ್ಯೆ ದೇಹಾಲಸ್ಯ ಆಗೋದು ಕಾಮನ್.. ಆರೋಗ್ಯವನ್ನು ಸರಿ ಪಡಿಸಿಕೊಳ್ಳಲು ವೈದ್ಯರ ಬಳಿ ಹೋದರೆ, ಅವರು ಹೇಳೋದು ಒಂದೆ.. ತರಕಾರಿ ಸೊಪ್ಪು ಮತ್ತು ಹಣ್ಣುಗಳನ್ನು ಚೆನ್ನಾಗಿ ತಿನ್ನಬೇಕು ಎಂದು.. ಆದರೆ ಸಾಮಾನ್ಯವಾಗಿ ಹಣ್ಣು ಎಂದ ತಕ್ಷಣ ಎಲ್ಲರಿಗೂ ನೆನಪಾಗೋದು ಸೇಬು,ಕಿತ್ತಳೆ, ಮೋಸಂಬಿ ದ್ರಾಕ್ಷಿ ..ಆದರೆ ಅದನ್ನೆಲ್ಲಾ ಬಿಟ್ಟು ಅತ್ಯಧಿಕ ಪೋಷಕಾಂಶವುಳ್ಳ ಹಣ್ಣು ಎಂದರೆ ಅದು ಕಿವಿ ಹಣ್ಣು..

ಎಸ್.. ಕಿವಿ ಹಣ್ಣಿನ ಬಗ್ಗೆ ಸಾಮಾನ್ಯವಾಗಿ ಯಾರಿಗೂ ತಿಳಿದಿರುವುದಿಲ್ಲ. ಈ ಹಣ್ಣು ಮೂಲತಹ ಚೀನಾ ಹಣ್ಣು. ಪ್ರಾಚೀನ ಕಾಲದಿಂದಲೂ ಕೂಡ ಇದರಲ್ಲಿ ಅತ್ಯಧಿಕ ಔಷಧೀಯ ಗುಣಗಳಿವೆ. ಇತಿಹಾಸದ ಪ್ರಕಾರ ನೋಡುವುದಾದರೆ ಈ ಕಿವಿ ಹಣ್ಣನ್ನು ನ್ಯೂಜಿಲೆಂಡ್ ನ ರಾಷ್ಟ್ರೀಯ ಹಣ್ಣು ಎಂದು ಕೂಡ ಕರೆಯುತ್ತಿದ್ದರು.ಮೊದಲು ಈ ಹಣ್ಣುಗಳನ್ನು ಚೀನಿ ಗೂಸ್ ಬೆರ್ರಿ ಎನ್ನುತ್ತಿದ್ದರು.ನಂತರದ ದಿನಗಳಲ್ಲಿ ಕಿವಿ ಹಣ್ಣು ಎಂದು ಜಗತ್ತಿಗೆ ಪರಿಚಯವಾಯಿತು. ಈ ಹಣ್ಣಿನ ಉಪಯುಕ್ತತೆಯನ್ನು ತಿಳಿದುಕೊಳ್ಳೋಣ ಬನ್ನಿ..  ಈ ಹಣ್ಣಿನಲ್ಲಿ ವಿಟಮಿನ್ ‘ಸಿ’, ವಿಟಮಿನ್ ‘ಇ’ ನಾರಿನಾಂಶ ಇರುತ್ತದೆ. ವಿಟಮಿನ್ ಸಿ ದೇಹದಲ್ಲಿರುವ ಅಸ್ತಮಾದಂತಹ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಜೊತೆಗೆ ಉಸಿರಾಟದ ತೊಂದರೆಗಳು ಬರದಂತೆ ತಡೆಯುತ್ತದೆ ಅಷ್ಟೆ ಅಲ್ಲದೆ  ವಿಟಮಿನ್ ಇ ಇರುವುದರಿಂದ ತ್ವಚೆ ಹಾಗು ಹೃದಯದ ಆರೋಗ್ಯಕ್ಕೆ ಈ ಹಣ್ಣು ಒಳ್ಳೆಯದು. ಜೊತೆಗೆ ಕಿವಿ ಹಣ್ಣಿನಲ್ಲಿ ಇತರ ಹಣ್ಣಿನಲ್ಲಿರುವುದಕ್ಕಿಂತ ಅಧಿಕ ಪ್ರಮಾಣದ ಫಾಲಿಕ್ ಆಸಿಡ್ ಇರುವುದರಿಂದ ಗರ್ಭಿಣಿಯರಿಗೆ ಒಳ್ಳೆಯದು ಮತ್ತು ಹೆರಿಗೆಯ ನಂತರ ಇದನ್ನು ತಿನ್ನುವುದು ಕೂಡ ಒಳ್ಳೆಯದು.

ನಿದ್ರಾಹೀನತೆಯನ್ನು ಹೋಗಲಾಡಿಸುತ್ತದೆ:ಕಿವಿ ಹಣ್ಣು ಅನೇಕ ರೀತಿಯ ಔಷಧಿಯ ಗುಣಗಳನ್ನು ಹೊಂದಿದ್ದು ನಿದ್ರಾಹೀನತೆಯನ್ನು ಹೋಗಲಾಡಿಸುತ್ತದೆ.ಈ ಹಣ್ಣಿನಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗಿದೆ. ಅಷ್ಟೆ ಅಲ್ಲದೆ ಸೆರೋಟೋನಿಸ್ ಎಂಬ ಅಂಶವು ಕಿವಿ ಹಣ್ಣಿನಲ್ಲಿದ್ದು ನಿದ್ರಾಹೀನತೆಯನ್ನು ಹೋಗಲಾಡಿಸಲು ಸಹಕರಿಸುತ್ತದೆ.

ಹೃದಯದ ಸಮಸ್ಯೆಗೆ ಒಳ್ಳೆಯದು:ಈ ಹಣ್ಣು ನೋಡಲು ಒಂಥರ ವಿಚಿತ್ರವಾಗಿದ್ದು, ಹಲವಾರು ರೀತಿಯ ರೋಗಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಯುನಿವರ್ಸಿಟಿ ಆಫ್ ಲೀಡ್ಸ್ ನಡೆಸಿದ ಅಧ್ಯಯನವೊಂದರ ಪ್ರಕಾರ, "ನಾರಿನಾಂಶವಿರುವ ಆಹಾರ ಸೇವನೆಯು ಹೃದಯರಕ್ತನಾಳದ ಕಾಯಿಲೆ (ಸಿವಿಡಿ) ಮತ್ತು ಪರಿಧಮನಿಯ ಹೃದಯ ಕಾಯಿಲೆ (ಸಿಹೆಚ್’ಡಿ) ಯ ಅಪಾಯಗಳನ್ನು ಕಡಿಮೆ ಮಾಡುತ್ತದೆ”  ಎಂದು ತಿಳಿದು ಬಂದಿದೆ.

ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ:ಕಿವಿ ಹಣ್ಣು ಆಕ್ಟಿನಿಡೈನ್ ಎಂದು ಕರೆಯಲ್ಪಡುವ ಕಿಣ್ವವನ್ನು ಹೊಂದಿರುತ್ತದೆ, ಇದು ಪಪ್ಪಾಯಿಯಲ್ಲಿರುವ ಪಾಪೈನ್ ನಂತೆಯೇ ಇರುತ್ತದೆ. ಈ ಆಕ್ಟಿನಿಡೈನ್ ದೇಹದಲ್ಲಿ ಪ್ರೋಟೀನ್ ಗಳ  ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಅಷ್ಟೆ ಅಲ್ಲದೆ ಕರುಳಿನ ಸಿಂಡ್ರೋಮ್ನಿಂದ ಬಳಲುತ್ತಿರುವ ರೋಗಿಗಳಿಗೆ ಕಿವಿ ಹಣ್ಣು ತುಂಬಾ ಸಹಾಯಕಾರಿ. 

ಗರ್ಭಿಣಿಯರಿಗೆ ಪ್ರಯೋಜನಕಾರಿ :ಔಷಧಿಯ ಗುಣಗಳನ್ನು ಹೊಂದಿರುವ ಕಿವಿ ಹಣ್ಣು ಗರ್ಭಿಣಿಯರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಈ ಹಣ್ಣು ತಿನ್ನುವುದರಿಂದ ಭ್ರೂಣದಲ್ಲಿರುವ ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಗಾಗಿ ಗರ್ಭಿಣಿಯರು ಈ ಹಣ್ಣನ್ನು ಸೇವಿಸಿದರೆ ಒಳ್ಳೆಯದು.  

ಸುಂದರ ತ್ವಚೆಯನ್ನು ಪಡೆಯಬಹುದು:ಈ ಹಣ್ಣನ್ನು ಸೇವಿಸುವುದರಿಂದ ಆರೋಗ್ಯವಷ್ಟೆ ಅಲ್ಲ.. ನಮ್ಮ ತ್ವಚೆಯನ್ನು ಕೂಡ ಸುಂದರವಾಗಿರಿಸುತ್ತದೆ. ಈ ಹಣ್ಣನ್ನು ಸೇವಿಸುವುದರಿಂದ ಚರ್ಮದಲ್ಲಿ ಸುಕ್ಕು ಬರುವುದನ್ನು ಹೋಗಲಾಡಿಸುತ್ತದೆ. ಚರ್ಮ ಒಣಗುವುದನ್ನು ಕೂಡ ಕಡಿಮೆ ಮಾಡುತ್ತದೆ . ಹಾಗಾಗಿ ಈ ಹಣ್ಣಿನ ಸೇವನೆ ಚರ್ಮಕ್ಕೂ ಕೂಡ ತುಂಬಾ ಒಳ್ಳೆಯದು. 

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ:ಇದರಲ್ಲಿ ನಾರಿನಂಶ ಅಧಿಕ ಇರುವುದರಿಂದ ಮಲಬದ್ಧತೆ, ಅಜೀರ್ಣತೆ ಸಮಸ್ಯೆ ನಿವಾರಣೆಯಾಗುವುದು. ಅಷ್ಟೆ ಅಲ್ಲದೆ ನಾರಿನಂಶವು ದೇಹದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಕಿವಿ ಹಣ್ಣನ್ನು ತಿನ್ನುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. 

ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಾಯಕಾರಿ: ಕಿವಿಫ್ರೂಟ್ ಸಾಂಪ್ರದಾಯಿಕವಾಗಿ ಚೀನೀಯರ ಔಷಧಿಗಳಲ್ಲಿ ಒಂದಾಗಿದೆ. ಕ್ಯಾನ್ಸರ್, ಸ್ತನ ಕ್ಯಾನ್ಸರ್, ಹೊಟ್ಟೆ ಕ್ಯಾನ್ಸರ್ ಮತ್ತು ಶ್ವಾಸಕೋಶದ ಕ್ಯಾನ್ಸರ್  ಈ ರೀತಿಯ ಕ್ಯಾನ್ಸರ್ ಗಳನ್ನು ಗುಣಪಡಿಸುವಲ್ಲಿ ಪರಿಣಾಮಕಾರಿಯಾಗಿದೆ. ಕ್ಯಾನ್ಸರ್ ಕೋಶಗಳಿಗೆ ಹಾನಿಕಾರಕವಾಗುವ ಮೂಲಕ ಕ್ಯಾನ್ಸರ್ ವಿರುದ್ಧ ಕಿವಿ ಹಣ್ಣು ಕೆಲಸ ಮಾಡುತ್ತದೆ. ಕಿವಿ ಹಣ್ಣನ್ನು ಕೆಲವರು ತಿನ್ನಲು ಹಿಂಜರಿಯುತ್ತಾರೆ.ಇದರಲ್ಲಿರುವ ಔಷಧಿಯ ಗುಣಗಳನ್ನು ತಿಳಿದುಕೊಂಡ ಮೇಲೆ ಯಾರು ಕೂಡ ಕಿವಿ ಹಣ್ಣನ್ನು ತಿನ್ನದೆ ಇರಲಾರರು.ಹಣ್ಣಿನ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಂಡಿದ್ದಿರಿ. ಈ ಹಣ್ಣಿನಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ನೀವು ತಿಳಿದುಕೊಂಡು ಇತರರಿಗೂ ಷೇರ್ ಮಾಡಿ.

Edited By

Manjula M

Reported By

Manjula M

Comments