ಕೂದಲಿನ ಸಮಸ್ಯೆ ಕಾಡುತ್ತಿದ್ಯಾ..? ಹಾಗಾದ್ರೆ ಈ ಸುಲಭವಾದ ಮನೆಮದ್ದುಗಳನ್ನು ಬಳಸಿ.!

08 Jun 2018 1:21 PM | Health
1244 Report

ಕೂದಲು ಉದುರುವುದಕ್ಕೆ ಸಾಮಾನ್ಯವಾಗಿ ಹಲವಾರು ಕಾರಣಗಳಿರುತ್ತವೆ.ಹೆಚ್ಚು ಚಿಂತೆ ಮಾಡುವುದರಿಂದ, ಸರಿಯಾಗಿ ಕೂದಲ ಆರೈಕೆ ಮಾಡದೆ ಇರುವುದರಿಂದ, ಸರಿಯಾದ ಸಮಯಕ್ಕೆ  ಎಣ್ಣೆ ಹಾಕದೆ ಇರುವುದರಿಂದ ಮುಂತಾದ ಕಾರಣಗಳಿಗೆ ಕೂದಲಿನ ಸಮಸ್ಯೆ ಉಂಟಾಗುತ್ತದೆ,ಇದೆಲ್ಲದರ ನಡುವೆ  ಕೆಲವರಿಗೆ ವಯಸ್ಸಾಗುತ್ತ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ.ಮತ್ತೆ ಕೆಲವರಿಗೆ ಚಿಕ್ಕ ವಯಸ್ಸಿಗೆ ಕೂದಲು ಉದುರುವ ಸಮಸ್ಯೆ ಕಂಡಬರುತ್ತದೆ. ಇದಕ್ಕೆಲ್ಲಾ ನಾವು ದುಬಾರಿ ಶಾಂಪುಗಳನ್ನು ಅಥವಾ ಔಷಧಿಗಳನ್ನು ಬಳಸುವ ಅವಶ್ಯಕತೆ ಇಲ್ಲ. ಅದರ ಬದಲಾಗಿ ಮನೆಯಲ್ಲಿಯೆ ನೈಸರ್ಗಿಕವಾಗಿ ಹೇರ್ ಫಾಲ್ ಆಗುವುದನ್ನು ತಡೆಗಟ್ಟಬಹುದು.

ಕೂದಲಿಗೆ ಅವಶ್ಯಕವಾಗಿರುವಂತಹ ಎಣ್ಣೆಯನ್ನು ಬಳಸಿ

ತಲೆಯ ಮಧ್ಯಭಾಗಕ್ಕೆ ಅಂದರೆ ನೆತ್ತಿಗೆ ಎಣ್ಣೆಯಿಂದ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ರಕ್ತ ಪರಿಚಲನೆಯು ಸರಿಯಾದ ರೀತಿಯಲ್ಲಿ ಆಗುತ್ತದೆ. ಎಣ್ಣೆಯನ್ನು ನೆತ್ತಿಯ ಮೇಲೆ ಹಾಕಿ ಕೈಗಳಿಂದ ಮೃದುವಾಗಿ ಮಸಾಜ್ ಮಾಡಬೇಕು. ನಿಮಗೆ ಯಾವುದು ಸೂಕ್ತ ಎನಿಸುವುದೋ ಆ ಎಣ್ಣೆಯನ್ನು ಬಳಸಿ

ಮೊಟ್ಟೆ ಎಣ್ಣೆ ಬಳಕೆ

ಈ ಮೊಟ್ಟೆಯ ಎಣ್ಣೆಯು, ಕೂದಲು ಉದುರುವುದು, ತಲೆಹೊಟ್ಟು ಸಮಸ್ಯೆ,ನೆರೆಕೂದಲು ಬರುವುದನ್ನು ತಡೆಗಟ್ಟುತ್ತದೆ. ಮೊಟ್ಟೆ ಎಣ್ಣೆಯನ್ನು  ನೆತ್ತಿಗೆ ಹಾಕಿ ಮಸಾಜ್ ಮಾಡಿ ಒಂದು ರಾತ್ರಿ ಹಾಗೆ ಬಿಡಬೇಕು. ನಂತರ ಬೆಳ್ಳಿಗೆ ಎದ್ದು ಸಲ್ಫೇಟ್ ಮುಕ್ತ ಶಾಂಪುವಿನಿಂದ ಕೂದಲನ್ನು ಶುಚಿಗೊಳಿಸಬೇಕು. ವಾರದಲ್ಲಿ 2-3 ಬಾರಿ ಈ ಮೊಟ್ಟೆಯ ಎಣ್ಣೆಯನ್ನು ಬಳಸುವುದರಿಂದ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು.

ಬಿಸಿ ಮಾಡಿದ ಎಣ್ಣೆಯನ್ನು ಬಳಸಿ

ಕೂದಲಿಗೆ ಎಣ್ಣೆಯನ್ನು ಹಚ್ಚುವಾಗ ಸ್ವಲ್ಪ ಬಿಸಿ ಮಾಡಿಕೊಂಡು ಹಚ್ಚಬೇಕು. ಹೀಗೆ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.ಎಣ್ಣೆಯನ್ನುಹೆಚ್ಚು ಬಿಸಿ ಮಾಡಬಾರದು.40 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚು ಬಿಸಿ ಮಾಡಬಾರದು. ನಂತರ ಬಿಸಿ ಮಾಡಿದ ಎಣ್ಣೆಯನ್ನು ನೆತ್ತಿಯ ಭಾಗಕ್ಕೆ ಹಾಕಿ ಮಸಾಜ್ ಮಾಡಬೇಕು. ಸುಮಾರು ಒಂದು ಗಂಟೆಗಳ ಕಾಲ ಹಾಗೆಯೆ ಬಿಟ್ಟು ನಂತರ ಸ್ನಾನ ಮಾಡಿ.

ಮೆಹಂದಿಯಿಂದ ಕೂದಲನ್ನು ರಬ್ ಮಾಡಿ

ಕೂದಲಿನ ಆರೈಕೆಯಲ್ಲಿ ಮೆಹಂದಿ ತುಂಬಾ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮೆಹಂದಿಯನ್ನು ಹಚ್ಚುವುದರಿಂದ  ಕೂದಲು ಮೂಲದಿಂದಲೆ ಬಲಿಷ್ಟವಾಗುತ್ತದೆ. ಅತಿಯಾಗಿ ಬಣ್ಣವನ್ನು ಹೊಂದಿರುವ ಮೆಹಂದಿಯನ್ನು ಬಳಸಬೇಡಿ. ಏಕೆಂದರೆ ಅಂತಹ ಮೆಹಂದಿಗಳಲ್ಲಿ ಪಿ-ಫೆನಿಲಿನೇಮಿಯಾನ್ ಎಂಬ ರಾಸಾಯನಿಕ ಅಂಶ ಇರುತ್ತದೆ. ಇದರಿಂದ ಕೂದಲಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.

ಇದೆಲ್ಲದರ ಜೊತೆಗೆ ನಿಮ್ಮ ಲೈಫ್ ಸ್ಟೈಲ್ ಅನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ.

1. ಪ್ರೋಟೀನ್ ಆಹಾರ ಮತ್ತು ತರಕಾರಿಗಳನ್ನು ಹೆಚ್ಚಾಗಿ ಬಳಸಬೇಕು. ಮಾಂಸ, ಮೀನು, ಸೋಯಾ, ಅಥವಾ ಇತರ ಪ್ರೋಟೀನ್ ಇರುವ ಆಹಾರಗಳನ್ನು ತಿನ್ನುವುದರಿಂದ ಕೂದಲಿಗೆ ತುಂಬಾ ಸಹಾಯಕಾರಿ. ಪೋಷಕಾಂಶವುಳ್ಳ ಆಹಾರ ಸೇವಿಸಿದರೆ ಕೂದಲಿಗೆ ಬೇಕಾದ ಜೀವಸತ್ವಗಳನ್ನು ಪಡೆಯಬಹುದು.

2. ಕೂದಲನ್ನು ಸಲ್ಫೇಟ್ ಮುಕ್ತ ಶಾಂಪುವಿನಿಂದ ಸ್ವಚ್ಚಗೊಳಿಸಿ. ಅತೀ ಹೆಚ್ಚಾಗಿ ಶಾಂಪುವನ್ನು ಬಳಸಬೇಡಿ. ಹೆಚ್ಚಾಗಿ ಶಾಂಪು ಬಳಸುವುದರಿಂದಲೂ ಕೂಡ ಹೇರ್ ಫಾಲ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಸ್ನಾನ ಮಾಡಿದ ನಂತರ ಕೂದಲನ್ನು ಚೆನ್ನಾಗಿ ಒಣಗಿದ ಟವೇಲ್ ನಿಂದ ಒರೆಸಿಕೊಳ್ಳಿ. ಆದರೆ ತುಂಬಾ ಜೋರಾಗಿ ಒರೆಸಿಕೊಳ್ಳುವುದರಿಂದ ಕೂದಲ ಉದುರಬಹುದು. 

3. ಧ್ಯಾನ ಮಾಡುವುದರಿಂದ ಕೂಡ ಒತ್ತಡ ಕಡಿಮೆಯಾಗಿ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ. ದಿನಕ್ಕೆ 30 ರಿಂದ 60 ನಿಮಿಷಗಳ ಕಾಲ ಧ್ಯಾನ, ವಾಕ್ , ಈಜು ಈ ರೀತಿಯಾಗಿ ಮಾಡುವುದರಿಂದ ಕೂದಲಿನ ಸಮಸ್ಯೆ ಕಡಿಮೆಯಾಗುತ್ತದೆ. 

ಇನ್ನೂ ಮುಂದೆ ಕೂದಲಿನ ಸಮಸ್ಯೆಯ ಬಗ್ಗೆ ಹೆಚ್ಚು ಚಿಂತೆ ಮಾಡಬೇಡಿ.. ಚಿಂತೆ ಮಾಡಿದಷ್ಟು ಕೂದಲು ಉದುರುವುದು ಹೆಚ್ಚಾಗುತ್ತದೆ. ಆದ್ದರಿಂದ ಈ ಮೇಲಿನ ಮನೆಮದ್ದುಗಳನ್ನು ಬಳಸಿ ಹಾಗೂ ನಿಮ್ಮ ಲೈಫ್ ಸ್ಟೈಲ್ ಅನ್ನು ಬದಲಾಯಿಸಿಕೊಳ್ಳಿ.

Edited By

Manjula M

Reported By

Manjula M

Comments