ಮಾವಿನ ಹಣ್ಣಿನಲ್ಲಿದೆ ನಮ್ಮ ಆರೋಗ್ಯ ಕಾಪಾಡುವ ಅಂಶಗಳು..!

07 Jun 2018 1:54 PM | Health
1405 Report

ಬೇಸಿಗೆಯ ಸೀಜನ್ ನಲ್ಲಿ ಮಾರುಕಟ್ಟೆಗೆ ಬರುವ ಹಣ್ಣುಗಳಲ್ಲಿ ಈ ಮಾವಿನ ಹಣ್ಣು ಕೂಡ ಒಂದು.. ಈ ಮಾವಿನ ಹಣ್ಣನ್ನು ಎಲ್ಲರೂ ಕೂಡ ಇಷ್ಟ ಪಡುತ್ತಾರೆ. ಇದರ ವೈಜ್ಞಾನಿಕ ಹೆಸರು ಮಾವಿನೀರಾ ಇಂಡಿಕಾ..ಅಷ್ಟೆ ಅಲ್ಲದೆ ಇದು ನಮ್ಮ ದೇಶದ ರಾಷ್ಟ್ರೀಯ ಹಣ್ಣಾಗಿದೆ. ಈ ಹಣ್ಣು ಕೂಡ ನಮ್ಮ ದೇಹಕ್ಕೆ ಸಾಕಷ್ಟು ವಿಟಮಿನ್ ಗಳನ್ನು ಒದಗಿಸುತ್ತದೆ. ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ತುಂಬಾ ಪ್ರಮುಖ ಪಾತ್ರವನ್ನು ವಹಿಸಿತ್ತದೆ.

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಮಾವಿನ ಹಣ್ಣು ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಮಾವಿನಲ್ಲಿ ಪೆಕ್ಟಿನ್ ಅಂಶ ಅತ್ಯಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ದೇಹದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಪೆಕ್ಟಿನ್ ಅಂಶ ಪ್ರೊಸ್ಟ್ರೇಟ್ ಕ್ಯಾನ್ಸರ್ ವಿರುದ್ಧ ಹೋರಾಡುವಂತೆ ಮಾಡುತ್ತದೆ.ಪೆಕ್ಟಿನ್ ಸೀರಮ್ ದೇಹದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಅನ್ನು ಕಡಿಮೆ ಮಾಡುತ್ತದೆ. ನಮ್ಮ ದೇಹದಲ್ಲಿರುವ ಸಾಂದ್ರತೆಯನ್ನು ಹೆಚ್ಚಿಸುವ ಶಕ್ತಿಯನ್ನು ಮಾವಿನ ಹಣ್ಣು ಹೊಂದಿರುತ್ತದೆ.

ಮಧುಮೇಹಿಗಳಿಗೆ ಇದು ಸಹಾಯಕಾರಿ

ಮಾವಿನ ಹಣ್ಣಿನಲ್ಲಿ ಫೈಬರ್ ಮತ್ತು ಮ್ಯಾನಿಫೆರಿನ್ ಅಂಶ ಹೆಚ್ಚಾಗಿ ಇರುವುದರಿಂದ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ.  ಮಾವಿನಹಣ್ಣು ಸಂಶೋಧನೆಗಳ ಪ್ರಕಾರ ಪ್ರಾಕೃತಿಕವಾಗಿ ಮಧುಮೇಹದ ಮೇಲೆ ಹೋರಾಡುವ ಗುಣಗಳನ್ನು ಹೊಂದಿದೆ ಎಂದು ಸಾಬೀತಾಗಿದೆ. ಮಧುಮೇಹಿಗಳು ಮಾವಿನ ಹಣ್ಣನ್ನು ತಿನ್ನಬಾರದು ಎಂದು ಹೇಳುವುದು ಅದು ಹೆಚ್ಚು ಸಿಹಿ ಇರುತ್ತದೆ ಎನ್ನುವ ಕಾರಣಕ್ಕೆ ಅಷ್ಟೆ. ಮಧುಮೇಹಿಗಳು ಸಿಹಿಗೆ ಭಯಪಡುವುದು ಸಾಮಾನ್ಯ. ಆದರೆ ಕೆಲವೊಂದು ಸಂಶೋಧನೆಗಳು ಇದರಲ್ಲಿರುವ ಅಂಶಗಳು ಮಧುಮೇಹವನ್ನು ತಡೆಯಲು ಸಹಕರಿಸುತ್ತವೆ ಎಂದು ತಿಳಿಸಿದ್ದಾರೆ. ಅಷ್ಟೆ ಅಲ್ಲದೆ ಇದರಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗಿರುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ

ಮಾವಿನಹಣ್ಣಿನಲ್ಲಿರುವ ಫೈಬರ್ ಅಂಶವು ನಮ್ಮ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಮಾವಿನ ಹಣ್ಣಿನಲ್ಲಿರುವ ನಾರಿನ ಅಂಶವು ಜೀರ್ಣಾಂಗವ್ಯೂಹವನ್ನು ಸ್ವಸ್ತವಾಗಿ ಇಡುವಂತೆ ನೋಡಿಕೊಳ್ಳುತ್ತದೆ. ಕರುಳಿನ ಪರಿಚಲನೆಯನ್ನು ಸುಗಮಗೊಳಿಸುವಂತೆ ಮಾಡುತ್ತದೆ.

ಕ್ಯಾನ್ಸರ್  ತಡೆಗಟ್ಟುವಲ್ಲಿ ಸಹಾಯಕಾರಿ

ಮಾವಿನಹಣ್ಣು ಕ್ಯಾನ್ಸರ್ ವಿರುದ್ದ ಕಾರ್ಯವನ್ನು ನಿರ್ವಹಿಸುತ್ತದೆ. ಸಾಮಾನ್ಯವಾಗಿ ಕೊಲೊನ್ ಮತ್ತು ಸ್ತನ ಕ್ಯಾನ್ಸರ್ ಗಳಲ್ಲಿ ಈ ಮಾವಿನ ಹಣ್ಣು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಶ್ವಾಸಕೋಶ, ಲ್ಯುಕೇಮಿಯಾ ಕ್ಯಾನ್ಸರ್ ಗಳ ವಿರುದ್ದವು ಪರಿಣಾಮಕಾರಿಯಾಗಿ ಈ ಮಾವಿನಹಣ್ಣು  ಕಾರ್ಯವನ್ನು ನಿರ್ವಹಿಸುತ್ತದೆ.

ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ

ಉತ್ತಮ ದೃಷ್ಟಿಗೆ ಉತ್ತೇಜನ ನೀಡುವಲ್ಲಿ ವಿಟಮಿನ್ ಎ ಪ್ರಮುಖ ಕಾರಣವಾಗಿದೆ, ರಾತ್ರಿ ಕುರುಡುತನವನ್ನು ತಡೆಗಟ್ಟುವುದರ ಜೊತೆಗೆ ಕಣ್ಣಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಮಾವಿನ ಹಣ್ಣುಗಳಲ್ಲಿ ವಿಟಮಿನ್ ಎ ಅಂಶವು ಸಮೃದ್ಧವಾಗಿದೆ, ಇದು ಕಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ಸೂಕ್ತವೆನಿಸುತ್ತದೆ, ಮತ್ತು ಕಣ್ಣುಗಳು ಒಣಗದಂತೆ ನೋಡಿಕೊಳ್ಳಲು ಮಾವಿನ ಹಣ್ಣಿನ ಸೇವನೆ ಸಹಕಾರಿಯಾಗುತ್ತದೆ.

ಚರ್ಮ ಮತ್ತು ಕೂದಲ ಸಮಸ್ಯೆಯನ್ನು ಸುಧಾರಿಸುತ್ತದೆ

ಮಾವಿನಹಣ್ಣಿನಲ್ಲಿರುವ ಒಂದು ಪ್ರಮುಖ ಪೋಷಕಾಂಶವಾದ ವಿಟಮಿನ್ ಎ, ಈ ವಿಟಮಿನ್  ಸೀರಮ್ ಉತ್ಪಾದನೆಗೆ ಬಹಳ ಅವಶ್ಯಕವಾಗಿರುತ್ತದೆ. ಈ ಸೀರಮ್ ಕೂದಲು ಬೆಳೆಯುವುದಕ್ಕೆ ಮತ್ತು ನಯವಾಗಿ ಇರುವುದಕ್ಕೆ ಸಹಾಯ ಮಾಡುತ್ತದೆ. ವಿಟಮಿನ್ ಎ ಕೂದಲು ಮತ್ತು ಚರ್ಮದ ಅಂಗಾಂಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮಾವಿನಹಣ್ಣುಗಳನ್ನು ತಿನ್ನುವುದರಿಂದ, ಮೊಡವೆಗಳು ಕಡಿಮೆಯಾಗುವುತ್ತವೆ. ಚರ್ಮದಲ್ಲಿರುವ ರಂಧ್ರಗಳನ್ನು ತೆರವುಗೊಳಿಸುವುದರ ಮೂಲಕ ಚರ್ಮವನ್ನು ಸುಸ್ಥಿರವಾಗಿರಿಸುತ್ತದೆ.

ಈ ಮಾವಿನ ಹಣ್ಣಿನ ಕಾಲ ಮುಗಿಯುತ್ತಾ ಬಂತು. ನೀವು ಕೂಡ ಮಾವಿನ ಹಣ್ಣನ್ನು ತಿಂದು ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ. ಮಾವಿನ ಹಣ್ಣಿನ ಮಹತ್ವವನ್ನು ನೀವು ತಿಳಿದುಕೊಂಡು ಇತರರಿಗೂ ಷೇರ್ ಮಾಡಿ.

Edited By

Manjula M

Reported By

Manjula M

Comments