ದಿನಕ್ಕೊಂದು ಕಪ್ ಬೀಟ್ರೋಟ್ ಜ್ಯೂಸ್ ಕುಡಿದು….ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ

01 Jun 2018 12:50 PM | Health
3634 Report

ಕೆಲವು ಜನ ತರಕಾರಿ ಅಂದರೆ ಇಷ್ಟ ಪಡ್ತಾರೆ.. ಇನ್ನೂ ಕೆಲವು ಜನ ತರಕಾರಿ ಅಂದರೆ ಮುಖ ತಿರುಗಿಸುತ್ತಾರೆ. ಅದರಲ್ಲೂ ಬೀಟ್ರೋಟ್ ಎಂದರೆ ಮುಖ ತಿರುಗಿಸೋರೇ ಜಾಸ್ತಿ. ಬೀಟ್ರೋಟ್ ಬಣ್ಣ ಕೆಂಪಗಿದೆ ಎಂಬ ಒಂದೇ ಒಂದು ಕಾರಣಕ್ಕೆ ಹೆಚ್ಚಿನವರು ಬೀಟ್ರೋಟ್ ನಿಂದ ದೂರ ಉಳಿಯುತ್ತಾರೆ. ಆದರೆ ನಿಜವಾಗಿಯೂ ಬೀಟ್ರೋಟ್ ಒಂದು ಅತ್ಯುತ್ತಮವಾದ ತರಕಾರಿಯಾಗಿದೆ. ಇದರ ಸೇವನೆಯಿಂದ ಹಲವಾರು ರೀತಿಯ ಪೋಷಕಾಂಶಗಳು ನಮ್ಮ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ.

ಹೃದಯವನ್ನು ಆರೋಗ್ಯವನ್ನು ಕಾಪಾಡುತ್ತದೆ

ಬೀಟ್ರೋಟ್ ರಸದಲ್ಲಿರುವ ನೈಟ್ರೇಟುಗಳು ರಕ್ತಪರಿಚಲನೆಯನ್ನು ಉತ್ತಮಗೊಳಿಸುವುದರ ಜೊತೆ ಜೊತೆಯಲ್ಲಿಯೇ  ಹೃದಯದ ಆರೋಗ್ಯವನ್ನೂ ಕೂಡ  ವೃದ್ಧಿಸುತ್ತದೆ. ವಿಶೇಷವಾಗಿ ಅಧಿಕ ರಕ್ತದೊತ್ತಡದಿಂದ ಬಳತ್ತಿರುವ ರೋಗಿಗಳಿಗೆ ಇದು ವರದಾನವಾಗಿದೆ. ಬೀಟ್ರೋಟ್ ಸೇವನೆಯಿಂದ ರಕ್ತನಾಳಗಳು ಸಡಿಲಗೊಂಡು ರಕ್ತಪರಿಚಲನೆ ಸುಗಮಗೊಳ್ಳುವಂತೆ ಮಾಡುತ್ತವೆ.

ಗೌರವರ್ಣದ ತ್ವಚೆಗಾಗಿ ಬೀಟ್ ರೋಟ್ ಬಳಸಿ

ಬೀಟ್ರೋಟ್ ಅನ್ನು ತುರಿದು ಹಿಂಡಿ ತೆಗೆದ ರಸವನ್ನು ದಿನ ನಿತ್ಯವೂ ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದರಲ್ಲಿರುವ ಪೋಷಕಾಂಶಗಳು ನಮ್ಮ ತ್ವಚೆಗೆ ಬಹಳಷ್ಟು ಸಹಕಾರಿಯಾಗುತ್ತದೆ.

ರಕ್ತವನ್ನು ಶುದ್ಧೀಕರಿಸುವಲ್ಲಿ ಸಹಕಾರಿ

ರಕ್ತಹೀನತೆಯಿಂದ ಬಳಲುತ್ತಿರುವ ಹದಿಹರೆಯದ ಹೆಣ್ಣುಮಕ್ಕಳು ಬೀಟ್ರೋಟ್ ರಸವನ್ನು ಸೇವಿಸಿದರೆ ಕೆಲವೇ ದಿನದಲ್ಲಿ ಗಮನಾರ್ಹ ಬದಲಾವಣೆಗಳು  ಕಂಡುಬಂದಿದೆ. ಬೀಟ್ರೋಟ್ ರಸದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣದ ಅಂಶ ಇರುವುದರಿಂದ ರಕ್ತದಲ್ಲಿ ಹೀಮೋಗ್ಲೋಬಿನ್ ಅಂಶ ಉತ್ಪತ್ತಿಗೊಳ್ಳಲು ಸಹಾಯವಾಗುತ್ತದೆ

ಗರ್ಭಿಣಿಯರ ಆರೋಗ್ಯ ವಿಷಯದಲ್ಲಿ ನೆರವಾಗುತ್ತದೆ

ಗರ್ಭಿಣಿಯರ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ಹೆಚ್ಚಿನ ಪ್ರಮಾಣದ ಕಬ್ಬಿಣದ ಅವಶ್ಯಕತೆ ಇರುತ್ತದೆ. ಅಷ್ಟೆ ಅಲ್ಲದೇ ಹೆಣ್ಣು ಮಕ್ಕಳ ಮುಟ್ಟಿನ ಸಮಯದಲ್ಲಿ ದೇಹದಲ್ಲಿ ಉಂಟಾಗುವ ಕಬ್ಬಿಣ ಅಂಶದ  ಕೊರತೆಯನ್ನು ನೀಗಿಸುತ್ತದೆ.

ಮೆದುಳಿನ ಕ್ಷಮತೆಯನ್ನು ಹೆಚ್ಚಿಸುವಲ್ಲಿ ಸಹಕಾರಿ

ಮೆದುಳಿಗೆ ಹರಿಯುವ ರಕ್ತದಲ್ಲಿ ನೈಟ್ರೇಟ್ ಆಕ್ಸೈಡ್ ಕೊರತೆಯ ಕಾರಣದಿಂದಾಗಿ ಮೆದುಳಿನ ಕ್ಷಮತೆಯು ಕಡಿಮೆಯಾಗುತ್ತಾ ಬರುತ್ತದೆ. ಇದರಿಂದ ಮೆದುಳಿನ ಜೀವಕೋಶಗಳಾದ ನ್ಯೂರಾನುಗಳು ಅಧಿಕ ಸಂಖ್ಯೆಯಲ್ಲಿ ಸಾಯುತ್ತಿರುತ್ತವೆ. ಬೀಟ್ರೋಟ್ ರಸವನ್ನು ನಿತ್ಯವೂ ಕುಡಿಯುವುದರಿಂದ  ಈ ಕೊರತೆ ನೀಗುತ್ತದೆ.

ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ

ಬೀಟ್ರೂಟ್ ರಸ ಹೆಚ್ಚು ಸಿಹಿಯ ಪ್ರಮಾಣ ಇರುವುದರಿಂದ ಮಧುಮೇಹಿಗಳಿಗೆ ಸೂಕ್ತವಲ್ಲ ಎಂದು ಹೆಚ್ಚು ಜನರು ತಿಳಿದಿದ್ದಾರೆ. ಬೀಟ್ರೂಟ್ ರಸದ ಸೇವನೆಯಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು. ಅದರಲ್ಲೂ ಊಟವಾದ ನಂತರ ಬೀಟ್ರೋಟ್ ರಸವನ್ನು ಕುಡಿದರೆ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ.

ಬೀಟ್ರೂಟ್ ಜ್ಯೂಸ್ ಮಾಡುವ ವಿಧಾನ

ಬೀಟ್ರೂಟ್ ನ ಮೇಲಿನ ಸಿಪ್ಪೆಯನ್ನು ತೆಗೆದು  ತುರಿದುಕೊಳ್ಳಿ..ನಂತರ ಅದನ್ನು ಜ್ಯೂಸರ್ ಗೆ ಹಾಕಿ ರುಬ್ಬಿಕೊಳ್ಳಿ..ನಿಮಗೆ ಬೇಕು ಅನಿಸಿದರೆ ಸ್ವಲ್ಪ ಏಲಕ್ಕಿ ಪುಡಿಯನ್ನು ಸೇರಿಸಿಕೊಳ್ಳಿ..

ಪ್ರತಿದಿನ ಬೀಟ್ರೂಟ್ ಜ್ಯೂಸ್ ಕುಡಿಯುತ್ತಾ ಬಂದರೆ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ.. ಆದ್ದರಿಂದ ನಿಮ್ ಆರೋಗ್ಯವನ್ನು ಸಾಧ್ಯವಾದಷ್ಟು ಕಾಪಾಡಿಕೊಳ್ಳಿ.

Edited By

Manjula M

Reported By

Manjula M

Comments