ಅಗಾಧ ಪೋಷಕಾಂಶಗಳ ಆಗರ ಈ ಕ್ಯಾರೆಟ್ ಜ್ಯೂಸ್..!

31 May 2018 1:00 PM | Health
1788 Report

ಎಲ್ಲರಿಗೂ ಕೂಡ ಆರೋಗ್ಯದ ಜೊತೆಗೆ ಸೌಂದರ್ಯವನ್ನೂ ಕೂಡ ವೃದ್ಧಿಸಲು ನಿಸರ್ಗ ನೀಡಿರುವಂತಹ ಕೊಡುಗೆಗಳಲ್ಲಿ ಕ್ಯಾರೆಟ್ ಸಹ ಒಂದು. ಕನ್ನಡದಲ್ಲಿ ಗಜ್ಜರಿ ಎಂದು ಕರೆಯುವ ಈ ಸಿಹಿಯಾದ, ಕೇಸರಿ ಬಣ್ಣದ ತರಕಾರಿ ವಿಟಮಿನ್ 'ಎ' ಹೊಂದಿದೆ. ಈ ವಿಟಮಿನ್ 'ಎ' ಚರ್ಮದ ಆರೈಕೆ ಮತ್ತು ಕಣ್ಣಿನ ಪೋಷಣೆಗೆ ಅತ್ಯಗತ್ಯವಾದ ಪೋಷಕಾಂಶವಾಗಿರುತ್ತದೆ. ಚರ್ಮದ ಆರೈಕೆಗಂತೂ ವಿಟಮಿನ್ 'ಎ' ನ ಪಾತ್ರ ತುಂಬಾ ಮಹತ್ವದ್ದಾಗಿದೆ.

ಅಷ್ಟೆ ಅಲ್ಲದೆ ಅದರ ಜೊತೆಗ ಕೂದಲು ಹೊಳೆಯುವಂತೆ ಮಾಡುತ್ತದೆ. ಅಷ್ಟೆ ಅಲ್ಲದೆ ಅದರ ಜೊತೆಗೆ ಮೊಡವೆಗಳೂ ಕೂಡ ಕಡಿಮೆಯಾಗುತ್ತವೆ. ಕ್ಯಾರೆಟ್ಟುಗಳಲ್ಲಿರುವ ಮತ್ತೊಂದು ಪ್ರಮುಖ ಪೋಷಕಾಂಶವೆಂದರೆ ಬೀಟಾ ಕ್ಯಾರೋಟೀನ್. ಇದರಲ್ಲಿರುವ ಇತರ ಆಂಟಿ ಆಕ್ಸಿಡೆಂಟುಗಳು ಚರ್ಮದ ವಿವಿಧ ರೋಗ ಮತ್ತು ಸೋಂಕುಗಳು ಬರದಂತೆ ತಡೆಯುತ್ತದೆ.

ಕೂದಲು ಬೆಳೆಯುವುದಕ್ಕೆ ಸಹಕಾರಿಯಾಗುತ್ತದೆ

ಕ್ಯಾರೆಟ್ಟುಗಳಲ್ಲಿರುವ ಅವಶ್ಯಕ ಪೋಷಕಾಂಶಗಳು ಕೂದಲನ್ನು ಬುಡದಿಂದ ದೃಢಗೊಳಿಸಿ ಕೂದಲ ಬೆಳವಣಿಗೆಗೆ ನೆರವಾಗುತ್ತದೆ. ಅಲ್ಲದೇ ಕ್ಯಾರೆಟ್ ನಲ್ಲಿರುವ ವಿಟಮಿನ್ ಸಿ, ಮತ್ತು ಇ ರಕ್ತಪರಿಚಲನೆಯನ್ನು ಉತ್ತಮಗೊಳಿಸುವಲ್ಲಿ ಸಹಾಯ ಮಾಡುತ್ತದೆ ಹಾಗೂ ನೆರೆಕೂದಲು ಬರುವುದನ್ನು ತಡೆಯುತ್ತದೆ.

ಮುಖದಲ್ಲಿನ ಮೊಡವೆಗಳನ್ನು ನಿವಾರಿಸುತ್ತದೆ

ಕ್ಯಾರೆಟ್‌ಗಳಲ್ಲಿರುವ ವಿಟಮಿನ್ ಎ ಚರ್ಮಕ್ಕೆ ಆರೈಕೆ ನೀಡುವ ಜೊತೆಗೆ ಮೊಡವೆಗಳ ನಿವಾರಣೆಗೆ ನೆರವಾಗುತ್ತದೆ. ಅಲ್ಲದೇ ಚರ್ಮದಡಿಯಿಂದ ಮೊಡವೆಗಳು ಮೂಡಲು ಕಾರಣವಾಗುವ ಕೊಳೆ ಮತ್ತು ಕಲ್ಮಶಗಳನ್ನು ಚರ್ಮದ ರಂಧ್ರಗಳ ಮೂಲಕ ಹೊರಹೋಗುವಂತೆ ಮಾಡುತ್ತದೆ.

ಚರ್ಮದ ಉರಿಯನ್ನು ಕಡಿಮೆ ಮಾಡುತ್ತದೆ

ಕೆಲವೊಮ್ಮೆ ಬಿಸಿಲಿನಿಂದ ಆಗುವ ಬೆವರುಸಾಲೆ,ಚಿಕ್ಕಪುಟ್ಟ ಗಾಯಗಳಿಂದ ಉಂಟಾಗುವ ಉರಿಯನ್ನು ಕ್ಯಾರೆಟ್ ನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಗಾಯದ ಉರಿಯನ್ನು ನಿವಾರಿಸುತ್ತವೆ. ಅಷ್ಟೆ ಅಲ್ಲದೇ ಬೇಗನೇ ಗಾಯದ ಉರಿಯನ್ನು ಗುಣವಾಗಲೂ ನೆರವಾಗುತ್ತವೆ.

ಮುಖದಲ್ಲಿ ನೆರಿಗೆ ಮೂಡುವುದನ್ನು ತಡೆಗಟ್ಟುತ್ತದೆ

ವಯಸ್ಸು ಮೂವತ್ತು ದಾಟಿದ ನಂತರ ನಿಧಾನವಾಗಿ ಚರ್ಮದಲ್ಲಿ ನೆರಿಗೆಗಳು ಮೂಡಲು ಶುರುವಾಗುತ್ತವೆ.. ಕಣ್ಣುಗಳ ಕೆಳಗೆ ಚರ್ಮವು ಜೋತುಬಿದ್ದಂತೆ ಕಾಣುತ್ತದೆ. ನಿತ್ಯವು ಕ್ಯಾರೆಟ್ಟಿನ ಜ್ಯೂಸ್ ಕುಡಿಯುವ ಮೂಲಕ ಚರ್ಮದ ಸೆಳೆತ ಹೆಚ್ಚಾಗಿ ಈ ತೊಂದರೆಗಳಿಂದ ಬಹುಕಾಲ ಮುಕ್ತಿ ಪಡೆಯಬಹುದು

ಸ್ತನ ಕ್ಯಾನ್ಸರ್ ತಡೆಗಟ್ಟಲು ಸಹಾಯಕಾರಿ

ನ್ಯೂಟ್ರಿಷನ್ ಮತ್ತು ಕ್ಯಾನ್ಸರ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯೊಂದರ ಪ್ರಕಾರ ಸತತ ಮೂರು ವಾರಗಳ ಕಾಲ ಕ್ಯಾರೆಟ್ ಜ್ಯೂಸ್ ಅನ್ನು ಕುಡಿಯುವುದರಿಂದ ಪ್ಲಾಸ್ಮಾ ಕ್ಯಾರೊಟೆನೈಡ್ ಹೆಚ್ಚಾಗಿ ಆಕ್ಸಿಡೇಟಿವ್ ಒತ್ತಡ ಕಡಿಮೆಯಾಗುತ್ತದೆಯಂತೆ.

ಹೃದಯದ ಆರೋಗ್ಯ ಸ್ಥಿರವಾಗಿರುತ್ತದೆ.

ಹೃದಯದ ಸಮಸ್ಯೆ ಇರುವವರು ಕ್ಯಾರೆಟ್ ಜ್ಯೂಸ್‌ನ್ನು ನಿಯಮಿತವಾಗಿ ಕುಡಿಯುವುದರಿಂದ ಹೃದಯ ಬಡಿತದ ಮಧ್ಯೆ ಉಂಟಾಗುವಂತಹ ಒತ್ತಡವು ಕಡಿಮೆಯಾಗುತ್ತದೆ ಎಂದು ನ್ಯೂಟ್ರಿಷನ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯಿಂದ ತಿಳಿದುಬಂದಿದೆ.

ಕ್ಯಾರೆಟ್ ಜ್ಯೂಸ್ ತಯಾರಿಸುವುದು ಹೇಗೆ?

ಕ್ಯಾರೆಟ್ ಅನ್ನು ಜ್ಯೂಸರ್‌ಗೆ ಹಾಕಿಕೊಂಡು ಜ್ಯೂಸ್ ತಯಾರಿಸಿಕೊಳ್ಳಿ.

ಸ್ವಲ್ಪ ಸಕ್ಕರೆಯನ್ನು ಮಿಶ್ರಣ ಮಾಡಿಕೊಳ್ಳಿ, ನಂತರ ಸ್ವಲ್ಪ ನಿಂಬೆರಸವನ್ನು ಅದಕ್ಕೆ ಸೇರಿಸಿಕೊಳ್ಳಿ.. ಈಗ ಕ್ಯಾರೆಟ್ ಜ್ಯೂಸ್ ಕುಡಿಯಲು ಸಿದ್ದ.

ಹಾಗಾಗಿ ದಿನಕ್ಕೆ ಒಂದು ಬಾರಿ ಕ್ಯಾರೆಟ್ ಜ್ಯೂಸ್ ಅನ್ನು ಕುಡಿದರೆ ಆರೋಗ್ಯವು ಉತ್ತಮವಾಗಿರುತ್ತದೆ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ..ಹಾಗಾಗಿ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ.

Edited By

Manjula M

Reported By

Manjula M

Comments