‘ನೆನೆಸಿಟ್ಟ ಬಾದಾಮಿ’ ತಿಂದರೆ ಆಗುವ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು?

23 May 2018 11:12 AM | Health
5892 Report

ನಮ್ಮ ಆರೋಗ್ಯ ಕಾಪಾಡುವಲ್ಲಿ ಡ್ರೈಫ್ರೂಟ್ಸ್ ಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.ಅದರಲ್ಲಿ ಬಾದಾಮಿಯ ಪಾತ್ರ ಸಾಕಷ್ಟಿದೆ.ಈ ಬಾದಾಮಿ ದೇಹಕ್ಕೆ ಶಕ್ತಿಯನ್ನು ನೀಡಿ ಆರೋಗ್ಯವನ್ನು ಸುಧಾರಿಸುತ್ತದೆ. ಈ ಬಾದಾಮಿಯಲ್ಲಿ ಪ್ರೋಟೀನ್, ಒಮೆಗಾ-3 ಕೊಬ್ಬಿನಾಮ್ಲ, ಒಮೆಗಾ-6 ಕೊಬ್ಬಿನಾಮ್ಲ, ವಿಟಮಿನ್ ಇ, ಕ್ಯಾಲ್ಸಿಯಂ, ಫೋಸ್ಪರಸ್, ಸತು, ಹೀರಿಕೊಳ್ಳುವ ಮತ್ತು ಹೀರಿಕೊಳ್ಳದ ನಾರಿನಾಂಶಗಳು ಇವೆ. ಆದರೆ ತಜ್ಞರ ಪ್ರಕಾರ ಹಸಿ ಬಾದಾಮಿಯನ್ನು ತಿನ್ನುವುದರ ಬದಲು ಬಾದಾಯಿಯನ್ನು ನೆನೆಸಿಟ್ಟು ತಿಂದರೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಬಾದಾಮಿಯನ್ನು ರಾತ್ರಿಯಿಡಿ ನೆನೆಹಾಕುವುದರಿಂದ ಅದರಲ್ಲಿರುವ ವಿಷಕಾರಿ ಅಂಶಗಳು ದೂರವಾಗಿ ಫೈಟಿಕ್ ಆಮ್ಲ ಬಿಡುಗಡೆ ಮಾಡುವುದು ಮತ್ತು ಗ್ಲುಟೇನ್ ಅಂಶವನ್ನು ವಿಭಜನೆ ಮಾಡುತ್ತದೆ. ಇದರಿಂದ ಬಾದಾಮಿಯಲ್ಲಿರುವ ಪೋಷಕಾಂಶಗಳು ನಮಗೆ ಸಿಗುತ್ತವೆ. ಆದ್ದರಿಂದ ನೆನೆಸಿಟ್ಟ ಬಾದಾಮಿಯನ್ನು ಬೆಳಗ್ಗೆ ತಿನ್ನುವುದರಿಂದ ಆಗುವ ಆರೋಗ್ಯ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ.

ಗರ್ಭಿಣಿಯರಿಗೆ ಒಳ್ಳೆಯದು

ಒಂದು ವೇಳೆ ನೀವು ಗರ್ಭಿಣಿಯಾಗಿದ್ದರೆ ನೆನೆಸಿಟ್ಟ ಬಾದಾಮಿಯನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಇದು ನಿಮ್ಮ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡುತ್ತದೆ. ನೆನೆಸಿಟ್ಟ ಬಾದಾಮಿಯು ತಾಯಿ ಮತ್ತು ಗರ್ಭದಲ್ಲಿರುವ ಮಗುವಿಗೆ ಉತ್ತಮ ಪೋಷಕಾಂಶ ಹಾಗೂ ಶಕ್ತಿಯನ್ನು ನೀಡುತ್ತದೆ.

ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ

ಪ್ರತಿದಿನ ಸುಮಾರು  4ರಿಂದ 6 ನೆನೆಸಿಟ್ಟ ಬಾದಾಮಿ ಸೇವನೆ ಮಾಡಿದರೆ ಮೆದುಳಿಗೆ ಶಕ್ತಿ ಸಿಗುವುದರ ಜೊತೆಗೆ ಮೆದುಳಿನ ನರವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಬೆಳಗ್ಗೆ ನೆನೆಸಿಟ್ಟ ಬಾದಾಮಿ ತಿಂದರೆ ಅದರಿಂದ ಜ್ಞಾಪಕಶಕ್ತಿ ಹೆಚ್ಚುತ್ತದೆ.

ಜೀರ್ಣಕ್ರಿಯೆ ಸುಧಾರಣೆ

ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದರಿಂದ ಜೀರ್ಣಕ್ರಿಯೆ ವ್ಯವಸ್ಥೆಗೆ ನೆರವಾಗಿ ಆಹಾರ ಬೇಗ ಜೀರ್ಣವಾಗಲು ನೆರವಾಗುವುದು. ಬಾದಾಮಿಯನ್ನು ನೀರಿನಲ್ಲಿ ನೆನೆಸಿದರೆ ಹೊರಗಿನ ಸಿಪ್ಪೆಯು ಕಳಚಿಕೊಳ್ಳುತ್ತದೆ. ಇದರಿಂದ ಹೆಚ್ಚು ಪೋಷಕಾಂಶಗಳು ಸಿಗುತ್ತವೆ.

ರಕ್ತದೊತ್ತಡವನ್ನು ಸುಧಾರಿಸುವಲ್ಲಿ ಸಹಕಾರಿ

ನೆನೆಸಿಟ್ಟ ಬಾದಾಮಿಯಲ್ಲಿ ಹೆಚ್ಚಿನ ಮಟ್ಟದ ಪೊಟಾಶಿಯಂ ಮತ್ತು ಸೋಡಿಯಂ ಅಂಶವು ಕಡಿಮೆ ಇರುವುದು. ಇದು ಅಧಿಕ ರಕ್ತದೊತ್ತಡವನ್ನು ತಡೆಯುವುದು. ಇದರಲ್ಲಿ ಫಾಲಿಕ್ ಆಮ್ಲ ಮತ್ತು ಮೆಗ್ನಿಶಿಯಂ ಕೂಡ ಇದ್ದು ಅಪಧಮನಿಗಳಲ್ಲಿ ಉಂಟಾಗುವ ರಕ್ತದ ಒತ್ತಡವನ್ನು ಕುಗ್ಗಿಸುವುದು.

ತೂಕ ಕಳೆದುಕೊಳ್ಳಲು ಸಹಾಯ

ಹೊಟ್ಟೆಯ ಸುತ್ತಲು ಇರುವಂತಹ ಕೊಬ್ಬು ಕರಗಿಸಬೇಕೆಂದು ನೀವು ಸಾಕಷ್ಟು ಪ್ರಯತ್ನಿಸುತ್ತಾ ಇದ್ದರೆ ನೆನೆಸಿಟ್ಟ ಬಾದಾಮಿಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿ. ಬಾದಾಮಿ ಹೊರಗಿನ ಸಿಪ್ಪೆ ತೆಗೆಯುವ ಕಾರಣದಿಂದಾಗಿ ನೆನೆಸಿಟ್ಟ ಬಾದಾಮಿ ತಿಂದರೆ ಅತೀ ಬೇಗ ತೂಕವನ್ನು ಕಳೆದುಕೊಳ್ಳಬಹುದು.

ಹೃದಯಕ್ಕೆ ಒಳ್ಳೆಯದು

ನೆನೆಸಿಟ್ಟ ಬಾದಾಮಿಯು ಪ್ರೋಟೀನ್, ಪೊಟಾಶಿಯಂ ಮತ್ತು ಮೆಗ್ನಿಶಿಯಂನ್ನು ಒದಗಿಸುವುದು. ಇದು ಹೃದಯದ ಆರೋಗ್ಯಕ್ಕೆ ಅತೀ ಅಗತ್ಯ. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನದಲ್ಲಿಟ್ಟು ದೊಡ್ಡ ಮಟ್ಟದ ಹೃದಯ ಕಾಯಿಲೆ ತಡೆಯುವುದು. 

ಪ್ರತಿರೋಧಕ ಶಕ್ತಿ ಗಟ್ಟಿಗೊಳ್ಳಿಸುತ್ತದೆ

ನೆನೆಸಿಟ್ಟ ಬಾದಾಮಿಯಲ್ಲಿ ಇರುವಂತಹ ಪ್ರಿಬಯಾಟಿಕ್ ಎಂಬ ಅಂಶವು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಚರ್ಮಕ್ಕೆ ವಯಸ್ಸಾಗುವುದನ್ನು ತಡೆಗಟ್ಟುತ್ತದೆ.

ಬಾದಾಮಿಯಲ್ಲಿರುವ ನೈಸರ್ಗಿಕ ಅಂಶಗಳು ಚರ್ಮದಲ್ಲಿರುವ  ನೆರಿಗೆಯನ್ನು ನಿವಾರಿಸುತ್ತದೆ. ಪ್ರತಿನಿತ್ಯ ಬೆಳಗ್ಗೆ ನೆನೆಸಿಟ್ಟ ಬಾದಾಮಿ ಸೇವನೆ ಮಾಡಿದರೆ ಅದರಿಂದ ಚರ್ಮದಲ್ಲಿನ ನೆರಿಗೆ ಮತ್ತು ವಯಸ್ಸಾಗುವ ಸಮಯದಲ್ಲಿ ಬರುಚ ಲಕ್ಷಣಗಳನ್ನು ತಡೆಯಬಹುದು.

ಇವತ್ತಿನ ನಮ್ಮ ಲೇಖನದಲ್ಲಿ ನೆನಸಿಟ್ಟ ಬಾದಾಮಿಯನ್ನು ತಿಂದರೆ ಏನೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಅಂತ.. ಇದನ್ನು ನೀವು ಒಮ್ಮೆ ಓದಿ,ಇತರರಿಗೆ ಷೇರ್ ಮಾಡಿ..ಎಲ್ಲರೂ ಕೂಡ ಬಾದಾಮಿಯಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲಿ.

Edited By

Manjula M

Reported By

Manjula M

Comments