ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳು..!

22 May 2018 1:16 PM | Health
6563 Report

ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದಕ್ಕೆ ಎಲ್ಲರೂ ಹೊಂದಿಕೊಂಡು ಬಿಟ್ಟಿದ್ದಾರೆ.. ಕೆಲಸದ ಒತ್ತಡಗಳಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡುವುದನ್ನೆ ಬಿಟ್ಟು ಬಿಟ್ಟಿದ್ದೇವೆ.. ಆದರೂ ಕೆಲಸದ ನಡುವೆ ಆರೋಗ್ಯದ ಕಡೆ ಗಮನ ಕೊಡಲು ಸಮಯವಿರುವುದಿಲ್ಲ. ಹಾಗಾಗಿ ಮನೆಯಲ್ಲಿಯೇ ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದು ಸಾಕಷ್ಟು ಜನರ ಗೊಂದಲವಾಗಿರುತ್ತದೆ. ವೆರಿ ಸಿಂಪಲ್ ಬೆಳ್ಳಿಗೆ ಎದ್ದ ತಕ್ಷಣ ಕನಿಷ್ಟ ನಾಲ್ಕು ಲೋಟ ನೀರನ್ನು ಕುಡಿದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳೋಣ. 

1. ದೇಹದಲ್ಲಿರುವ ನಿರ್ಜಲೀಕರಣ(ಡಿಹೈಡ್ರೆಷನ್) ಅನ್ನು ಹೋಗಲಾಡಿಸುತ್ತದೆ.

ದೀರ್ಘಕಾಲದ ನಿದ್ರೆಯ ನಂತರ  ಎಚ್ಚರವಾದಾಗ, ನಿಮ್ಮ ದೇಹವು ನೈಸರ್ಗಿಕವಾಗಿ ನಿರ್ಜಲೀಕರಣಗೊಳ್ಳುತ್ತದೆ. ಆಗ ನಿಮ್ಮ ದೇಹಕ್ಕೆ ನೀರು ಅಗತ್ಯವಿರುತ್ತದೆ. ಎದ್ದ ತಕ್ಷಣ ನಾವು ಕುಡಿಯುವ ನೀರು ನಮ್ಮ ದೇಹದಲ್ಲಿರುವ ಜೀವಕೋಶಗಳಿಗೆ ತಲುಪಿ ನಿರ್ಜಲೀಕರಣದ ವಿರುದ್ದ ಹೋರಾಡುತ್ತದೆ. ಎದ್ದ ತಕ್ಷಣ ಕಾಫಿ ಟೀ ಕುಡಿಯುವ ಬದಲು ಕನಿಷ್ಟ ನಾಲ್ಕು ಕಪ್ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು.

2. ವಿಷಕಾರಿ(ಟಾಕ್ಸಿಮ್) ಜೀವಾಣುಗಳನ್ನು ದೇಹದಿಂದ ಹೊರಹಾಕುತ್ತದೆ.

ಎದ್ದ ತಕ್ಷಣ ನೀರು ಕುಡಿಯುವುದರಿಂದ ದೇಹದಲ್ಲಿರುವ ಅನಗತ್ಯ ಜೀವಾಣುಗಳನ್ನು ಹೊರಹಾಕುತ್ತದೆ. ನಿದ್ದೆ ಮಾಡುವಾಗ, ಶಕ್ತಿ ಮತ್ತು ಹಾರ್ಮೋನುಗಳನ್ನು ಸಮತೋಲನವಾಗಿಸುವಂತೆ ನೋಡಿಕೊಳ್ಳುತ್ತದೆ. ಪರಿಣಾಮವಾಗಿ ವಿಷಯುಕ್ತ ಮತ್ತು ಇತರ ತ್ಯಾಜ್ಯ ವಸ್ತುಗಳನ್ನು ಹೊರಹಾಕಲು ಸಹಾಯಮಾಡುತ್ತದೆ.  

3. ಪಚನಕ್ರಿಯೆಗೆ ಸಹಾಯಮಾಡುತ್ತದೆ.

ತೂಕ ಕಡಿಮೆ ಮಾಡಿಕೊಳ್ಳಲು ನೀರು ಕುಡಿಯುವುದು ಅತ್ಯಂತ ಸೂಕ್ತವಾಗಿದೆ. ಅದರಲ್ಲೂ ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದು ಅತ್ಯಂತ ಸೂಕ್ತ ಮಾರ್ಗವಾಗಿದೆ. ನಿಮ್ಮ ಚಯಾಪಚಯಕ್ಕೆ ನೀವು ಕುಡಿಯುವ ನೀರಿನ ಸಾಕಷ್ಟು ಪ್ರಯೋಜನವಾಗುತ್ತದೆ. ದಿನವಿಡೀ ನಿಮ್ಮ ಕ್ಯಾಲೋರಿಯ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯವಾಗುತ್ತದೆ. 

4.ಮೆದುಳಿಗೆ ತುಂಬಾ ಒಳ್ಳೆಯದು.

ನಮ್ಮ ಮೆದುಳು ಶೇ 100 ಕ್ಕೆ ಶೇ 75 ನೀರಿನ ಅಂಶವನ್ನು ಹೊಂದಿದೆ. ನಾವು ಹೆಚ್ಚು ನೀರು ಕುಡಿದಷ್ಟು ಅದು ನಮ್ಮ ಮೆದುಳಿಗೆ ತುಂಬಾ ಒಳ್ಳೆಯದು..ನೀರು ಹೆಚ್ಚು ಕುಡಿದಷ್ಟು ಮೆದುಳಿನ ಕಾರ್ಯಗಳು ಸಲೀಸಾಗಿ ಆಗುತ್ತವೆ.ಮೆದುಳಿನಲ್ಲಿರುವ ನಿರ್ಜಲಿಕರಣದ ವಿರುದ್ದವೂ ಕೂಡ ಹೋರಾಡುತ್ತದೆ. 

5.ಮಲಬದ್ದತೆಯನ್ನು ನಿವಾರಿಸುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ಮಲಬದ್ದತೆ ನಿವಾರಣೆಯಾಗುತ್ತದೆ.ಬೆಳಿಗ್ಗೆ ಎದ್ದ ತಕ್ಷಣ ನೀರನ್ನ ಕುಡಿಯುವುದರಿಂದ ನಿರ್ಜಲೀಕರಣವನ್ನು ಮಾತ್ರ ಗುಣಪಡಿಸುವುದಿಲ್ಲ. ಅದರ ಜೊತೆಗೆ ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ, ಅಷ್ಟೆ ಅಲ್ಲದೆ ಕರುಳಿನ ಚಲನೆಯನ್ನು ಕೂಡ ಸರಿ ಪಡಿಸುತ್ತದೆ. 

6.ರೋಗಗಳು ಬರದಂತೆ ನೋಡಿಕೊಳ್ಳುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ ನೀರನ್ನು ಕುಡಿಯುವುದರಿಂದ ಅನೇಕ ರೀತಿಯ ಲಾಭಗಳು ಆಗುತ್ತವೆ. ವೈದ್ಯರು ಕೂಡ ಇದನ್ನು ಸಾರಿ ಸಾರಿ ಹೇಳುತ್ತಿರುತ್ತಾರೆ.ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಷ್ಟು ಶಕ್ತಿ ನೀರಿಗಿದೆ.. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ  ಅನೇಕ ರೀತಿಯ ಲಾಭಗಳು ನಮ್ಮ ದೇಹಕ್ಕೆ ಆಗುತ್ತವೆ. 

7.ನಮ್ಮ ದೇಹವನ್ನು ರಿಫ್ರೆಶ್ ಮಾಡುತ್ತದೆ.

ನಿಮ್ಮ ದೇಹ ಯಾವಾಗಲೂ ಉಲ್ಲಾಸಭರಿತವಾಗಿರುವಂತೆ ಮಾಡುತ್ತದೆ..ನಿದ್ದೆ ಮಾಡಿ ಎದ್ದ ಮೇಲೆ ದೇಹವನ್ನು ಪುನಶ್ಚೇತನಗೊಳಿಸುತ್ತದೆ..ದಿನವಿಡಿ ಆರೊಗ್ಯದಿಂದ ಇರುವಂತೆ ಮಾಡುತ್ತದೆ. 

8. ನೀರು ಕುಡಿಯುವುದರಿಂದ ಚರ್ಮದ ಕಾಂತಿಯು ಹೆಚ್ಚುತ್ತದೆ:- ಎದ್ದ ತಕ್ಷಣ ನೀರನ್ನು ಕುಡಿಯುವುದರಿಂದ ಕೇವಲ ಆರೋಗ್ಯವಷ್ಟೆ ಅಲ್ಲ.. ನಿಮ್ಮ ತ್ವಚೆಗೂ ಕೂಡ ಬಹಳಷ್ಟು ಸಹಕಾರಿಯಾಗುತ್ತದೆ. ಚರ್ಮವು ಏನಾದರೂ ಒಣಗಿದರೆ, ಎದ್ದ ತಕ್ಷಣ ನೀರು ಕುಡಿಯುವುದರಿಂದ ಸಹಕಾರಿಯಾಗುತ್ತದೆ.

ಬೆಳ್ಳಿಗೆ ಎದ್ದ ತಕ್ಷಣ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಂಡ್ರಿ ಅಲ್ವ.ಯಾರ್ಯಾರು ಬೆಳಿಗ್ಗೆ ಎದ್ದು ನೀರನ್ನು ಕುಡಿಯುವುದಿಲ್ಲವೋ ಅವರು ಇನ್ಮುಂದೆ ಬೆಳಿಗ್ಗೆ ಎದ್ದ ತಕ್ಷಣ ನೀರನ್ನು ಕುಡಿದು,ಅದರಿಂದ ಆಗುವ ಪ್ರಯೋಜನಗಳನ್ನು ಪಡೆಯಿರಿ.

Edited By

Manjula M

Reported By

Manjula M

Comments