ಈ ಆಲೋವೆರಾ…ಆರೋಗ್ಯಕ್ಕೂ ಸೈ, ಸೌಂದರ್ಯಕ್ಕೂ ಸೈ…!

19 May 2018 1:27 PM | Health
2330 Report

ಕಳೆದ ಲೇಖನದಲ್ಲಿ ಆಲೋವೆರಾವು ನಮ್ಮ ಆರೋಗ್ಯದ ವಿಷಯದಲ್ಲಿ ಯಾವ ರೀತಿಯ ಪಾತ್ರವನ್ನು ವಹಿಸುತ್ತದೆ ಅನ್ನೋದನ್ನ ತಿಳಿದುಕೊಂಡಿದ್ದೇವೆ. ಆಲೋವೆರಾ ಕೇವಲ ನಮ್ಮ ಆರೋಗ್ಯದಲ್ಲಿ ಅಷ್ಟೆ ಅಲ್ಲ ನಮ್ಮ ಸೌಂದರ್ಯವನ್ನು ಕಾಪಾಡುವಲ್ಲಿಯೂ ಪ್ರಮಖ ಪಾತ್ರವನ್ನು ವಹಿಸುತ್ತದೆ. ಇವತ್ತಿನ ನಮ್ಮ ಸಿವಿಕ್ ನ್ಯೂಸ್ ನ ಹೆಲ್ತ್ ಟಿಪ್ಸ್ ವಿಭಾಗದಲ್ಲಿ ಸೌಂದರ್ಯ ಸ್ನೇಹಿ ಆಲೋವೆರಾದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಆಲೋವೆರಾವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಮನೆಯಲ್ಲಿ ಬೆಳೆಯುವ ಔಷಧಿಯ ಸಸ್ಯವಾಗಿದೆ. ಚಿಕಿತ್ಸಾತ್ಮಕ ಗುಣಗಳು ಶರೀರದ ಒಳಗೂ ಮತ್ತು ಹೊರಗೂ ಕಾರ್ಯವನ್ನು ನಿರ್ವಹಿಸುತ್ತದೆ.

1. ಸನ್ ಟ್ಯಾನ್ ಗೆ ಸೂಕ್ತ ಈ ಆಲೋವೆರಾ ಪ್ಯಾಕ್

ಟೊಮೆಟೋ ರಸ ಮತ್ತು ಆಲೋವೆರಾವನ್ನು ಸಮಪ್ರಮಾಣದಲಿ ಬೆರೆಸಿ ಕಲಸಿಕೊಂಡು ಟ್ಯಾನ್ ಆದ ಭಾಗಗಳಿಗೆ ಹಚ್ಚಿ 30 ನಿಮಿಷದ ಬಳಿಕ ತಣ್ಣೀರಿನಲ್ಲಿ ತೊಳೆದರೆ ಸನ್ ಟ್ಯಾನ್ ಕಡಿಮೆಯಾಗುತ್ತದೆ.

2. ಕಲೆ ಮುಕ್ತ ತ್ವಚೆಗಾಗಿ ಈ ಪ್ಯಾಕ್

ಮುಖದಲ್ಲಿರುವ ಮೊಡವೆಗಳು ಆಗೋದು ಕಾಮನ್. ಹಾಗಂತ ಚಿಂತೆ ಮಾಡಿಕೊಂಡು ಕೂರೋಕೆ ಆಗುತ್ತಾ..ಅದಕ್ಕೆ ಅಂತ ಸಾಕಷ್ಟು ಮನೆ ಮದ್ದುಗಳಿರುತ್ತವೆ. ಅದರಲ್ಲಿ ಆಲೋವೆರಾ ಕೂಡ ಒಂದು..ಮೊಡವೆಯ ಕಲೆಗಳನ್ನು ಹೋಗಲಾಡಿಸುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕೆಲವೊಮ್ಮೆ ಹಾರ್ಮೋನುಗಳ ಅಸಮತೋಲನದಿಂದ ಉಂಟಾಗುವಂತಹ ಮೊಡವೆಗಳಿಗೆ ತಜ್ಞರನ್ನು ಕಾಣುವುದು ಸೂಕ್ತ. ನೈಸರ್ಗಿಕವಾಗಿ ಸಿಗುವ ಆಲೋವೆರ ಜೆಲ್ ನ್ನು ಕಲೆಯಾಗಿರುವ ಭಾಗಕ್ಕೆ ಹಚ್ಚಿ. ನಂತರ ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ಮುಖವನ್ನು ತೊಳೆಯಿರಿ.. ದಿನ ಹೀಗೆ ಮಾಡುತ್ತಾ ಬಂದರೆ ನಿಮ್ಮ ದೇಹದಲ್ಲಿ ಆಗಿರುವ ಕಲೆ ಮಾಯವಾಗಿತ್ತದೆ.

3. ತ್ವಚೆಯ ಕಾಂತಿಯನ್ನು ವೃದ್ಧಿಸುತ್ತದೆ

ಆಲೋವೆರಾ ತ್ವಚೆಯ ಕಾಂತಿಯನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಕಾರಣದಿಂದಲೇ ಇದನ್ನು ತ್ವಚೆಯಲ್ಲಿರುವ ಕಲೆಗಳನ್ನು ಕಡಿಮೆ ಮಾಡಲು ಮತ್ತು ತ್ವಚೆಯ ಕಪ್ಪುಭಾಗವನ್ನು ಕಡಿಮೆ ಮಾಡಲು ಬಳಸುತ್ತಾರೆ. ತ್ವಚೆಯನ್ನು ಯಾವಾಗಲೂ ತಂಪಾಗಿ ಇರುವಂತೆ ಮಾಡುತ್ತದೆ. ಆಲೋವೆರದ ಜೊತೆ ಸ್ವಲ್ಪ ಮೊಸರು ಮತ್ತು ಅರಿಶನವನ್ನು ಸೇರಿಸಿ ಲೇಪನವನ್ನು ತಯಾರಿಸಿಕೊಳ್ಳಿ.. ಆ ಲೇಪನವನ್ನು  10 ನಿಮಿಷ ಆಗೆಯೇ ಬಿಡಿ.. ನಂತರ  ಅದನ್ನು ಮುಖಕ್ಕೆ ಲೇಪಿಸಿಕೊಳ್ಳಿ. ಸುಮಾರು ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ಮುಖವನ್ನು ತೊಳೆಯಿರಿ.. ಆಗ ನಿಮ್ಮ ಮುಖ ಮೊದಲಿಗಿಂತಲೂ ಹೆಚ್ಚು ಕಾಂತಿಯುತವಾಗಿರುತ್ತದೆ.

4. ಸ್ಥಿತಿಸ್ಥಾಪಕ ಗುಣವನ್ನು ಹೊಂದಿದೆ

ಆಲೋವೆರಾವು ಹೆಚ್ಚು ತೇವಾಂಶವನ್ನು ಹೊಂದಿರುತ್ತದೆ. ಆಲೋವೆರಾವನ್ನುಚರ್ಮಕ್ಕೆ ಹಚ್ಚಿಕೊಂಡಾಗ ತ್ವಚೆ ಯಾವಾಗಲೂ ತೇವಾಂಶವಾಗಿರುತ್ತದೆ. ಮತ್ತು ಚರ್ಮದ ಸ್ಥಿತಿ ಸ್ಥಾಪಕ ಗುಣವು ಹೆಚ್ಚಾಗುವಂತೆ ಮಾಡುತ್ತದೆ. ಆಲೋವೆರಾವನ್ನು moisturizer ಆಗಿಯೂ ಕೂಡ ಬಳಸಬಹುದು. ಆಲೋವೆರಾ ಜೆಲ್ ಅಲ್ಲಿ ಅತೀ ಹೆಚ್ಚು ತೇವಾಂಶ ಇರುವುದರಿಂದ  ಅದಕ್ಕೆ ಬೇರೆ ಏನನ್ನು ಸೇರಿಸದೆ ನೇರವಾಗಿ moisturizer  ರೀತಿಯಾಗಿ ಮುಖಕ್ಕೆ ಹಚ್ಚಿ. ಸುಮಾರು  45 ನಿಮಿಷ ಬಿಟ್ಟು ಮುಖ ತೊಳೆಯಿರಿ..

5. ತಾರುಣ್ಯಪೂರ್ಣ ತ್ವಚೆಯನ್ನು ಕಾಪಾಡುತ್ತದೆ.

ಲೋಳೆಸರವು ನಮ್ಮ ವಯಸ್ಸಿನ ವಿರುದ್ದ ಹೋರಾಟವನ್ನು ನಡೆಸುತ್ತದೆ. ಚರ್ಮದಲ್ಲಿ ಸುಕ್ಕುಗಟ್ಟುವಿಕೆ, ಚರ್ಮ ಒಣಗುವುದು ಮೊದಲಾದವುಗಳ ವಿರುದ್ಧ ರಕ್ಷಣೆಯನ್ನು ನೀಡಿ ನಮ್ಮ ತಾರುಣ್ಯವನ್ನು ಕಾಪಾಡುತ್ತದೆ .ತಾರುಣ್ಯಪೂರ್ಣ ತ್ವಚೆಯನ್ನು ಪಡೆಯಲು ಒಂದು ಪ್ರಾಕೃತಿಕ ಸಾಧನಕ್ಕಾಗಿ, ಈ ಸಸ್ಯದ ಬಳಕೆಯನ್ನು ಮಾಡಬಹುದು. ಆಲೋವೆರಾ ದ ಜೊತೆ ಆಲಿವ್ ಆಯಿಲ್ ಮಿಕ್ಸ್ ಮಾಡಿ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳಿ.ಇದರಿಂದ  ಚರ್ಮ ಸುಕ್ಕಾಗುವುದು, ಚರ್ಮ ಒಣಗುವುದು ಕಡಿಮೆಯಾಗಿ ತಾರುಣ್ಯ ಪೂರ್ಣ ತ್ವಚೆಯನ್ನು ಪಡೆಯಬಹುದು.

6. ತ್ವಚೆಯ ತಾಜಾತನ ಕಾಪಾಡಲು

ಲೋಳೆಸರವು ಅವಶ್ಯಕತೆಗೆ ತಕ್ಕಂತೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕಡಿಮೆ ಮಾಡುತ್ತದೆ. ಲೋಳೆಸರದ ಚೇತೋಹಾರೀ ಗುಣಲಕ್ಷಣಗಳನ್ನು ಒಳಗೊಂಡಿದೆ. ಲೋಳೆಸರವು ನಿಮ್ಮ ತ್ವಚೆಯನ್ನು ತಾಜಾವಾಗಿರಿಸುತ್ತದೆ. ತ್ಚಚೆಯ ತಾಜಾತನವನ್ನು ಕಾಪಾಡಲು ಮಾರುಕಟ್ಟೆಯಲ್ಲಿ ಸಾಕಷ್ಟು ಕ್ರೀಮ್ ಮತ್ತು ಜೆಲ್ ಗಳು ಸಿಗುತ್ತವೆ. ಅದನ್ನು ಕೂಡ ನೀವು ಬಳಸಬಹುದು.

7. ಕೂದಲಿನ ಆರೈಕೆಗೂ ಕೂಡ ಸೂಕ್ತ

ನಿಮ್ಮ ಕೂದಲಿಗೆ ಆಲೋವೆರಾ ಜೆಲ್ ಅನ್ನು ಬಳಸುವುದರಿಂದ ಕೂದಲಿನಲ್ಲಿರುವ ತಲೆಹೊಟ್ಟು,ಕೂದಲು ಉದುರುವ ಸಮಸ್ಯೆ, ಬಿಳಿಕೂದಲಿನ ಸಮಸ್ಯೆ ಎಲ್ಲವೂ ಕೂಡ ನಿವಾರಣೆಯಾಗುತ್ತದೆ. ಆಲೋವೆರಾ ಜೊತೆ ಸ್ವಲ್ಪ ಹರಳೆಣ್ಣೆಯನ್ನು ಮಿಕ್ಸ್ ಮಾಡಿ ನಿಮ್ಮ ಕೂದಲಿಗೆ ಲೇಪಿಸಿಕೊಳ್ಳಿ… ಹೀಗೆ ಮಾಡುವುದರಿಂದ ನಿಮ್ಮ ಕೂದಲಿನಲ್ಲಿರುವ ಸಮಸ್ಯೆಗಳು ದೂರವಾಗಿ ಕೂದಲು ಸೊಂಪಾಗಿ ಬೆಳೆಯಲು ನೆರವಾಗುತ್ತದೆ. ಅಷ್ಟೆ ಅಲ್ಲದೆ ಈ ಆಲೋವೆರಾದಿಂದ ಸಾಕಷ್ಟು ಪ್ರಯೋಜನಗಳನ್ನು ನಾವು ಪಡೆಯಬಹುದು. ಇದು ನಮ್ಮ ಆರೋಗ್ಯ, ಸೌಂದರ್ಯ, ಎಲ್ಲದರಲ್ಲೂ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ.

Edited By

Manjula M

Reported By

Manjula M

Comments