ಬೆಂಗಳೂರಿನಲ್ಲಿ 1,008 ಸೇರಿ ರಾಜ್ಯಾಧ್ಯಂತ ಇಂದು 4,436 ಜನರಿಗೆ ಸೋಂಕು ಪತ್ತೆ, 123 ಮಂದಿ ಸಾವು

23 Jun 2021 8:39 PM | General
659 Report

ರಾಜ್ಯದಲ್ಲಿ 24 ಗಂಟೆಯಲ್ಲಿ ಹೊಸದಾಗಿ ಬೆಂಗಳೂರು ನಗರದಲ್ಲಿ 1008 ಜನರು ಸೇರಿದಂತೆ ರಾಜ್ಯಾಧ್ಯಂತ 4436 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ 123 ಜನರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಇಂದು ಸಹ ಹೊಸ ಪಾಸಿಟಿವ್ ಪ್ರಕರಣಗಳಿಗಿಂತ ಹೆಚ್ಚು ಅಂದರೆ 6,455 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 26,68,705ಕ್ಕೆ ಏರಿಕೆಯಾಗಿದೆ. ಇನ್ನು 1,16,450 ಸಕ್ರೀಯ ಪ್ರಕರಣಗಳಿವೆ. ಈ ಕುರಿತು ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 2.59ಕ್ಕೆ ಇಳಿದಿದೆ.

Edited By

venki swamy

Reported By

venki swamy

Comments