ಮೈಕ್ರೋಸಾಫ್ಟ್ ಕಂಪನಿಯ ನೂತನ ಮುಖ್ಯಸ್ಥರಾಗಿ ಸತ್ಯ ನಾಡೆಲ್ಲಾ ನೇಮಕ

17 Jun 2021 3:30 PM | General
734 Report

ಜಗತ್ತಿನ ಸಾಫ್ಟ್ವೇರ್ ದೈತ್ಯ ಮೈಕ್ರೋಸಾಫ್ಟ್ ಕಂಪನಿಯ ಸಿಇಒ ಸತ್ಯ ನಾಡೆಲ್ಲಾ ಅವರು ನೂತನ ಮುಖ್ಯಸ್ಥರಾಗಿ ಆಯ್ಕೆಯಾಗುವ ಮೂಲಕ ಮತ್ತೊಂದು ಮಹತ್ವದ ಜವಾಬ್ದಾರಿಯನ್ನ ನಿಭಾಯಿಸಲಿದ್ದಾರೆ.

ನಿನ್ನೆ ನಡೆದ ಸಂಸ್ಥೆಯ ನಿರ್ದೇಶಕರ ಸಭೆಯಲ್ಲಿ ಒಕ್ಕೊರಲಿನಿಂದ ನದೆಲ್ಲಾ ಅವರನ್ನು ಮೈಕ್ರೋಸಾಫ್ಟ್ ಸಂಸ್ಥೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕಂಪನಿಯು ಮಾಜಿ ಅಧ್ಯಕ್ಷ ಜಾನ್ ಥಾಂಪ್ಸನ್‌ರನ್ನು ಪ್ರಮುಖ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಿತು ಮತ್ತು ಸೆಪ್ಟೆಂಬರ್ 9 ರಂದು ಪಾವತಿಸಬೇಕಾದ ಪ್ರತಿ ಷೇರಿಗೆ 56 ಸೆಂಟ್ಸ್ ತ್ರೈಮಾಸಿಕ ಲಾಭಾಂಶವನ್ನು ಘೋಷಿಸಿತು. ಅವರು 2014 ರಲ್ಲಿ ಮುಖ್ಯಸ್ಥರಾಗಿ ಆಯ್ಕೆಯಾಗುವ ಮೊದಲು ಇದೇ ಹುದ್ದೆಯನ್ನು ಅಲಂಕರಿಸಿದ್ದರು. ಈಗ ಮತ್ತೆ ಅದೇ ಹುದ್ದೆಗೆ ಮರಳಿದ್ದಾರೆ ಎಂದು ಮೈಕ್ರೋಸಾಫ್ಟ್ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.

Edited By

venki swamy

Reported By

venki swamy

Comments