ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಇಳಿಕೆ
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಮಂಗಳವಾರ (ಮಾರ್ಚ್ 30)ದಂದು ಬದಲಾವಣೆಯಾಗಿದೆ. ದೇಶದೆಲ್ಲೆಡೆ ಪೆಟ್ರೋಲ್ ಬೆಲೆ 19 ರಿಂದ 22 ಪೈಸೆ ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 21 ರಿಂದ 23 ಪೈಸೆ ಪ್ರತಿ ಲೀಟರ್ ಇಳಿಕೆಯಾಗಿದೆ.
ಇಂದು ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 23 ಪೈಸೆ ಇಳಿಕೆಯಾಗಿ ₹ 93.59ರಂತೆ ಹಾಗೂ ಡೀಸೆಲ್ ದರ ಲೀಟರಿಗೆ 24 ಪೈಸೆ ಕಡಿಮೆಯಾಗಿ ₹ 85.75ರಂತೆ ಮಾರಾಟವಾಗಿದೆ. ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 90.56 ರೂ. ಇದೆ. ಮುಂಬೈನಲ್ಲಿ 96.98 ರೂ, ಜೈಪುರದಲ್ಲಿ 96.86 ರೂ, ಹೈದರಾಬಾದ್ನಲ್ಲಿ 94.16 ರೂ, ತಿರುವನಂತಪುರದಲ್ಲಿ 92.22 ರೂ, ಚೆನ್ನೈನಲ್ಲಿ 92.66 ರೂ, ಕೊಲ್ಕತ್ತಾದಲ್ಲಿ 90.77 ರೂ. ಇದೆ.
Comments