ಮದ್ಯ ಕುಡಿದು ಸತ್ತರೆ ವಿಮೆ ಹಣ ಸಿಗಲ್ಲ: ʼಸುಪ್ರೀಂಕೋರ್ಟ್ನಿಂದ ʼ ಮಹತ್ವದ ತೀರ್ಪು

23 Mar 2021 1:57 PM | General
499 Report

ವಿಪರೀತ ಮದ್ಯಪಾನದಿಂದಾಗಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ಯಾವುದೇ ವಿಮಾ ಪರಿಹಾರ ಪಡೆಯಲು ಅರ್ಹತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಅತಿಯಾದ ಮದ್ಯ ಸೇವನೆಯಿಂದ ಉಸಿರುಗಟ್ಟಿ ಸತ್ತ ವ್ಯಕ್ತಿಯೊಬ್ಬನ ಕುಟುಂಬಸ್ಥರು ತಮಗೆ ವಿಮೆ ಹಣ ನೀಡಲು ವಿಮಾ ಸಂಸ್ಥೆಗೆ ಆದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌ ಈ ತೀರ್ಪನ್ನು ನೀಡಿದೆ. ಅಪಘಾತದಿಂದ ಮೃತಪಟ್ಟರೆ ಇಲ್ಲವೇ ಅಪಘಾತ ಸಂಭವಿಷಿದಾಗ ಅಂಥ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡಿದ್ದರೆ ಮಾತ್ರ ಆತನ ಕುಟುಂಬಸ್ಥರು ವಿಮೆ ಹಣ ಪಡೆಯಬಹುದು. ಆದರೆ ಹಾಗೆಯೇ ಕುಡಿದು ಕುಡಿದು ಸತ್ತರೆ ವಿಮೆ ಹಣಕ್ಕೆ ಅವರು ಅರ್ಹರಲ್ಲ ಎಂದಿದೆ ಕೋರ್ಟ್‌. ಇದಕ್ಕೆ ಕಾರಣ ಕೊಟ್ಟಿರುವ ನ್ಯಾಯಮೂರ್ತಿಗಳು, ಈ ಪ್ರಕರಣದಲ್ಲಿ ಸಾವು ಆಕಸ್ಮಿಕವಲ್ಲ. ಕುಡಿದು ಕುಡಿದು ಸತ್ತ ಕಾರಣ, ಇಂಥ ಪ್ರಕರಣಗಳಲ್ಲಿ ಸತ್ತವರ ಪ್ರಾಣಹಾನಿಯನ್ನು ಸರಿದೂಗಿಸಲು ಸಂಸ್ಥೆಗೆ ಯಾವುದೇ ಶಾಸನಬದ್ಧ ಬಾಧ್ಯತೆಯಿಲ್ಲ ಎಂದು ಹೇಳಿದೆ.

Edited By

venki swamy

Reported By

venki swamy

Comments