ಪೆಟ್ರೋಲ್-ಡಿಸೇಲ್, ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್!

26 Feb 2021 12:20 PM | General
348 Report

ಪೆಟ್ರೋಲ್-ಡಿಸೇಲ್, ಎಲ್ಪಿಜಿ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದ್ದು, ಮಾರ್ಚ್ 1ರಿಂದ ನೂತನ ದರ ಜಾರಿಗೆ ಬರುವ ಸಾಧ್ಯತೆ ಇದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಸಾರಿಗೆ ವೆಚ್ಚ ಹೆಚ್ಚಾಗಿದ್ದು, ಇದನ್ನು ಸರಿದೂಗಿಸಲು ಹಾಲು ಪ್ರತಿ ಲೀಟರ್ ಗೆ 12 ರೂ.ಗೆ ಏರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.ಇದೇ ಮಾರ್ಚ್​ 1 ರಿಂದ ಮಧ್ಯಪ್ರದೇಶದಲ್ಲಿ ಹಾಲಿನ ದರ ಹೆಚ್ಚಳಗೊಳ್ಳಲಿದೆ. ಇಲ್ಲಿನ ಕಾಲಿಕಾ ಮಾತಾ ಕ್ಯಾಂಪಸ್​ನಲ್ಲಿ ನಡೆದ ಹಾಲು ಉತ್ಪಾದಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 25 ಗ್ರಾಮಗಳ ಹಾಲು ಉತ್ಪಾದಕರು ಈ ಸಭೆಯಲ್ಲಿ ಭಾಗಿಯಾಗಿದ್ದು, ಬೆಲೆ ಹೆಚ್ಚಳಕ್ಕೆ ಸಹಮತ ಸೂಚಿಸಿದ್ದಾರೆ.

Edited By

venki swamy

Reported By

venki swamy

Comments