ಎಲ್ಪಿಜಿ ಸಿಲಿಂಡರ್ಗಳ ಬೆಲೆ ತಿಂಗಳಲ್ಲಿ ಮೂರನೇ ಬಾರಿಗೆ ಏರಿಕೆ

25 Feb 2021 2:43 PM | General
326 Report

ಈಗಾಗಲೇ ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದಾಗಿ ಜನಸಾಮಾನ್ಯರು ಬೇಸತ್ತಿದ್ದಾರೆ. ಇದರ ನಡುವೆ ಸರ್ಕಾರಿ ತೈಲ ಕಂಪನಿಗಳು ದೇಶೀಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಿವೆ.

ಸರ್ಕಾರಿ ತೈಲ ಕಂಪನಿಗಳು ಅಡುಗೆ ಅನಿಲ ದರವನ್ನು 25 ರೂ.ಗೆ ಏರಿಸಿದೆ. ಈ ಮೂಲಕ 14.2 ಕೆಜಿ ತೂದ ಸಬ್ಸಿಡಿ ಅಡುಗೆ ಅನಿಲ ದರ ಸಿಲಿಂಡರ್ ಗೆ 794 ರೂ.ಗೆ ಏರಿಕೆಯಾಗಿದೆ.

ಈ ಹಿಂದೆ ಅಂದರೆ ಫೆಬ್ರವರಿ 4 ರಂದು ಗೃಹ ಬಳಕೆ ಸಿಲಿಂಡರ್‌ ದರವನ್ನು 25 ರೂಪಾಯಿ ಏರಿಕೆ ಮಾಡಲಾಗಿತ್ತು. ಆ ಬಳಿಕ ಫೆಬ್ರವರಿ 15 ರಂದು 50 ರೂಪಾಯಿ ಏರಿಕೆ ಮಾಡಲಾಗಿತ್ತು.ಇದೀಗ ಮತ್ತೆ 25 ರೂಪಾಯಿ ಏರಿಕೆ ಮಾಡಲಾಗಿದ್ದು, ಫೆಬ್ರವರಿ ತಿಂಗಳೊಂದರಲ್ಲೇ ಸಿಲಿಂಡರ್‌ ಬೆಲೆಯಲ್ಲಿ 100 ರೂಪಾಯಿ ಏರಿಕೆಯಾದಂತಾಗಿದೆ.

Edited By

venki swamy

Reported By

venki swamy

Comments