ಫೆ. 22ರಿಂದ 6ನೇ ತರಗತಿಯಿಂದಲೇ ಪೂರ್ಣ ಪ್ರಮಾಣದಲ್ಲಿ ಶಾಲೆಗಳ ಒಪನ್ ಗೆ ಗ್ರೀನ್ ಸಿಗ್ನಲ್

16 Feb 2021 12:57 PM | General
281 Report

ರಾಜ್ಯದಲ್ಲಿ ಇದೇ 22ರಿಂದ 6ನೇ ತರಗಯಿಂದಲೇ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಆರಂಭವಾಗಲಿದೆ' ಬೆಂಗಳೂರು ನಗರ ಹಾಗೂ ಕೇರಳ ಗಡಿ ಭಾಗದ ಶಾಲೆಗಳಲ್ಲಿ ಕೇವಲ 8ನೇತರಗತಿ ಮಾತ್ರ ಆರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ತಿಳಿಸಿದರು.

ಇಂದು ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುರೇಶ್ ಕುಮಾರ್, ಎರಡನೇ ಕೋವಿಡ್ ಅಲೆ ಸಾಧ್ಯತೆ ಇತ್ಯಾದಿ ವಿಚಾರವನ್ನೆಲ್ಲಾ ಇಟ್ಟುಕೊಂಡು ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ. ಮಕ್ಕಳು ಶಾಲೆಗೆ ಬರೋದು ಕಡ್ಡಾಯವಲ್ಲ, ಕೊಠಡಿಗಳ ಲಭ್ಯತೆಯನ್ನು ಆಧಾರಿಸಿ ಮುಂದಿನ ದಿನಗಳಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗುವುದು, ಇದಲ್ಲದೇ ಎಲ್ಲಾ ಜಿಲ್ಲೆಗಳ ಹಾಸ್ಟೆಲ್‌ಗಳನ್ನು ತೆರೆಯುವುಕ್ಕೆ ಆದೇಶ ಮಾಡಲಾಗಿದ್ದು, ಇದರಿಂದ ಮಕ್ಕಳಿಗೆ ಸಹಾಯವಾಗಲಿದೆ. ಶಾಲೆ ಆರಂಭವಾಗುವುದಕ್ಕೂ ಮುನ್ನ ಎಲ್ಲಾ ಜಿಲ್ಲೆಗಳ ಡಿಸಿಗಳ ಜೊತೆಗೆ ವಿಡಿಯೋ ಕಾನ್ಪೇರೆನ್ಸ್‌ ಮೂಲಕ ಮಾತನಾಡಲಾಗುವುದು ಇದಲ್ಲದೇ 1 ರಿಂದ 5 ನೇ ತರಗತಿಗಳನ್ನು ವಿದ್ಯಾಗಮನ ಮೂಲಕ ಶುರು ಮಾಡಲಾಗುವುದು ತದನಂತರ ಮುಂಬರುವ ದಿನಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಅಂತ ಹೇಳಿದರು.

Edited By

venki swamy

Reported By

venki swamy

Comments