ಬೆಂಗಳೂರಿನಲ್ಲಿ ಮನೆ, ರಸ್ತೆ ಬಳಿ ವಾಹನ ನಿಲುಗಡೆಗೆ ಶುಲ್ಕ ನಿಗದಿ

12 Feb 2021 12:54 PM | General
338 Report

ನಗರದಲ್ಲಿ ಮನಸೋ ಇಚ್ಛೆ ವಾಹನ ನಿಲ್ಲಿಸುವುದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರಕಾರ, ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ಪಾವತಿ ಪಾರ್ಕಿಂಗ್ ವ್ಯವಸ್ಥೆಗೆ ಬದಲಾಯಿಸಲು 'ಪಾರ್ಕಿಂಗ್ ನೀತಿ-2.0'ಯನ್ನು ನಗರ ಭೂ ಸಾರಿಗೆ ನಿರ್ದೇಶನಾಲಯದ ಪರಿಷ್ಕೃತ ಪಾರ್ಕಿಂಗ್ ನೀತಿಗೆ ಅನುಮೋದನೆ ನೀಡಲಾಗಿದೆ.

ಹೊಸ ಪಾರ್ಕಿಂಗ್ ನೀತಿಯ ಕರಡು ಪ್ರತಿಯಲ್ಲಿರುವ ಅಂಶಗಳ ಪ್ರಕಾರ, ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಲು ಜನರು ಶುಲ್ಕ ಪಾವತಿಸಬೇಕು. ವಾಣಿಜ್ಯ ಸ್ಥಳಗಳಲ್ಲಿ ಈ ಶುಲ್ಕದ ಪ್ರಮಾಣ ಹೆಚ್ಚಾಗಿರುತ್ತದೆ. ಅಲ್ಲದೇ, ಗಂಟೆಯ ಲೆಕ್ಕದಲ್ಲಿ ಶುಲ್ಕ ವಿಧಿಸಲಾಗುತ್ತದೆ. ಅಷ್ಟೇ ಅಲ್ಲ, ನಿಮ್ಮ ಮನೆ ಬಳಿ ವಾಹನ ನಿಲ್ಲಿಸುವುದಕ್ಕೂ ಶುಲ್ಕ ಪಾವತಿಸಬೇಕಾಗುತ್ತದೆ. ವಸತಿ ಪ್ರದೇಶಗಳಲ್ಲಿ ಪಾರ್ಕಿಂಗ್ ಜಾಗವನ್ನ ನಿರ್ಮಿಸಿ ಅಲ್ಲಿ ಹಣ ಪಾವತಿಸಿ ವಾಹನಗಳನ್ನ ನಿಲ್ಲಿಸಲು ಅವಕಾಶ ಮಾಡಿಕೊಡುವ ಯೋಜನೆ ಇದೆ.

ವಸತಿ ಪ್ರದೇಶದ ( ವಾರ್ಡ್ ಮಟ್ಟದಲ್ಲಿ ) ಪಾರ್ಕಿಂಗ್ ಶುಲ್ಕ
ಸಣ್ಣ ಕಾರುಗಳು - 1000 ರೂ.
ಮಧ್ಯಮ ಕಾರುಗಳು- 3000-4000 ರೂ.
ಎಂ​ಯುವಿ, ಎಸ್​ಯುವಿ - 5000

ಇನ್ನು ಪ್ರತೀ ಗಂಟೆಗೆ ಪಾರ್ಕಿಂಗ್ ಸಮಯ ಹೆಚ್ಚಿದಂತೆ ಹೆಚ್ಚುವರಿ ಪಾರ್ಕಿಂಗ್ ಶುಲ್ಕ ವಿಧಿಸಲು ಕೂಡ ಪಾಲಿಸಿಯಲ್ಲಿ ನಿಯಮ ರೂಪಿಸಲು ಅವಕಾಶವಿದೆ. ಈ ರೀತಿ ಪಾರ್ಕಿಂಗ್ ಶುಲ್ಕ ವಿಧಿಸುವುದರಿಂದ ಜನರು ಖಾಸಗಿ ವಾಹನ ಬಿಟ್ಟು, ಸಾರ್ವಜನಿಕ ವಾಹನ ಓಡಾಟಕ್ಕೆ ಪ್ರೋತ್ಸಾಹ ಸಿಗಲು ಪಾರ್ಕಿಂಗ್ ನೀತಿ ಜಾರಿಗೊಳಿಸಲಾಗುತ್ತಿದೆ ಎಂದು ಸರ್ಕಾರ ಈ ನೀತಿ ರೂಪಿಸಿದೆ.

Edited By

venki swamy

Reported By

venki swamy

Comments