ಕೃಷಿ ಪ್ರತಿಭಟನೆಯಲ್ಲಿ ಭಾಗಿಯಾಗಲು ದಿಲ್ಲಿಯತ್ತ ಹೊರಟ ಹರಿಯಾಣ ರೈತರ ಮೇಲೆ ಅಶ್ರುವಾಯು ಪ್ರಯೋಗ
ಕೃಷಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಗುಂಪಿಗೆ ಸೇರಲು ಅವರತ್ತ ಸಾಗುತ್ತಿದ್ದ ಹರ್ಯಾಣದ ರೈತರನ್ನು ರವಿವಾರ ಪೊಲೀಸರು ತಡೆದಿದ್ದಾರೆ. ಈ ವೇಳೆ ಘರ್ಷಣೆ ಉಂಟಾಗಿದ್ದು, ಪೊಲೀಸರು ಅಶ್ರುವಾಯು ಸಿಡಿಸಿದ ಘಟನೆಯೂ ನಡೆಯಿತು.
ರೆವಾರಿ- ಅಲ್ವಾರ್ ಗಡಿಯಲ್ಲಿ ಈ ಘರ್ಷಣೆ ನಡೆದಿದ್ದು, ಪೊಲೀಸರ ತಡೆಯನ್ನು ಮುರಿದು ಮುಂದೆ ಹೋಗಲು ಯತ್ನಿಸಿದ್ದ ರೈತರ ಮೇಲೆ ಪೊಲೀಸರು ಕೆಲವು ಸುತ್ತು ಅಶ್ರುವಾಯು ಸಿಡಿದ್ದಾರೆ. ನಂತರ ಪೊಲೀಸರು ರೈತರನ್ನು ಮಾಸನಿ ಎಂಬಲ್ಲಿನ ಮೇಲ್ಸೇತುವೆಯಲ್ಲಿ ತಡೆದಿದ್ದಾರೆ.
ಈವರೆಗೆ 46 ಪ್ರತಿಭಟನಾನಿರತ ರೈತರು ಸಾವಿಗೀಡಾಗಿದ್ದಾರೆ. ಇತ್ತ ರೈತರ ಪ್ರತಿಭಟನೆ ಇಂದಿಗೆ 40ನೇ ದಿನಕ್ಕೆ ಕಾಲಿಟ್ಟಿದೆ. ಇಂದು ರೈತರ ಜೊತೆ ಕೇಂದ್ರ ಸರ್ಕಾರ 7ನೇ ಸುತ್ತಿನ ಮಾತು-ಕತೆ ನಡೆಸಲಿದೆ.
Comments