ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೇ ಏರಿಕೆ
ದೇಶದಲ್ಲಿ ಕೆಲ ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಕಾಣುತ್ತಲೇ ಇದೆ. ಇದರ ಬೆನ್ನಲ್ಲೆ ಇದೀಗ ಸಿಲಿಂಡರ್ ದರ ಇತ್ತೀಚೆಗೆ ಏರಿಕೆ ಯಾದ ನಂತರ 50 ರೂ.ಗೆ ಏರಿಕೆಯಾಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ದೆಹಲಿ ಮತ್ತು ಮುಂಬೈನಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ 694 ರೂಪಾಯಿ, ಕೋಲ್ಕತಾದಲ್ಲಿ 720.50 ರೂ., ಚೆನ್ನೈನಲ್ಲಿ 710 ರೂ. ಈ ದರಗಳು ಡಿಸೆಂಬರ್ 15ರಿಂದ ಜಾರಿಗೆ ಬಂದಿದೆ. ಕೋಲ್ಕತ್ತಾದಲ್ಲಿ 620.50 ರೂ. ಇದ್ದ ಸಿಲಿಂಡರ್ ಬೆಲೆ 670.50 ರೂ ಆಗಿದ್ದರೇ ಮುಂಬೈನಲ್ಲಿ 644 ಮತ್ತು ಚೆನ್ನೈನಲ್ಲಿ 660 ರೂ. ಹೆಚ್ಚಳವಾಗಿದೆ. ಇನ್ನು ವಾಣಿಜ್ಯ ಸಿಲಿಂಡರ್‍ನ ಬೆಲೆ 54.50 ರೂ. ಏರಿಸಲಾಗಿದೆ. ಈಗ ದೆಹಲಿಯಲ್ಲಿ ಇದರ ಬೆಲೆ 1,296 ರೂ.ಯಷ್ಟಾಗಿದೆ.
Comments