ರಜನಿಕಾಂತ್ ಜನವರಿಯಲ್ಲಿ ಪಕ್ಷ ಸ್ಥಾಪನೆ ಬಗ್ಗೆ ಘೋಷಣೆ

03 Dec 2020 3:35 PM | General
255 Report

ಭಾರತೀಯ ಚಿತ್ರರಂಗದ ಖ್ಯಾತ ನಟ ರಜನಿಕಾಂತ್ ಅವರು ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ನೀಡುವುದು ಖಚಿತ ಆಗಿದೆ. ಈ ಬಗ್ಗೆ ಅವರೇ ಸ್ವತಃ ಟ್ವೀಟ್ ಮಾಡಿದ್ದು, 'ಪಕ್ಷವನ್ನು ಜನವರಿಯಲ್ಲಿ ಲಾಂಚ್ ಮಾಡಲಿದ್ದೇನೆ. ಈ ಕುರಿತಂತೆ ಡಿ.31ರಂದು ಘೋಷಣೆ ಮಾಡಲಾಗುವುದು' ಎಂದು ತಿಳಿಸಿದ್ದಾರೆ.

ಇನ್ನೇನು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಜನಿಕಾಂತ್ ಅವರ ರಾಜಕೀಯ ಪಕ್ಷದ ಘೋಷಣೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ರಜಿನಿ ಮಕ್ಕಳ್ ಮಂಡ್ರಂ ಹಿರಿಯ ಪದಾಧಿಕಾರಿಗಳ ಜೊತೆ ರಜನಿಕಾಂತ್ ಮಹತ್ವದ ಸಭೆ ನಡೆಸಿದ ಬೆನ್ನಲ್ಲೇ ಹೊಸ ಪಕ್ಷದ ಘೋಷಣೆ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ನಡೆದ ಸಭೆಯಲ್ಲಿ ಆರ್‌ಎಂಎಂ ಸಂಘಟನೆಯ ಮುಖಂಡರು ರಜನಿಕಾಂತ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೂ ಮುನ್ನ ರಜನಿಕಾಂತ್ ಅವರಿಗೆ ವೈದ್ಯರು ಬರೆದಿದ್ದರೆನ್ನಲಾದ ಪತ್ರ ವೈರಲ್ ಆಗಿತ್ತು. ಕೋವಿಡ್ ಸೋಂಕಿನ ಭೀತಿಯ ಕಾರಣದಿಂದ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ರಜನಿಕಾಂತ್ ಸಾರ್ವಜನಿಕವಾಗಿ ಓಡಾಡುವುದರಿಂದ ದೂರ ಇರಬೇಕು. ಹೀಗಾಗಿ ರಾಜಕೀಯ ಪ್ರವೇಶ ಬೇಡ ಎಂದು ವೈದ್ಯರು ಸಲಹೆ ನೀಡಿದ್ದರು.

Edited By

venki swamy

Reported By

venki swamy

Comments