ರಾಜ್ಯದಲ್ಲಿ ನಾಳೆಯಿಂದ ಡಿಗ್ರಿ ಕಾಲೇಜ್ ಶುರು
ರಾಜ್ಯದಲ್ಲಿ ಅಧಿಕೃತವಾಗಿ ಶೈಕ್ಷಣಿಕ ವರ್ಷಾರಂಭಕ್ಕೆ ಮುಹೂರ್ತ ನಿಗದಿಯಾಗಿದ್ದು, ಮಂಗಳವಾರದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ಗಳ ತರಗತಿಗಳು ಆರಂಭವಾಗಲಿವೆ.
ಕೊರೋನಾದಿಂದ ಕಳೆದ 6 ತಿಂಗಳಿದ್ದ ಕಾಲೇಜುಗಳು ಬಂದ್ ಆಗಿದ್ದವು. ಇದೀಗ ಮೊದಲ ಹಂತದಲ್ಲಿ ಅಂತಿಮ ವರ್ಷದ ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜುಗಳು ಆರಂಭವಾಗಲಿದ್ದು, ಹಂತ ಹಂತವಾಗಿ ಕಾಲೇಜುಗಳ ಓಪನ್ಗೆ ಸಿದ್ದತೆ ನಡೆಸಲಾಗಿದೆ. ಇನ್ನೂ ಕಾಲೇಜಿನ ಪ್ರತಿ ಬೇಂಚ್ನ ನಡುವೆ 6 ಅಡಿ ಅಂತರ ಪಾಲನೆಗೆ ಸೂಚನೆ ನೀಡಿದ್ದು, ಈಗಾಗಲೇ ಸಿಬ್ಬಂದಿ ಕಾಲೇಜು ಆವರಣ, ಕ್ಲಾಸ್ ರೂಂಗಳನ್ನ ಸ್ಯಾನಿಟೈಸ್ ಮಾಡ್ತಿದ್ದಾರೆ. ಇನ್ನೂ ಕಾಲೇಜಿನ ಶಿಕ್ಷಕರಿಗೆ, ಶಿಕ್ಷಕೇತರ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿದ್ದು, ಕಾಲೇಜಿನ ಆವರಣದಲ್ಲಿ ಗುಂಪು ಸೇರದಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ.
ಕಾಲೇಜ್‍ಗೆ ಬರಲು ಆಗದ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿ ನೀಡಬೇಕು. ಹೆಚ್ಚು ವಿದ್ಯಾರ್ಥಿಗಳು ಇದ್ದರೆ ಪಾಳಿ ವ್ಯವಸ್ಥೆಯಲ್ಲಿ ತರಗತಿ ನಡೆಸಬಹುದು. ವಿದ್ಯಾರ್ಥಿಗಳು ಮನೆಯಿಂದಲೇ ಊಟ, ಕುಡಿಯುವ ನೀರನ್ನು ತರಬೇಕು. ಅಧ್ಯಾಪಕರು ವಿದ್ಯಾರ್ಥಿಗಳಿಗೆ ಕನಿಷ್ಠ ಒಂದು ತಿಂಗಳ ಅಧ್ಯಯನ ಸಾಮಗ್ರಿ ನೀಡಬೇಕು. ಹಾಸ್ಟೆಲ್‍ಗಳಲ್ಲಿ ಉಳಿದುಕೊಳ್ಳಲು ವಿದ್ಯಾರ್ಥಿಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಡಬೇಕು.
Comments