ರಿಪಬ್ಲಿಕ್ ಟಿವಿ ಹಿರಿಯ ಪತ್ರಕರ್ತ ಅರ್ನಬ್ ಗೋಸ್ವಾಮಿ ಬಂಧನ

04 Nov 2020 11:21 AM | General
351 Report

ಬುಧವಾರ ಮಾಧ್ಯಮ ಲೋಕದಲ್ಲಿ ನಡೆದ ಮಹತ್ವದ ಬೆಳವಣಿಗೆಯಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಮನೆಗೆ ಮುಂಬೈ ಪೊಲೀಸರು ಆಗಮಿಸಿದ್ದಾರೆ.

ಪೊಲೀಸರು ನ್ಯಾಯಾಲಯದಿಂದ ಯಾವುದೇ ಸಮನ್ಸ್ ಪಡೆದುಕೊಂಡಿಲ್ಲ. ಟಿ.ಆರ್.ಪಿ. ಪ್ರಕರಣದ ತನಿಖೆ, ವಿಚಾರಣೆ ಉದ್ದೇಶದಿಂದ ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಇದೇ ಟಿ.ಆರ್.ಪಿ. ಪ್ರಕರಣದ ತನಿಖೆ ಕೈಗೊಂಡಿರುವ ಮುಂಬೈ ಪೊಲೀಸರು ಮರಾಠಿ ವಾಹಿನಿಗಳ ಇಬ್ಬರು ಸಂಪಾದಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬುಧವಾರ ಬೆಳಗ್ಗೆ ರಿಪಬ್ಲಿಕ್ ಟಿವಿ ಮಾಲೀಕ ಮತ್ತು ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿ ನಿವಾಸದ ಮೇಲೆ ದಾಳಿ ಮಾಡಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಅಪರಾಧಿ ಎನ್ನುವಂತೆ ಅವರನ್ನು ಎಳೆದುಕೊಂಡು ಹೋಗಲಾಗಿದೆ. ಪೊಲೀಸರು ತಮ್ಮ ಮೇಲೆ ಹಲ್ಲೆ ಮಾಡಿರುವುದಾಗಿ ಅರ್ನಾಬ್ ಗೋಸ್ವಾಮಿ ಆರೋಪಿಸಿದ್ದಾರೆ.

ಮೇ 2018 ರಲ್ಲಿ ಅಲಿಬಾಗ್‌ನಲ್ಲಿ 53 ವರ್ಷದ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ್ ನಾಯಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಾತ್ರವಲ್ಲದೆ ಡೆತ್ ನೋಟ್ ನಲ್ಲಿ ಅನ್ವಯ್ ಕುಮಾರ್, ತನ್ನ ಸಾವಿಗೆ ಫಿರೋಜ್ ಶೇಕ್ ಮತ್ತು ನಿತೀಶ್ ಸಾರ್ದ ಹಾಗೂ ಅರ್ನಬ್ ಗೋಸ್ವಾಮಿ ಅವರೇ ಕಾರಣ ಎಂದು ತಿಳಿಸಿದ್ದರು. ಈ ಮೂವರು ತನಗೆ 5.40 ಕೋಟಿ ಹಣವನ್ನು ಪಾವತಿಸದೆ, ಹಣಕಾಸಿನ ನಿರ್ಬಂಧ ಹೇರಿದ್ದಾರೆ ಎಂದು ಆರೋಪಿಸಿದ್ದರು.

Edited By

venki swamy

Reported By

venki swamy

Comments