ಅಸ್ಟ್ರಾಜೆನೆಕಾ 'ಕರೋನ ಲಸಿಕಾ' ಪ್ರಯೋಗದ ವೇಳೆ ಬ್ರೆಜಿಲ್ನಲ್ಲಿ ಸ್ವಯಂಸೇವಕ ಸಾವು!

22 Oct 2020 10:36 AM | General
307 Report

ಇಡೀ ವಿಶ್ವಕ್ಕೆ ಮಾರಕವಾಗಿರುವ ಕೊರೋನಾ ಸೋಂಕಿಗೆ ಈಗಾಗಲೇ ಲಕ್ಷಾಂತರ ಜನ ಮೃತಪಟ್ಟಿದ್ದಾರೆ. ಕೋಟ್ಯಾಂತರ ಜನ ಈ ಸೋಂಕಿಗೆ ತುತ್ತಾಗಿದ್ದಾರೆ. ಭಾರತದಲ್ಲೂ ಸಹ ಲಕ್ಷಾಂತರ ಜನರ ಜೀವಕ್ಕೆ ಕುತ್ತು ತಂದಿರುವ ಕೊರೋನಾಗೆ ಲಸಿಕೆ ಕಂಡುಹಿಡಿಯಲು ವಿಶ್ವದ ಅನೇಕ ಫಾರ್ಮಾ ಸಂಸ್ಥೆಗಳು ದೇಶಗಳು ಕಳೆದ ಒಂದು ವರ್ಷದಿಂದ ಸತತ ಸಂಶೋಧನೆಯಲ್ಲಿ ತೊಡಗಿವೆ. ಅಸ್ಟ್ರಾಜೆನೆಕಾ' ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದ್ದ ಕೋವಿಡ್ -19 ಲಸಿಕೆಯ ಕ್ಲಿನಿಕಲ್ ಪ್ರಯೋಗದಲ್ಲಿ ಸ್ವಯಂ ಸೇವಕರೊಬ್ಬರು ಮೃತಪಟ್ಟಿದ್ದಾರೆ ಎಂದು ಬ್ರೆಜಿಲ್ನ ಆರೋಗ್ಯ ಪ್ರಾಧಿಕಾರ 'ಅನ್ವಿಸಾ (ನ್ಯಾಷನಲ್ ಸ್ಯಾನಿಟರಿ ಸರ್ವೈಲೆನ್ಸ್ ಏಜೆನ್ಸಿ) ಬುಧವಾರ ತಿಳಿಸಿದೆ. ಅಲ್ಲದೆ, ಪ್ರಕರಣದ ತನಿಖೆಯ ಮಾಹಿತಿಯನ್ನು ಅದು ಪಡೆದುಕೊಂಡಿರುವುದಾಗಿ ಹೇಳಿದೆ.

ಬ್ರೆಜಿಲ್‌ನಲ್ಲಿ ಲಸಿಕೆಯ 3ನೇ ಹಂತದ ಕ್ಲಿನಿಕಲ್ ಟ್ರಯಲ್‌ಗೆ ನೆರವಾಗಿರುವ ಸಾವೊ ಪಾಲೊನ ಫೆಡರಲ್ ವಿಶ್ವವಿದ್ಯಾಲಯ ಸಾವಿನ ಕುರಿತು ಪ್ರತಿಕ್ರಿಯಿಸಿದ್ದು, 'ಸ್ವಯಂಸೇವಕ ಬ್ರೆಜಿಲ್‌ನವರೇ. ಆದರೆ, ಆ ವ್ಯಕ್ತಿ ಎಲ್ಲಿಯವರು ಎಂದು ಹೇಳಲಾಗದು,' ಎಂದಿದೆ. ಕೊರೊನಾ ವೈರಸ್‌ನಿಂದಾಗಿ ಅತಿಹೆಚ್ಚು ಮೃತಪಟ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಬ್ರೆಜಿಲ್‌ ಎರಡನೇ ಸ್ಥಾನದಲ್ಲಿದೆ. ಅಮೆರಿಕ ಮೊದಲ ಸ್ಥಾನದಲ್ಲಿದೆ, ಇನ್ನೂ ಭಾರತ ಮೂರನೇ ಸ್ಥಾನದಲ್ಲಿದೆ.

Edited By

venki swamy

Reported By

venki swamy

Comments