14 ದಿನದ ಮಗುವಿನ ಜೊತೆ ಸೇವೆಗೆ ಹಾಜರಾದ ಐಎಎಸ್ ಅಧಿಕಾರಿ
ಗಾಜಿಯಾಬಾದ್ ಜಿಲ್ಲೆಯ ಕೋವಿಡ್ ನೋಡಲ್ ಅಧಿಕಾರಿಯಾಗಿದ್ದ ಸೌಮ್ಯ ಪಾಂಡೆ ಅವರು ಮಗುವಿಗೆ ಜನ್ಮ ನೀಡಿ ಕೇವಲ ಎರಡೇ ವಾರಗಳಲ್ಲಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಉತ್ತರ ಪ್ರದೇಶದ ಮೋದಿ ನಗರದಲ್ಲಿರುವ ಸರ್ಕಾರಿ ಕಚೇರಿಯಲ್ಲಿ ಮಗುವನ್ನ ಆರೈಕೆ ಮಾಡ್ತಾ ಕರ್ತವ್ಯ ನಿರ್ವಹಿಸ್ತಾ ಇರೋ ಸೌಮ್ಯಾ ಪಾಂಡೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಕಷ್ಟು ಮಂದಿ ಸೌಮ್ಯ ಪಾಂಡೆ ಕೆಲಸಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸೆಲ್ಯೂಟ್ ಹೊಡೆದಿದ್ರೆ, ಇನ್ನು ಕೆಲವರು ಕೋವಿಡ್ ನಂತಹ ಕಠಿಣ ಸಂದರ್ಭದಲ್ಲಿ ಇಂತಹ ನಿರ್ಧಾರ ಬೇಕಿತ್ತಾ ಅಂತಾ ಪ್ರಶ್ನೆ ಮಾಡ್ತಿದ್ದಾರೆ .
ಎನ್‌ಎನ್‌ಐ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿರುವ ಸೌಮ್ಯ, 'ನಾನು ಐಎಎಸ್ ಅಧಿಕಾರಿ, ಹಾಗಾಗಿ ನಾನು ನನ್ನ ಸೇವೆಯ ಕಡೆಗೆ ಗಮನ ನೀಡಲೇಬೇಕಿದೆ. ಕೋವಿಡ್-19ನಿಂದಾಗಿ ಎಲ್ಲರ ಮೇಲೆಯೂ ಹೆಚ್ಚಿನ ಹೊಣೆಗಾರಿಕೆ ಇದೆ. ಮಗುವಿಗೆ ಜನ್ಮ ನೀಡುವ ಹಾಗೂ ಆರೈಕೆ ಮಾಡುವ ಸಾಮರ್ಥ್ಯವನ್ನು ದೇವರು ಮಹಿಳೆಗೆ ನೀಡಿದ್ದಾರೆ. ಭಾರತದ ಗ್ರಾಮೀಣ ಭಾಗಗಳಲ್ಲಿ ಗರ್ಭಿಣಿಯು ಪ್ರಸವಕ್ಕೂ ಮುಂಚೆ ಜೀವನೋಪಾಯದ ಕೆಲಸಗಳು ಹಾಗೂ ಮನೆಯ ನಿರ್ವಹಣೆಯ ಎಲ್ಲ ಕೆಲಸಗಳನ್ನು ಮಾಡುತ್ತಿರುತ್ತಾಳೆ ಹಾಗೂ ಪ್ರಸವದ ಬಳಿಕ, ಮಗುವಿನ ಆರೈಕೆ ಜೊತೆಗೆ ಮನೆ ಮತ್ತು ಇತರೆ ಕೆಲಸಗಳನ್ನು ನಿರ್ವಹಿಸುತ್ತಾಳೆ. ಹಾಗೆಯೇ, ದೇವರ ಆಶೀರ್ವಾದದೊಂದಿಗೆ ನಾನೂ ಸಹ ಆಡಳಿತದ ಕಾರ್ಯಗಳನ್ನು ನಿರ್ವಹಿಸುತ್ತಿದ್ದೇನೆ ಹಾಗೂ ನನ್ನ ಮಗುವಿನ ಆರೈಕೆಯನ್ನೂ ಮಾಡುತ್ತಿದ್ದೇನೆ' ಎಂದು ಅನುಭವ ಹಂಚಿಕೊಂಡಿದ್ದಾರೆ.
Comments