ಬ್ರಹ್ಮೋಸ್ ಕ್ಷಿಪಣಿಯ ಹೊಸ ಆವೃತ್ತಿ ಯಶಸ್ವಿ ಪರೀಕ್ಷೆ
ಭಾರತದ ಮೂರು ಸಶಸ್ತ್ರ ಪಡೆಗಳ ಬತ್ತಳಿಕೆಗೆ ಮತ್ತೊಂದು ಅತ್ಯಾಧುನಿಕ ಶಸ್ತ್ರಾಸ್ತ್ರ ಸೇರ್ಪಡೆಯಾಗಲಿದೆ. ಭೂ ಸೇನೆ, ವಾಯು ಪಡೆ, ಮತ್ತು ನೌಕಾ ದಳ - ಈ ಮೂರು ಸಶಸ್ತ್ರ ಪಡೆಗಳಿಗೂ ಅತ್ಯಂತ ಉಪಯುಕ್ತವಾದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗದಲ್ಲಿ ಭಾರತ ಯಶಸ್ಸು ಸಾಸಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಪಿಜೆ-10 ಯೋಜನೆಯಡಿ ಈ ಪರೀಕ್ಷಾರ್ಥ ಉಡಾವಣೆ ನಡೆಸಲಾಯಿತು. ಓಡಿಶಾದಲ್ಲಿರುವ ಕೇಂದ್ರದಿಂದ ಕ್ಷಿಪಣಿಯನ್ನು ದೇಶೀಯ ಬೂಸ್ಟರ್ ಮೂಲಕ ಉಡಾಯಿಸಲಾಗಿದೆ. ಕ್ಷಿಪಣಿ ಉಡಾವಣೆ ಯಶಸ್ವಿಯಾಗಿರುವುದಕ್ಕೆ ಡಿಆರ್ಡಿಒ ಅಧ್ಯಕ್ಷ ಡಾ. ಜಿ. ಸತೀಶ್ ರೆಡ್ಡಿ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಸೂಪರ್ಸಾನಿಕ್ ಕ್ರೂಯಿಸ್ ಕ್ಷಿಪಣಿಗೆ ಇನ್ನಷ್ಟು ದೇಶೀಯ ಅಂಶಗಳ ಸೇರ್ಪಡೆಗೆ ಇದರಿಂದ ಸಹಾಯವಾಗಲಿದೆ ಎಂದು ಅವರು ಹೇಳಿದ್ದಾರೆ. ಇದು ವಿಸ್ತರಿತ ವ್ಯಾಪ್ತಿಯ ಕ್ಷಿಪಣಿಯ ಎರಡನೇ ಪರೀಕ್ಷೆಯಾಗಿದೆ. ಈ ಕ್ಷಿಪಣಿಯಲ್ಲಿ ದೇಶೀಯವಾಗಿ ಅಭಿವೃಧಿಪಡಿಸಲಾದ ಏರ್ಫ್ರೇಮ್ ಮತ್ತು ಬೂಸ್ಟರ್ಗಳಿವೆ. ಡಿಆರ್ಡಿಒ ಮತ್ತು ರಷ್ಯಾದ ಎನ್ಪಿಒ ಮಷಿನೊಸ್ತ್ರೊಯೆನಿಯಾ (ಎನ್ಪಿಎಂಒ) ಜಂಟಿಯಾಗಿ ಈ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿವೆ.
ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಯಶಸ್ವಿ ಪರೀಕ್ಷಾ ಉಡಾವಣೆಯೊಂದಿಗೆ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಇದು ಕಾರ್ಯಾಚರಣಾ ಸಾಮರ್ಥ್ಯಗಳು ಮತ್ತು ಹೆಚ್ಚುವರಿ ಸ್ಥಳೀಯ ತಂತ್ರಜ್ಞಾನಗಳನ್ನು ಪ್ರದರ್ಶಿಸುತ್ತದೆ. ಎಲ್ಲಾ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಅಭಿನಂದನೆಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
Comments