ಡ್ರಗ್ಸ್ ಜಾಲದಲ್ಲಿ ತುಪ್ಪದ ಹುಡುಗಿ,ನಿವಾಸದ ಶೋಧ ಕಾರ್ಯ ಮುಕ್ತಾಯ; ಸಿಸಿಬಿ ವಶಕ್ಕೆ ರಾಗಿಣಿ..!

04 Sep 2020 11:55 AM | General
282 Report

ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ವಿಚಾರ ಹೊತ್ತುರಿಯುತ್ತಿದೆ. ಸಾಕಷ್ಟು ನಟ-ನಟಿಯರ ಹೆಸರು ಕೇಳಿ ಬರುತ್ತಿದ್ದು, ಎಲ್ಲರಿಗೂ ಸಿಸಿಬಿ ಪೊಲೀಸರು ನೋಟಿಸ್ ನೀಡುತ್ತಿದ್ದಾರೆ. ಇನ್ನು, ಡ್ರಗ್ಸ್ ಜಾಲದ ನಂಟು ಹೊಂದುರು ಆರೋಪ ಇರುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ನಟಿ ರಾಗಿಣಿ ದ್ವಿವೇಣಿಗೆ ನೋಟಿಸ್ ನೀಡಿದ್ದರು. ಆದರೆ, ರಾಗಿಣಿ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸ್ ಇಲಾಖೆಯ ನಾರ್ಕೋಟಿಸ್ ವಿಭಾಗದ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಯಲಹಂಕದ ಜ್ಯುಡಿಷಿನಲ್ ಲೇಔಟ್ನಲ್ಲಿರುವ ನಟಿ ರಾಗಿಣಿಯ ಫ್ಲ್ಯಾಟ್ ಮೇಲೆ ದಾಳಿ ನಡೆಸಿದ್ದಾರೆ. 3 ಗಂಟೆಗೂ ಅಧಿಕ ಕಾಲ ಶೋಧ ಕಾರ್ಯ ನಡೆಸಿದ್ದು, ಈಗ ರಾಗಿಣಿಯನ್ನು ಸಿಸಿಬಿ ಕಚೇರಿಗೆ ಕರೆದೊಯಲಾಗಿದೆ.

ರಾಗಿಣಿ ಅವರ ನಾಲ್ಕು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮೊಬೈಲ್‍ನಲ್ಲಿದ್ದ ಎಲ್ಲ ಮೆಸೇಜ್‍ಗಳನ್ನೂ ಡಿಲೀಟ್ ಮಾಡಲಾಗಿದೆ. ಮೊಬೈಲ್‍ಗಳನ್ನು ಎಫ್‍ಎಸ್‍ಎಲ್‍ಗೆ ರವಾನಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಡ್ರಗ್ಸ್​ ಮಾಫಿಯಾ ಸಂಬಂಧ ರಾಗಿಣಿ ಸ್ನೇಹಿತ ರವಿಶಂಕರ್​ನನ್ನು ಬುಧವಾರ ಬಂಧಿಸಿದ್ದ ಪೊಲೀಸರು ಆತನನ್ನು ಸಾಕಷ್ಟು ವಿಚಾರಣೆ ಮಾಡಿದ್ದರು. ವಿಚಾರಣೆ ವೇಳೆ ಹಲವು ಮಾಹಿತಿಗಳನ್ನು ಸಿಸಿಬಿ ಪೊಲೀಸರು ಪಡೆದುಕೊಂಡಿದ್ದರು.

Edited By

venki swamy

Reported By

venki swamy

Comments