ತಮನ್ನಾ ಪೋಷಕರಿಗೆ ಕೊರೊನಾ ಪಾಸಿಟಿವ್
ಕಳೆದ ಐದು ತಿಂಗಳಿನಿಂದ ಈ ಕೊರೋನಾ ಕಂಟಕ ಇಡಿ ವಿಶ್ವವನ್ನೇ ಹೈರಾಣಾಗಿಸಿದೆ. ಕೋಟ್ಯಂತರ ಜನರಿಗೆ ಸೋಂಕು ತಗುಲಿದ್ದು, ಲಕ್ಷಾಂತರ ಮಂದಿ ಈಗಾಗಲೇ ಬಲಿಯಾಗಿದ್ದಾರೆ. ಭಾರತದಲ್ಲೂ ಸೋಂಕಿತರ ಸಂಖ್ಯೆ 30 ಲಕ್ಷ ದಾಟಿದೆ. ಇನ್ನು ಈ ಕಣ್ಣಿಗೆ ಕಾಣದ ವೈರಸ್ಗೆ ಹಲವು ಸೆಲೆಬ್ರಿಟಿಗಳೂ ಸಂಕಷ್ಟಕ್ಕೀಡಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ಬಿಗ್ಬಿ ಅಮಿತಾಭ್ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಬಚ್ಚನ್ ಹಾಗೂ ಅವರ ಮಗಳಾದ ಆರಾಧ್ಯ ಬಚ್ಚನ್ಗೂ ಕೊರೊನಾ ಸೋಂಕು ತಗುಲಿತ್ತು. ಕೆಲ ದಿನಗಳ ಕಾಲ ಚಿಕಿತ್ಸೆ ಪಡೆದು ಬಿಗ್ಬಿ ಕುಟುಂಬದ ಅಷ್ಟೂ ಮಂದಿ ಗುಣಮುಖರಾಗಿ ಮನೆಗೆ ವಾಪಸ್ಸಾಗಿದ್ದರು. ಅದರ ಬೆನ್ನಲ್ಲೇ ಖ್ಯಾತ ನಟಿ ತಮ್ಮನ್ನಾ ಭಾಟಿಯಾ ಕುಟುಂಬಕ್ಕೂ ಕೊರೊನಾ ಕಂಟಕ ಎದುರಾಗಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ತಮನ್ನಾ, ಕಳೆದ ವಾರದಿಂದ ನನ್ನ ಪೋಷಕರಿಗೆ ಅಲ್ಪ ಪ್ರಮಾಣದ ಕೊರೊನಾ ಗುಣಲಕ್ಷಣಗಳು ಕಂಡು ಬಂದಿದ್ದವು. ಮುಂಜಾಗ್ರತ ಕ್ರಮವಾಗಿ ನಮ್ಮ ಮನೆಯವರೆಲ್ಲ ತಕ್ಷಣ ಕೊರೊನಾ ಟೆಸ್ಟ್‍ಗೆ ಒಳಗಾದೆವು. ಈಗ ತಾನೇ ವರದಿ ಬಂದಿದ್ದು, ನನ್ನ ಪೋಷಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸಂಬಂಧಪಟ್ಟ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ನಾವು ಐಸೊಲೇಷನ್‍ಗೆ ಒಳಗಾಗಿದ್ದೇವೆ ಎಂದು ತಮನ್ನಾ ಮಾಹಿತಿ ನೀಡಿದ್ದಾರೆ.
ಹಾಗೇ ತಮನ್ನಾ ಪೋಷಕರು ಬೇಗ ಗುಣಮುಖರಾಗಲಿ ಎಂದು ಟಾಲಿವುಡ್ ನಟಿಯರಾದ ಸಮಂತಾ ಅಕ್ಕಿನೇನಿ, ಕಾಜಲ್ ಅಗರ್ ವಾಲ್, ಇಶಾ ಗುಪ್ತಾ ಹಲವರು ಪ್ರಾರ್ಥಿಸಿದ್ದಾರೆ.
Comments