ಕರೊನಾ ವಾರಿಯರ್ಸ್ಗೆ ಕರ್ನಾಟಕ ಸರ್ಕಾರದಿಂದ 'ಸೀರೆ ಗಿಫ್ಟ್’

29 Jul 2020 3:52 PM | General
322 Report

ಹಗಲಿರುಳು ಎನ್ನದೇ ದುಡಿಯುತ್ತಿರುವ ಕರೊನಾ ವಾರಿಯರ್ಸ್ ಗೆ ನೈತಿಕವಾಗಿ ಬೆಂಬಲ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಿದೆ. ಆಶಾ, ಅಂಗನವಾಡಿ ಸೇರಿ ವಿವಿಧ ಇಲಾಖೆಯ ಕಾರ್ಯಕರ್ತೆಯರಿಗೆ ಸೀರೆ ಗಿಫ್ಟ್ ಕೊಡಲು ಸರ್ಕಾರ ನಿರ್ಧರಿಸಿದ್ದು ಆ ಮೂಲಕ ಸಂಕಷ್ಟದಲ್ಲಿರುವ ನೇಕಾರರಿಗೆ ನೆರವು ನೀಡಲಿದೆ.

ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಮಾಹಿತಿ ನೀಡಿ, ಕರೊನಾ ಪರಿಣಾಮ ನೇಕಾರರ ಬದುಕು ಬೀದಿಗೆ ಬಿದ್ದಿದೆ. ನೇಕಾರರ ಬದುಕು ಕೂಡ ಕ಼಼ಷ್ಟದಲ್ಲಿ ಸಿಲುಕಿ ಹಾಕಿಕೊಂಡಿದ್ದು, ಈ ನಿಟ್ಟಿನಲ್ಲಿ ನೇಕಾರರಿಗೆ ನೆರವಾಗಲು ರಾಜ್ಯ ಸರ್ಕಾರ ಮುಂದಾಗಿದ್ದು, ಆ ಸೀರೆಗಳನ್ನು ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಉಡುಗೊರೆಯಾಗಿ ನೀಡುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುವುದು ಎಂದು ಸಚಿವ ಶ್ರೀಮಂತ ಪಾಟೀಲ ತಿಳಿಸಿದರು.

Edited By

venki swamy

Reported By

venki swamy

Comments