ಮಕ್ಕಳ ಆನ್ ಲೈನ್ ಶಿಕ್ಷಣಕ್ಕಾಗಿ ಪ್ರೀತಿಯಿಂದ ಸಾಕಿದ್ದ ಹಸು ಮಾರಿದ ತಂದೆ

24 Jul 2020 3:29 PM | General
154 Report

ತಂದೆ ಕುಟುಂಬದ ಭದ್ರ ಬುನಾದಿ ಇದ್ದಂತೆ, ತನ್ನ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ತನ್ನನ್ನ ಅರ್ಪಿಸುವ ಗುಣ ತಂದೆಗೆ ಇರುತ್ತೆ ಎನ್ನುತ್ತಾರೆ. ಅದೇ ರೀತಿ ಇಲ್ಲೊಬ್ಬ ತಂದೆ ತನ್ನ ಇಬ್ಬರು ಮಕ್ಕಳ ಭವಿಷ್ಯಕ್ಕಾಗಿ ತನ್ನ ಕುಟುಂಬದ ಆದಾಯವಾಗಿದ್ದ ಹಸುವನ್ನೇ ಮಾರಿದ್ದಾರೆ.

ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಹಳ್ಳಿಯ ಕುಲದೀಪ್ ಕುಮಾರ್ ತಮ್ಮ ಮಗಳ ಆನ್‌ಲೈನ್ ತರಗತಿಗಳಿಗೆ ಸ್ಮಾರ್ಟ್ ಫೋನ್ ಖರೀದಿಸಲು ಬಯಸಿದ್ದರು ಆದರೆ ಹಣವಿಲ್ಲದೆ ಸುಮಾರು 2.5 ತಿಂಗಳ ಹಿಂದೆ ಸಾಲಗಾರರಿಂದ ಹಣವನ್ನು ಪಡೆದು ಸ್ಮಾರ್ಟ್‌ ಫೋನ್‌ ಅನ್ನು ಖರೀದಿ ಮಾಡಿದ್ದರು, ಈ ನಡುವೆ ಸಾಲವನ್ನು ಮರುಪಾವತಿಸುವಂತೆ ಸಾಲಗಾರನು ಕುಲದೀಪ್ ಕುಮಾರ್ ಮೇಲೆ ಒತ್ತಡ ಏರಿದ್ದರೆ ಹೀಗಾಗಿ ಹಸು ಮಾರುವುದು ಅನಿವಾರ್ಯವಾಗಿತ್ತು ಎಂದು ಕುಲದೀಪ್ ಕುಮಾರ್ ಹೇಳಿದ್ದಾರೆ. ಇದೇ ವೇಳೆ ಕುಲದೀಪ್ ಕುಮಾರ್ ಕಥೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ, ರಾಜ್ಯ ಸರ್ಕಾರ ಅವರ ನೆರವಿಗೆ ಮುಂದಾಗಿದ್ದು, ಅವರ ಕುಟುಂಬಕ್ಕೆ ಪರಿಹಾರವನ್ನು ನೀಡಿದೆ. ಕುಮಾರ್ ಅವರಿಗೆ ತಮ್ಮ ಹಸುವನ್ನು ಹಿಂತಿರುಗಿಸಲಾಯಿತು ಆದರೆ ಅವರು ನಿರಾಕರಿಸಿದರು ಎನ್ನಲಾಗಿದ್ದು, ಈ ನಡುವೆ ಅವರು ರಾಜ್ಯ ಸರ್ಕಾರಕ್ಕೆ ತನ್ನ ಶಿಥಿಲವಾದ ಮನೆಯನ್ನು ಕೇಂದ್ರ ಯೋಜನೆಯಡಿಯಲ್ಲಿ ದುರಸ್ತಿ ಮಾಡಲು ಮತ್ತು ಬಡತನ ರೇಖೆಯ ಕೆಳಗೆ ಕುಟುಂಬ ಎಂದು ಪಟ್ಟಿ ಮಾಡಲು ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

Edited By

venki swamy

Reported By

venki swamy

Comments