ಏರ್ ಇಂಡಿಯಾ ಸಿಬ್ಬಂದಿಗೆ 5 ವರ್ಷದವರೆಗೆ ಕಡ್ಡಾಯ ವೇತನ ರಹಿತ ರಜೆ

16 Jul 2020 1:29 PM | General
462 Report

ಅಧಿಕೃತ ಆದೇಶದ ಪ್ರಕಾರ, ಮುಂದಿನ ಐದು ವರ್ಷಗಳವರೆಗೆ ವೇತನವಿಲ್ಲದೆ (ಎಲ್ಡಬ್ಲ್ಯೂಪಿ) ಕಡ್ಡಾಯ ರಜೆ ಮೇಲೆ ಕಳುಹಿಸಲಾಗುವ ದಕ್ಷತೆ, ಆರೋಗ್ಯ ಮತ್ತು ಪುನರುಕ್ತಿ ಮುಂತಾದ ವಿವಿಧ ಅಂಶಗಳ ಆಧಾರದ ಮೇಲೆ ನೌಕರರನ್ನು ಗುರುತಿಸುವ ಪ್ರಕ್ರಿಯೆಯನ್ನು ಏರ್ ಇಂಡಿಯಾ ಪ್ರಾರಂಭಿಸಿದೆ.

ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜಿವ್ಬನ್ಸಾಲ್ಅವರು ವೇತನ ರಹಿತ ರಜೆಯ ಮೇಲೆ 'ಆರು ತಿಂಗಳು ಅಥವಾ ಎರಡು ವರ್ಷದಿಂದ 5 ವರ್ಷಗಳ ವರೆಗೂ ಸಿಬ್ಬಂದಿಯನ್ನು ಕಳುಹಿಸಬಹುದಾಗಿದೆ. ಕಾರ್ಯಾನಿರ್ವಹಣೆಯ ಗುಣಮಟ್ಟ, ಉದ್ಯೋಗಿಯ ಆರೋಗ್ಯ, ಕಾರ್ಯಕ್ಷಮತೆ, ಅನಾರೋಗ್ಯ ಅಥವಾ ಇತರೆ ಕಾರಣಗಳಿಂದಾಗಿ ಅಗತ್ಯ ಸಮಯದಲ್ಲಿ ಕಾರ್ಯ ನಿರ್ವಹಣೆಗೆ ಉದ್ಯೋಗಿಯ ಗೈರು ಹಾಜರಿ, ಕಾರ್ಯ ನಿರ್ವಹಣೆ ಸಾಮರ್ಥ್ಯ, ಸುಸ್ಥಿರತೆ ಆಧಾರಗಳ ಮೇಲೆ ಕ್ರಮಕೈಗೊಳ್ಳಬಹುದಾಗಿದೆ' ಜು.14 ರಂದು ಹೊರಡಿಸಲಾದ ಆದೇಶದಲ್ಲಿ ತಿಳಿಸಲಾಗಿದೆ.

Edited By

venki swamy

Reported By

venki swamy

Comments