ಒಂದೇ ಮುಹೂರ್ತದಲ್ಲಿ ಇಬ್ಬರಿಗೆ ತಾಳಿ ಕಟ್ಟಿದ ಭೂಪ! : ಕುಟುಂಬ ಸಮ್ಮುಖದಲ್ಲಿ ನಡೆಯಿತು ವಿಶೇಷ ಮದುವೆ
ಮಧ್ಯಪ್ರದೇಶದ ಯುವಕನೊಬ್ಬ ಒಂದೇ ಮುಹೂರ್ತದಲ್ಲಿ ಇಬ್ಬರು ಯುವತಿಯರಿಗೆ ತಾಳಿ ಕಟ್ಟಿದ್ದಾನೆ. ಬೈತುಲ್ ಮೂಲದ ಸಂದೀಪ್ ಉಯಿಕೆ ಯುವತಿಯನ್ನು ಪ್ರೀತಿಸಿದ್ದು ಆಕೆಯನ್ನು ಮದುವೆಯಾಗಿದ್ದಾನೆ. ಇದೇ ವೇಳೆ ಪೋಷಕರು ನೋಡಿದ ಹುಡುಗಿಯನ್ನು ಮದುವೆಯಾಗಿದ್ದಾನೆ.
ಸಂದೀಪ್ ಉಯಿಕೆ ಕೆರಿಯಾ ಗ್ರಾಮದ ಬುಡಕಟ್ಟು ಜನಾಂಗಕ್ಕೆ ಸೇರಿದ್ದಾನೆ. ಇಬ್ಬರು ಯುವತಿಯರಲ್ಲಿ ಒಬ್ಬರು ಹೋಶಂಘಾಬಾದ್ನವರಾಗಿದ್ದು, ಸಂದೀಪ್ ಭೋಪಾಲ್ನಲ್ಲಿ ಓದುತ್ತಿರುವ ವೇಳೆ ಆಕೆಯೊಂದಿಗೆ ಪ್ರೀತಿಗೆ ಬಿದ್ದನು. ಇವರಿಬ್ಬರು ಪ್ರೀತಿಸುತ್ತಿರುವಾಗ ಸಂದೀಪ್ ಕುಟುಂಬ ಕೊಯಲಾರಿ ಗ್ರಾಮದ ಯುವತಿಯೊಂದಿಗೆ ವಿವಾಹ ನಿಶ್ಚಯ ಮಾಡಿಕೊಂಡಿತು. ಸ್ವಲ್ಪ ದಿನದ ಬಳಿಕ ಸಂದೀಪ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದಾನೆ ಎಂಬ ವಿಚಾರ ನಿಶ್ಚಯ ಮಾಡಿಕೊಂಡಿರುವ ಯುವತಿ ಮನೆಯವರಿಗೆ ತಿಳಿಯಿತು. ಈ ಸಂದರ್ಭದಲ್ಲಿ ಇಬ್ಬರೂ ಯುವತಿಯರು ಒಂದು ವೇಳೆ ಒಟ್ಟಿಗೆ ಸಂದೀಪ್ ಜೊತೆಗೆ ವಾಸಿಸಲು ಸಮ್ಮತಿ ಸೂಚಿಸಿದರೆ ಮಾತ್ರ ಅವರ ವಿವಾಹ ನೆರವೇರಿಸಲು ನಿರ್ಧರಿಸಲಾಗಿದೆ ಮತ್ತು ಇದಕ್ಕೆ ಇಬ್ಬರು ಯುವತಿಯರು ಸಮ್ಮತಿ ಸೂಚಿಸಿದ್ದಾರೆ. ಇದಕ್ಕೆ ಸಂದೀಪನೂ ಸಂತೋಷದಿಂದ ಒಪ್ಪಿಕೊಂಡ!
Comments