ಎಂಟು ವರ್ಷದಲ್ಲಿ ದಾಖಲೆ ಬರೆದ ಬಂಗಾರ

24 Jun 2020 12:32 PM | General
230 Report

ಜಾಗತಿಕವಾಗಿ ಚಿನ್ನದ ದರ ಏರಿಕೆ ಕಂಡಿದ್ದು, ಭಾರತದಲ್ಲಿಯೂ ಚಿನ್ನದ ಬೆಲೆ ದಾಖಲೆಯ ಮಟ್ಟ ತಲುಪಿದೆ. ಬೆಳಗ್ಗೆ ಪ್ರತಿ ಹತ್ತು ಗ್ರಾಮ್ ಗೆ 48,333 ರುಪಾಯಿಗೆ ವಹಿವಾಟು ನಡೆಸಿತು. ಮಾರ್ಚ್ ನಲ್ಲಿ 10 ಗ್ರಾಮ್ ಚಿನ್ನದ ಬೆಲೆ 38,500 ರುಪಾಯಿ ಇದ್ದಿದ್ದು, 25 ಪರ್ಸೆಂಟ್ ಏರಿಕೆ ದಾಖಲಿಸಿದೆ. ಆಗಸ್ಟ್ ತಿಂಗಳ ಚಿನ್ನದ ಫ್ಯೂಚರ್ ವಹಿವಾಟು 10 ಗ್ರಾಮ್ ಗೆ 48,264 ರುಪಾಯಿ ಇದೆ.

ಜಾಗತಿಕ ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಎಂಟು  ವರ್ಷದಲ್ಲಿ ದಾಖಲೆ ಮಟ್ಟ ತಲುಪಿದೆ. ಚಿನ್ನದ ದರ ಹೆಚ್ಚಳವಾಗಿದ್ದರೆ, ಬೆಳ್ಳಿ ದರ ಇಳಿಕೆ ಕಂಡಿದೆ. ಎಂಸಿಎಕ್ಸ್‌ನಲ್ಲಿ ಪ್ರತಿ ಕೆ.ಜಿ. ಬೆಳ್ಳಿ ಶೇ 0.14ರಷ್ಟು ಕಡಿಮೆಯಾಗಿ ₹48,716ರಲ್ಲಿ ವಹಿವಾಟು ನಡೆದಿದೆ. ಇನ್ನು ಎಂಸಿಎಕ್ಸ್ ನಲ್ಲಿ ಜುಲೈ ತಿಂಗಳ ಬೆಳ್ಳಿ ಫ್ಯೂಚರ್ಸ್ ಒಂದು ಕೇಜಿಗೆ 48,770 ರುಪಾಯಿ ಇದೆ. ಯು.ಎಸ್.ನಲ್ಲಿ ಕೊರೊನಾ ಪ್ರಕರಣಗಳಲ್ಲಿ ಹೆಚ್ಚಳವಾಗಿರುವುದರಿಂದ ಹೂಡಿಕೆದಾರರು ಚಿನ್ನದ ಮೇಲೆ ಹಣ ಹಾಕಲು ಆಸಕ್ತಿ ತೋರಿಸಿದ್ದಾರೆ. ಯು.ಎಸ್.- ಚೀನಾ ಮಧ್ಯೆ ಮತ್ತೆ ತಲೆದೋರಿರುವ ವ್ಯಾಪಾರ ಬಿಕ್ಕಟ್ಟು ಹಾಗೂ ದುರ್ಬಲವಾಗಿರುವ ಡಾಲರ್ ಕಾರಣಕ್ಕೆ ಚಿನ್ನ ಬೆಂಬಲ ಪಡೆಯುತ್ತಿದೆ ಎನ್ನುತ್ತಾರೆ ತಜ್ಞರು.

Edited By

venki swamy

Reported By

venki swamy

Comments