ಕಿಲ್ಲರ್ ಕೊರೊನಾಗೆ ಪ.ಬಂಗಾಳದ ಟಿಎಂಸಿ ಶಾಸಕ ಬಲಿ..!
ದೇಶಾದ್ಯಂತ ಕೊರೋನಾ ವೈರಸ್ ರಣಕೇಕೆಯಾಕುತ್ತಿದ್ದು, ಇದರ ಮಧ್ಯೆ ಮಾರಕ ಕೊರೊನಾ ವೈರಸ್ಗೆ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ತಮೋನಾಶ್ ಘೋಷ್ ಬಲಿಯಾಗಿದ್ದಾರೆ.
ಮೇ ತಿಂಗಳಿನಲ್ಲಿ ಕೋವಿಡ್-19 ಸೋಂಕು ದೃಢಪಟ್ಟ ನಂತರ ಚಿಕಿತ್ಸೆಯಲ್ಲಿದ್ದ ಘೋಷ್ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಇನ್ನು ತಮೋನಾಶ್ ಘೋಷ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 35 ವರ್ಷದಿಂದ ಪಕ್ಷ ಹಾಗೂ ರಾಜ್ಯದ ಜನತೆಗಾಗಿ ದುಡಿದ ತಮೋನಾಶ್ ಘೋಷ್ ನಮ್ಮನ್ನಗಲಿರುವುದು ತೀವ್ರ ದುಂಖದ ಸಂಗತಿ ಎಂದು ಕಂಬನಿ ಮಿಡಿದ್ದಾರೆ.
Comments