ಕೊರೋನಾ ಎಫೆಕ್ಟ್: ಈ ವರ್ಷಾಂತ್ಯದವರೆಗೂ ಹೆಚ್-1ಬಿ ವೀಸಾ ನಿರ್ಬಂಧ ಆದೇಶಕ್ಕೆ ಟ್ರಂಪ್ ಸಹಿ

23 Jun 2020 1:03 PM | General
391 Report

ಮಹಾಮಾರಿ ಕೊರೊನಾ ವೈರಸ್ಗೆ ಅಮೆರಿಕದ ಅತಿ ಹೆಚ್ಚು ಸಾವು-ನೋವು ಸಂಭವಿಸಿದೆ. ಇದಾದ ಬೆನ್ನಲ್ಲೇ ಭಾರಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಹಾಗಾಗಿ ಅಲ್ಲಿನ ಜನರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವರ್ಕಿಂಗ್ ವೀಸಾಗಳನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲ್ಲು ಆದೇಶಿಸಿದ್ದಾರೆ.

ತಮ್ಮ ದೇಶಕ್ಕೆ ಬರದಂತೆ ವಿದೇಶೀಯರಿಗೆ ಎಚ್- 1ಬಿ ವೀಸಾ ಸೇರಿದಂತೆ ತಾತ್ಕಾಲಿಕ ಉದ್ಯೋಗ ವೀಸಾಗಳ ಮೇಲೆ ಈ ವರ್ಷಾಂತ್ಯದವರೆಗೂ ನಿರ್ಬಂಧ ಹೇರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ಧಾರೆ. ಈ ಆದೇಶಕ್ಕೆ ಸೋಮವಾರ ಸಹಿ ಹಾಕಿರುವ ಟ್ರಂಪ್​​​, ಚ್-1ಬಿ ವೀಸಾ, ಹೆಚ್-2ಬಿ ವೀಸಾ ಮತ್ತು ಎಲ್-1 ವೀಸಾಗಳ ಮೇಲೆ ವಿವಿಧ ನಿರ್ಬಂಧ ಹೇರಿದ್ಧಾರೆ. ಈ ಮೂಲಕ ಅಮೆರಿಕಾಗೆ ಬರುವ ವಲಸಿಗರ ಪ್ರವೇಶಕ್ಕೆ ಬ್ರೇಕ್​ ಹಾಕಿದ್ದಾರೆ.

ಎಚ್‌1ಬಿ ವೀಸಾಗೆ ಭಾರತೀಯ ಐಟಿ ವೃತ್ತಿಪರರಲ್ಲಿ ಅತಿ ಹೆಚ್ಚಿನ ಬೇಡಿಕೆಯಿದೆ. ಪ್ರತಿ ವರ್ಷ ವಿತರಣೆಯಾಗುವ 85,000 ಹೊಸ ವೀಸಾಗಳ ಪೈಕಿ ಮೂರನೇ ಎರಡರಷ್ಟನ್ನು(ಸುಮಾರು 70%) ಭಾರತೀಯ ಟೆಕ್ಕಿಗಳ ಪಡೆಯುತ್ತಿದ್ದಾರೆ. ಗೂಗಲ್‌, ಆ್ಯಪಲ್‌, ಫೇಸ್‌ಬುಕ್‌, ಮೈಕ್ರೊಸಾಫ್ಟ್‌ನಂಥ ದೊಡ್ಡ ಕಂಪನಿಗಳಿಗೆ ಭಾರೀ ಹೊಡೆತ ಬಿದ್ದಿದೆ.

Edited By

venki swamy

Reported By

venki swamy

Comments