14 ಬೆಳೆಗೆ ಬೆಂಬಲ ಬೆಲೆ ಏರಿಕೆ ಮಾಡಿದ ಕೇಂದ್ರ ಸರ್ಕಾರ

02 Jun 2020 11:02 AM | General
422 Report

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರೈತರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದ್ದು, ಕೇಂದ್ರ ಸಚಿವ ಸಂಪುಟವು ಹದಿನಾಲ್ಕು ಖಾರಿಫ್ ಬೆಳೆಗೆ ಕನಿಷ್ಠ ಬೆಂಬಲ ಬೆಲೆ (MSP) ಏರಿಕೆ ಮಾಡಲು ಒಪ್ಪಿಗೆ ನೀಡಿದೆ. ಸಂಪುಟ ಸಭೆಯ ಬಗ್ಗೆ ಮಾಹಿತಿ ನೀಡಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಪರಿಷ್ಕೃತ ಬೆಲೆಯಿಂದಾಗಿ ರೈತರಿಗೆ ವೆಚ್ಚಕ್ಕಿಂತ 50ರಿಂದ 83 ಪರ್ಸೆಂಟ್ ಹೆಚ್ಚು ದೊರೆಯುತ್ತದೆ ಎಂದು ಹೇಳಿದ್ದಾರೆ.

ಜೋಳ 70 ರೂಪಾಯಿ ಹೆಚ್ಚಳದೊಂದಿಗೆ ಕ್ವಿಂಟಾಲ್ ಗೆ 2,620 ರೂ. ಆಗಿದೆ.

ಭತ್ತಕ್ಕೆ 53 ರೂಪಾಯಿ ಹೆಚ್ಚಳವಾಗಿದ್ದು, ಈಗ ಪ್ರತಿ ಕ್ವಿಂಟಾಲ್ ಗೆ 1,868 ರೂಪಾಯಿಗಳಾಗಿದೆ.

ರಾಗಿ 145 ರೂಪಾಯಿ ಹೆಚ್ಚಳದೊಂದಿಗೆ ಪ್ರತಿ ಕ್ವಿಂಟಾಲ್ ಗೆ 3,295 ರೂಪಾಯಿ ತಲುಪಿದೆ.

ಸಜ್ಜೆ 640 ರೂಪಾಯಿ ಹೆಚ್ಚಳದೊಂದಿಗೆ 2,640 ರೂಪಾಯಿ ತಲುಪಿದೆ.

ಹತ್ತಿ 260 ರೂ. ಹೆಚ್ಚಳದೊಂದಿಗೆ ಪ್ರತಿ ಕ್ವಿಂಟಾಲ್‌ ಗೆ 5,515 ರೂಪಾಯಿಗಳಾಗಿದೆ.

ಮೆಕ್ಕೆಜೋಳ 90 ರೂಪಾಯಿ ಹೆಚ್ಚಳದೊಂದಿಗೆ ಕ್ವಿಂಟಾಲ್ ಗೆ 1,850 ರೂಪಾಯಿ ಆಗಿದೆ.

ಉದ್ದು 300 ರೂಪಾಯಿ ಹೆಚ್ಚಳದೊಂದಿಗೆ 6,000 ರೂ.ತಲುಪಿದೆ.

ತೊಗರಿ ಪ್ರತಿ ಕ್ವಿಂಟಾಲ್‌ ಗೆ 200 ರೂಪಾಯಿ ಹೆಚ್ಚಳದೊಂದಿಗೆ 6,000 ರೂ. ಆಗಿದೆ.

ಅಲಸಂದೆ 146 ರೂಪಾಯಿ ಹೆಚ್ಚಳದೊಂದಿಗೆ 7,196 ರೂಪಾಯಿ ತಲುಪಿದೆ.

ಸೋಯಾಬೀನ್‌ 170 ರೂ. ಹೆಚ್ಚಳದೊಂದಿಗೆ ಪ್ರತಿ ಕ್ವಿಂಟಾಲ್‌ ಗೆ 3,880 ರೂ. ಆಗಿದೆ.

ಸೂರ್ಯಕಾಂತಿ 235 ರೂಪಾಯಿ ಹೆಚ್ಚಳದೊಂದಿಗೆ ಪ್ರತಿ ಕ್ವಿಂಟಾಲ್‌ ಗೆ 5,885 ರೂ. ತಲುಪಿದೆ.

ಕಡಲೆಕಾಯಿ 185 ರೂ. ಹೆಚ್ಚಳದೊಂದಿಗೆ ಕ್ವಿಂಟಾಲ್‌ ಗೆ 5275 ರೂ. ಆಗಿದೆ.

ಎಳ್ಳು 370 ರೂಪಾಯಿ ಹೆಚ್ಚಳದೊಂದಿಗೆ ಪ್ರತಿ ಕ್ವಿಂಟಾಲ್‌ ಗೆ 6,855 ರೂಪಾಯಿಗಳಾಗಿದೆ.

ಹುಚ್ಚೆಳ್ಳು 775 ರೂ. ಹೆಚ್ಚಳದೊಂದಿಗೆ ಪ್ರತಿ ಕ್ವಿಂಟಾಲ್‌ ಗೆ 6,695 ರೂಪಾಯಿ ತಲುಪಿದೆ.

ರೈತರ ಉತ್ಪನ್ನಗಳಿಗೆ ಖರ್ಚಿನ ಒಂದೂವರೆ ಪಟ್ಟು ಹೆಚ್ಚಿನ ಬೆಲೆ ಕಲ್ಪಿಸಿಕೊಡುವುದಾಗಿ 2014ರಲ್ಲಿ ಬಿಜೆಪಿ ಚುನಾವಣೆ ಭರವಸೆಯಾಗಿ ನೀಡಿತ್ತು. ಈ ನಿಟ್ಟಿನಲ್ಲಿ ಕಳೆದ ಫೆಬ್ರವರಿ 1ರಂದು ಮಂಡಿಸಿದ ಐದನೇ ಹಾಗೂ ತನ್ನ ಈ ಅವಧಿಯ ಅಂತಿಮ ಬಜೆಟ್‌ನಲ್ಲಿ ಮೋದಿ ಸರಕಾರ ಸ್ಪಷ್ಟ ಘೋಷಣೆ ಮಾಡಿತ್ತು.

Edited By

venki swamy

Reported By

venki swamy

Comments