ಮನೆ ಖರೀದಿಗೆ ಮುಂದಾಗುವ ಜನತೆಗೆ ಕರ್ನಾಟಕ ಸರ್ಕಾರದಿಂದ ಗುಡ್ ನ್ಯೂಸ್
ಸ್ವಂತ ಸೂರು ಹೊಂದುವ ಬಯಕೆ ಯಾರಿಗಿರುವುದಿಲ್ಲ ಹೇಳಿ.? ಹೀಗೆ ಸ್ವಂತ ಸೂರು ಹೊಂದುವ ಸಲುವಾಗಿ ಫ್ಲಾಟ್ ಖರೀದಿಸಲು ಮುಂದಾಗುವ ಜನತೆಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದೆ.
ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು 35 ಲಕ್ಷದವರೆಗಿನ ಹೊಸ ಅಪಾರ್ಟ್ ಮೆಂಟ್ ಗಳ ಮುದ್ರಾಂಕ ಶುಲ್ಕವನ್ನು ಕಡಿತಗೊಳಿಸಲು ನಿರ್ಧರಿಸಿದೆ. ನಿನ್ನೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮುದ್ರಾಂಕ ಮತ್ತು ದಾಖಲಾತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಭೆಯಲ್ಲಿ ಮುಖ್ಯಮಂತ್ರಿಗಳು, ಮೊದಲ ಬಾರಿಗೆ ದಾಖಲಾತಿ ಮಾಡಿಕೊಳ್ಳುವ 20 ಲಕ್ಷಕ್ಕಿಂತ ಕಡಿಮೆ ವೆಚ್ಚದ ಅಪಾರ್ಟ್ ಮೆಂಟ್ ಗಳ ಮುದ್ರಾಂಕ ಶುಲ್ಕವನ್ನು ಶೇಕಡಾ 5ರಿಂದ ಶೇಕಡಾ 2ಕ್ಕೆ ಇಳಿಸಲು ಆದೇಶ ನೀಡಿದರು ಎಂದು ತಿಳಿದುಬಂದಿದೆ. ಇನ್ನು 21ರಿಂದ 35 ಲಕ್ಷ ರುಪಾಯಿಯೊಳಗಿನ ಅಪಾರ್ಟ್ ಮೆಂಟ್ ಗಳ ನೋಂದಣಿ ಶುಲ್ಕವನ್ನು ಶೇಕಡಾ 5ರಿಂದ ಶೇಕಡಾ 3ಕ್ಕೆ ಇಳಿಸಲಾಗಿದೆ.
ಕೊರೊನಾದ ಕಾರಣಕ್ಕೆ 2020- 21ನೇ ಸಾಲಿನಲ್ಲಿ ನೋಂದಣಿ- ಮುದ್ರಾಂಕ ಇಲಾಖೆ ಆದಾಯದಲ್ಲಿ ಇಳಿಕೆ ಆಗುವ ಅಂದಾಜು ಮಾಡಲಾಗಿದೆ. ಅದು ಕೂಡ ನಿರೀಕ್ಷೆಗಿಂತ 3524 ಕೋಟಿ ರುಪಾಯಿ ಆದಾಯ ಕಡಿಮೆ ಆಗಬಹುದು ಎಂದು ಅಂದಾಜಿಸಲಾಗಿದೆ.
Comments