ಎಸ್ಎಸ್ಎಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ
ವಿದ್ಯಾರ್ಥಿ ಜೀವನದ ಬಹುಮುಖ್ಯ ಘಟ್ಟ ಎಂದೇ ಹೇಳಲಾಗುವ ಎಸ್ಎಸ್ಎಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ. ಜೂನ್ 25ರಿಂದ ಪರೀಕ್ಷೆ ಆರಂಭವಾಗಲಿದ್ದು, ಜುಲೈ 4ರವರೆಗೆ ನಡೆಯಲಿದೆ.ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಇಂದು ಎಸ್ಎಸ್ಎಲ್ಸಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಜೂನ್.25 ರಂದು - ಇಂಗ್ಲೀಷ್/ ಕನ್ನಡ.
ಜೂನ್ 27 ರಂದು - ಗಣಿತ.
ಜೂನ್ 29 - ವಿಜ್ಞಾನ.
ಜುಲೈ 1 - ಸಮಾಜ ವಿಜ್ಞಾನ.
ಜುಲೈ 2ರಂದು - ಕನ್ನಡ ಪ್ರಥಮ ಭಾಷೆ.
ಜುಲೈ 3ರಂದು - ಹಿಂದಿ ತೃತೀಯ ಭಾಷಾ ಪರೀಕ್ಷೆಗಳು ನಡೆಯಲಿವೆ.
ಆಯಾ ಭಾಷೆಗೆ ಅನುಗುಣವಾಗಿ ಪ್ರಥಮ, ದ್ವಿತೀಯ, ತೃತೀಯ ಭಾಷೆ ಪರೀಕ್ಷೆಗಳು ಬದಲಾಗಲಿವೆ.
ಪ್ರಥಮ ಮತ್ತು ಐಚ್ಛಿಕ ವಿಷಯ ಪರೀಕ್ಷೆಗಳು ಬೆಳಿಗ್ಗೆ 10:30ರಿಂದ 1:45ರವರೆಗೆ ನಡೆಯಲಿವೆ. ದ್ವಿತೀಯ ಮತ್ತು ತೃತೀಯ ಭಾಷೆಗಳು ಬೆಳಿಗ್ಗೆ 10:30ರಿಂದ ಮಧ್ಯಾಹ್ನ 1:30ರವರೆಗೆ ನಡೆಯಲಿದೆ.
ರಾಜ್ಯದಲ್ಲಿ 2879 ಕೇಂದ್ರಗಳಲ್ಲಿ 8, 48, 196 ಮಂದಿ ಪರೀಕ್ಷೆ ಬರೆಯಲಿದ್ದಾರೆ.
Comments