ರಾಜ್ಯ ಸರ್ಕಾರದಿಂದ ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್

13 May 2020 11:48 AM | General
392 Report

ರೇಷನ್ ಕಾರ್ಡ್ ಗೆ ಆಧಾರ್ ಸಂಖ್ಯೆ ಲಿಂಕ್ ಮಾಡದವರಿಗೆ ಕೇಂದ್ರ ಸರ್ಕಾರ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ರೇಷನ್ ಕಾರ್ಡ್ ಗೆ ಆಧಾರ್ ಸಂಖ್ಯೆಯನ್ನು ಜೋಡಿಸಲು ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30 ರತನಕ ವಿಸ್ತರಿಸಲಾಗಿದೆ.

ಇನ್ನು ಪಡಿತರ ಚೀಟಿದಾರರಿಗೆ ಮತ್ತೊಂದು ಸೂಚನೆ ನೀಡಲಾಗಿದೆ. 2020 ರ ಸೆಪ್ಟೆಂಬರ್ 30 ರೊಳಗೆ ಪಡಿತರ ಚೀಟಿದಾರರು ಆಧಾರ್ ಲಿಂಕ್ ಮಾಡಬೇಕಿದೆ. ಆದರೆ ಆಧಾರ್ ಲಿಂಕ್ ಮಾಡಿಲ್ಲವೆಂದು ಪಡಿತರ ವಿತರಣೆ ನಿಲ್ಲಿಸುವಂತಿಲ್ಲ. ಸಾರ್ವಜನಿಕ ವಿತರಣೆ ವ್ಯವಸ್ಥೆಯಡಿ ಆಧಾರ್ ಲಿಂಕ್ ಮಾಡದ ಪಡಿತರ ಚೀಟಿದಾರರಿಗೆ ಕೂಡ ಪಡಿತರ ನೀಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ಬಿಹಾರದಲ್ಲಿ ಆಧಾರ್ ನಂಬರ್ ಇಲ್ಲ ಅನ್ನೋ ಕಾರಣಕ್ಕೆ ರೇಷನ್ ಕಾರ್ಡ್​​ನ ರದ್ದುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಆಹಾರ ಹಾಗು ಸಾರ್ವಜನಿಕ ಸಚಿವಾಲಯ ಈ ಸ್ಪಷ್ಟನೆಯನ್ನ ಕೊಟ್ಟಿದೆ. ರಾಷ್ಟ್ರೀಯ ಆಹಾರ ಸುರಕ್ಷಾ ಕಾನೂನಿನ ಅನ್ವಯ ಸಾರ್ವಜನಿಕ ವಿತರಣಾ ಪ್ರಣಾಳಿಕೆ ಯಾವುದೇ ಫಲಾನುಭವಿಯ ಪಡಿತರ ಚೀಟಿಯನ್ನ ರದ್ದುಗೊಳಿಸುವಂತಿಲ್ಲ ಅಂತ ಸಚಿವಾಲಯ ಸ್ಪಷ್ಟ ಆದೇಶವನ್ನ ನೀಡಿದೆ.

Edited By

venki swamy

Reported By

venki swamy

Comments