ಪೆಟ್ರೋಲ್ ಬೆಲೆ 10 ರುಪಾಯಿ, ಡೀಸೆಲ್ ಬೆಲೆ 13 ರೂಪಾಯಿ ಅಬಕಾರಿ ಸುಂಕ ಏರಿಕೆ
ಜಾಗತಿಕ ಮಟ್ಟದಲ್ಲಿ ಐತಿಹಾಸಿಕವಾಗಿ ಕಚ್ಚಾತೈಲ ಬೆಲೆ ಕುಸಿಡಿದ್ದರೂ ಕೇಂದ್ರ ಸರ್ಕಾರ ಇದರ ಲಾಭವನ್ನು ಜನರಿಗೆ ಸಿಗುವಂತೆ ಮಾಡುತ್ತಿಲ್ಲ. ಈಗ ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಗೆ 10 ಹಾಗೂ ಡೀಸೆಲ್ ಗೆ 13 ರೂಪಾಯಿ ಹೆಚ್ಚಿಸಿ ಶಾಕ್ ನೀಡಿದೆ.
ಅಬಕಾರಿ ಸುಂಕ ಹೆಚ್ಚಳದಿಂದಾಗಿ ಇವುಗಳ ಚಿಲ್ಲರೆ ಮಾರಾಟ ದರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಸುಂಕ ಹೆಚ್ಚಳದಿಂದ ಬಂದ ಹಣವನ್ನು ಮೂಲ ಸೌಕರ್ಯ ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ವಿಶೇಷ ಅಬಕಾರಿ ಸುಂಕ ಹೇರಿಕೆ
ಒಂದು ಲೀಟರ್ ಪೆಟ್ರೋಲ್ ಮೇಲೆ 8 ರು. ರಸ್ತೆ ಮತ್ತು ಮೂಲಸೌಕರ್ಯ ಸೆಸ್, 2 ರೂ. ವಿಶೇಷ ಅಬಕಾರಿ ಸುಂಕ ಹೇರಿದೆ. ಪ್ರತಿ ಲೀಟರ್ ಡೀಸೆಲ್ ಮೇಲೆ 8 ರು. ರಸ್ತೆ ಮತ್ತು ಮೂಲಸೌಕರ್ಯ ಸೆಸ್ ಹೇರಿದರೆ, 5 ರೂ. ವಿಶೇಷ ಅಬಕಾರಿ ಸುಂಕ ಹೇರಲಾಗಿದೆ. ಪರಿಷ್ಕೃತ ಪೆಟ್ರೋಲ್, ಡೀಸೆಲ್ ದರ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.
Comments