ಊರಿಗೆ ಹೊರಟ ಕಾರ್ಮಿಕರು ಬಸ್ ಟಿಕೆಟ್ ದರ ನೋಡಿ ಶಾಕ್!
ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ವಲಸೆ ಬಂದಿರುವ ಕಾರ್ಮಿಕರು ಲಾಕ್ಡೌನ್ನಿಂದಾಗಿ ನಾನಾ ಊರುಗಳಲ್ಲಿ ಸಿಲುಕಿಕೊಂಡಿದ್ದಾರೆ. ಒಂದೂವರೆ ತಿಂಗಳಿಂದ ಸಂಬಳವೂ ಇಲ್ಲದೆ, ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿರುವ ಕಾರ್ಮಿಕರನ್ನು ಊರಿಗೆ ಕಳುಹಿಸಲು ಸರ್ಕಾರ ಬಸ್ ವ್ಯವಸ್ಥೆ ಮಾಡಿದೆ. ಆದರೆ, ಕೆಎಸ್.ಆರ್.ಟಿ.ಸಿ ವತಿಯಿಂದಲೇ ಬಡ ಕಾರ್ಮಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ.
ಈಗಾಗಲೇ ಕೆಲಸವಿಲ್ಲದೇ ತತ್ತರಿಸಿರುವ ಬಡ ಕಾರ್ಮಿಕರಿಗೆ ಕೆ.ಎಸ್.ಆರ್.ಟಿ.ಸಿ ಭಾರಿ ಮೊತ್ತದ ಪ್ರಯಾಣ ದರ ವಿಧಿಸುವ ಮೂಲಕ ದೊಡ್ಡ ಶಾಕ್ ನೀಡಿದೆ. ಊರುಗಳಿಗೆ ತೆರಳುವ ಕಾರ್ಮಿಕರಿಗೆ ಹೆಲ್ತ್ ಚೆಕಪ್ ಮಾಡಲಾಗುತ್ತಿದೆ. ಪ್ರತಿಯೊಬ್ಬರನ್ನೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ನಂತರ ಬಸ್ ಹತ್ತಲು ಸೂಚನೆ ನೀಡಲಾಗುತ್ತಿದೆ. ಬಾಗಲಕೋಟೆಗೆ ತೆರಳಲು ಈ ಮೊದಲು 700 ರೂ.ಯಿತ್ತು. ಆದರೆ, ಈ 1311 ರೂ.ವಿಧಿಸಲಾಗಿದೆ. ಇನ್ನು ಬಳ್ಳಾರಿಗೆ ತೆರಳಲು 450 ರೂ. ಇದ್ದ ದರವನ್ನು 884ಕ್ಕೆ ಏರಿಕೆ ಮಾಡಲಾಗಿದೆ. ಅಂತೆಯೇ ಬೆಳಗಾವಿಗೆ ಈ ಮೊದಲು 800 ರೂ. ಇದ್ದ ದರವನ್ನು 1478 ರೂ.ಗೆ ಹೆಚ್ಚಿಸಲಾಗಿದೆ
Comments