ಎಣ್ಣೆಪ್ರಿಯರಿಗೆ ಗುಡ್ ನ್ಯೂಸ್ : ಮದ್ಯದಂಗಡಿ ತೆರೆಯಲು ಕೇಂದ್ರ ಸರ್ಕಾರದಿಂದ ಅನುಮತಿ!

02 May 2020 9:18 AM | General
317 Report

ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಲಾಕ್ಡೌನ್ಅನ್ನು ಮೂರನೇ ಬಾರಿಗೆ ವಿಸ್ತರಣೆ ಮಾಡಲಾಗಿದೆ. ಮೇ 4ರಿಂದ ಮೇ 17ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಶುಕ್ರವಾರ ಸಂಜೆ ಆದೇಶ ಹೊರಡಿಸಿದೆ. ಲಾಕ್ ಡೌನ್ 3.0 ನಡುವೆಯೂ ಗ್ರೀನ್ ಝೋನ್ ಜಿಲ್ಲೆಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಎಂ ಎಸ್ ಐ ಎಲ್ ಮತ್ತು ಎಂ ಆರ್ ಪಿ ಬಾರ್ ಗಳನ್ನು ತೆರೆಯಲು ಅನುಮತಿ ನೀಡಿದೆ. ಈ ಮೂಲಕ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ.

ಹಸಿರು ವಲಯದ ಜಿಲ್ಲೆಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಬಹುದಾಗಿದೆ. ಆದರೆ,  ಇಲ್ಲೂ ಕೆಲವು ನಿಯಮಗಳನ್ನು ವಿಧಿಸಲಾಗಿದೆ. ಮದ್ಯದಂಗಡಿಗಳಲ್ಲಿ ಕನಿಷ್ಠ ಪಕ್ಷ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು. ಮತ್ತು ಏಕಕಾಲದಲ್ಲಿ ಐದು ಜನರಿಗಿಂತ ಹೆಚ್ಚಿಗೆ ಜನರು ಸೇರಬಾರದು, ಮಾಸ್ಕ್ ಧರಿಸುವುದು, ಪಾರ್ಸೆಲ್ ತೆಗೆದುಕೊಂಡು ಹೋಗುವುದು ಎಂಬ ನಿಯಮ ವಿಧಿಸಲಾಗಿದೆ. ಹಾಗೆಯೇ, ಪಾನ್​ ಶಾಪ್​ ತೆರೆಯುವುದಕ್ಕೂ ಅನುಮತಿ ನೀಡಲಾಗಿದೆ

Edited By

venki swamy

Reported By

venki swamy

Comments