ಎಣ್ಣೆ ಕುಡಿದ್ರೆ ಕೊರೊನಾ ವೈರಸ್ ಸತ್ತು ಹೋಗುತ್ತೆ: ಸಿಎಂಗೆ ಪತ್ರ ಬರೆದ ಶಾಸಕ!
ವಿಶ್ವದಾದ್ಯಂತ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ಗೆ ಔಷಧಿ ಕಂಡು ಹಿಡಿಯಲು ವಿಶ್ವದಾದ್ಯಂತ ಅನೇಕ ದೇಶಗಳ ವಿಜ್ಞಾನಿಗಳು, ಸಂಶೋಧಕರು ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಿದ್ದಾರೆ. ಈ ನಡುವೆ ರಾಜಸ್ಥಾನದ ಶಾಸಕರೊಬ್ಬರು ಆಲ್ಕೋಹಾಲ್ ಕೈನಲ್ಲಿರುವ ಹಾಗೂ ಗಂಟಲಿನಲ್ಲಿರುವ ಕೊರೊನಾ ವೈರಸ್ಗಳನ್ನು ಕೊಲ್ಲುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ರಾಜಸ್ಥಾನದ ಸಾಂಗೋದ್ ಶಾಸಕ, ಮಾಜಿ ಸಚಿವ, ಕಾಂಗ್ರೆಸ್ನ ಭಾರತ್ ಸಿಂಗ್ ಮದ್ಯವನ್ನು ಕೈನಲ್ಲಿ ಉಜ್ಜುವಾಗ ಕೈಯಿಂದ ಕೊರೊನಾ ವೈರಸ್ ಅನ್ನು ತೆಗೆದು ಹಾಕಬಹುದು. ಅದನ್ನು ಸೇವಿಸುವುದರಿಂದ ಗಂಟಲಿನಿಂದ ಕೊರೊನಾ ವೈರಸ್ ಅನ್ನು ಅಳಿಸಬಹುದು ಅದ್ದರಿಂದ ರಾಜ್ಯದಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಬೆಕೆಂದು ಮುಖ್ಯಂತ್ರಿ ಅಶೋಕ್ ಗೆಹ್ಲೋಟ್ ಗೆ ಪತ್ರವನ್ನೂ ಬರೆದಿದ್ದರೆ.
ಮದ್ಯದಂಗಡಿಗಳ ತೆರೆಯುವಿಕೆಗೆ ಅವಕಾಶ ನೀಡದೇ ಇರುವುದರಿಂದ ಅಕ್ರಮ ಮದ್ಯ ತಯಾರಿಕೆ, ಮಾರಾಟಕ್ಕೆ ಅವಕಾಶ ನೀಡಿದಂತಾಗುತ್ತದೆ. ಅಕ್ರಮ ಮದ್ಯವು ಜನರನ್ನು ಸಾಯಿಸುವುದು ಮಾತ್ರವಲ್ಲದೆ ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟುಮಾಡುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
Comments