ಲಾಕ್ ಡೌನ್ ನಿಂದ ರಿಲೀಫ್ ನೀಡುವ ನಿಟ್ಟಿನಲ್ಲಿ ಮಹತ್ವದ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ

25 Apr 2020 12:04 PM | General
457 Report

ಮಾರಣಾಂತಿಕ ಕೋವಿಡ್-19 ತಡೆಗಟ್ಟಲು ಸಾಮಾಜಿಕ ಅಂತರ ಒಂದೇ ಉಪಾಯ ಅಂತ್ಹೇಳಿ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಭಾರತದಲ್ಲಿ ಲಾಕ್ ಡೌನ್ ಘೋಷಣೆಯಾಗಿ ಒಂದು ತಿಂಗಳು ಕಳೆದಿದೆ. ಅತ್ತ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಗಣನೀಯವಾಗಿ ಏರುತ್ತಲೇ ಇದೆ. ಹೀಗಿದ್ದರೂ, ಕೇಂದ್ರ ಸರ್ಕಾರ ಒಂದು ಮಹತ್ವದ ಆದೇಶ ಹೊರಡಿಸಿದೆ.

ಗೃಹ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ಪುರಸಭೆ ಮತ್ತು ಪುರಸಭೆಯ ನಿಗಮಗಳ ವ್ಯಾಪ್ತಿಯಲ್ಲಿ ಬರುವ ಮಳಿಗೆಗಳು ತೆರೆಯಲು ಅನುಮತಿ ನೀಡಲಾಗಿದೆ. ಮುಖ್ಯ ರಸ್ತೆ ಬದಿಯಲ್ಲಿರುವ ಒಂದೊಂದೇ ಅಂಗಡಿ ತೆರೆಯುವಂತಿಲ್ಲ. ಸರ್ಕಾರಿ ಮಳಿಗೆಯಲ್ಲಿರುವ ಅಂಗಡಿಗಳನ್ನು ಮಾತ್ರ ತೆಗೆಯಬಹುದು. ಅಂಗಡಿಗಳಲ್ಲಿ ಕೇವಲ 50 ಪ್ರತಿಶತದಷ್ಟು ಸಿಬ್ಬಂದಿ ಮಾತ್ರ ಮಾಸ್ಕ್ ನೊಂದಿಗೆ ಕೆಲಸ ಮಾಡಬೇಕು. ಹಾಟ್ ಸ್ಪಾಟ್ ಅಥವಾ ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾದ ಪ್ರದೇಶಗಳಲ್ಲಿ ಯಾವುದೇ ಅಂಗಡಿಗಳು ತೆರೆಯುವ ಹಾಗಿಲ್ಲ. ರೆಡ್ ಝೋನ್ ಪ್ರದೇಶದಲ್ಲಿ ಯಾವುದೇ ಲಾಕ್ ಡೌನ್ ವಿನಾಯತಿ ಅನ್ವಯವಾಗುವುದಿಲ್ಲ.

Edited By

venki swamy

Reported By

venki swamy

Comments