ರಾಮನಗರಕ್ಕೆ ಕೊರೊನಾ ಬರಲು ಸರ್ಕಾರವೇ ಕಾರಣ ಎಂದ ಎಚ್ ಡಿಕೆ

24 Apr 2020 8:28 AM | General
757 Report

ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸರು ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿದ ಆರೋದಲ್ಲಿ ಸುಮಾರು 130 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಅದರಲ್ಲಿ ಮೊದಲು ಬಂಧನಕ್ಕೆ ಒಳಪಟ್ಟ 54 ಜನರನ್ನು ಬೆಂಗಳೂರು ಜೈಲಿನ ಬದಲು ರಾಮನಗರ ಜೈಲಿಗೆ ಸ್ಥಳಾಂತರ ಮಾಡುವ ನಿರ್ಧಾರ ಕೈಗೊಳ್ಳುವ ನಿರ್ಧಾರ ಪ್ರಕಟಿಸಲಾಗಿತ್ತು. ಈ ಮೂಲಕ ವೈರಸ್ ಹರಡುವುದಕ್ಕೆ ವೇದಿಕೆ ಕೊಟ್ಟಿತ್ತು.

ರಾಮನಗರ ಜೈಲಿನಲ್ಲಿ ಇರಿಸಲಾಗಿರುವ ಪಾದರಾಯನಪುರ ಗಲಾಟೆ ಆರೋಪಿಗಳಲ್ಲಿ ಇಬ್ಬರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇಬ್ಬರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ರಾಮನಗರ ಜಿಲ್ಲೆಯ ಜನತೆ ಭಯಗೊಂಡಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ರಾಜ್ಯದ 8 ಜಿಲ್ಲೆಗಳು ಮಾತ್ರ ಸೋಂಕು ಮುಕ್ತವಾಗಿದ್ದು ಅವುಗಳಲ್ಲಿ ರಾಮನಗರ ಕೂಡ ಒಂದಾಗಿದೆ. ಸರ್ಕಾರದ ಎಡವಟ್ಟಿನ ನಿರ್ಧಾರದಿಂದ ರಾಮನಗರದಲ್ಲಿ ಸೋಂಕು ಹರಡುವ ಆತಂಕ ಎದುರಾಗಿದೆ. ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಪರಿಸ್ಥಿತಿ ನಿರ್ವಹಿಸಬೇಕೆಂದು ಒತ್ತಾಯಿಸಿದ್ದಾರೆ.

Edited By

venki swamy

Reported By

venki swamy

Comments