ರಾಜ್ಯದಲ್ಲಿ ಲಾಕ್ಡೌನ್ ಸಡಿಲಿಕೆ: ಏನಿರುತ್ತೆ? ಏನಿರಲ್ಲ?

23 Apr 2020 7:45 AM | General
329 Report

ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಹೇರಿರುವ ಲಾಕ್ಡೌನ್ ಅನ್ನು ಹಂತ-ಹಂತವಾಗಿ ಸಡಿಲಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಹೊಸ ಮಾರ್ಗಸೂಚಿ ಪ್ರಕಟಿಸಿ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಆದೇಶ ಹೊರಡಿಸಿದ್ದಾರೆ. ಹೊಸ ಮಾರ್ಗಸೂಚಿಯನ್ವಯ ಕೊರೋನ ವೈರಸ್ ಸೋಂಕಿತರು ಇಲ್ಲದ ಪ್ರದೇಶದಲ್ಲಿ ಲಾಕ್ಡೌನ್ ಕೊಂಚ ಸಡಿಲಗೊಳ್ಳಲಿದ್ದು, ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಕಂಟೈನ್ಮೆಂಟ್ ವಲಯ ದಲ್ಲಿ ಸೀಲ್ಡೌನ್ ಸಹಿತ ಲಾಕ್ಡೌನ್ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿ.

ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಾಣ ವಲಯಕ್ಕೆ ವಿನಾಯಿತಿ, ರಸ್ತೆ, ನೀರಾವರಿ ಕಾಮಗಾರಿ ಮಾಡಲು ಅವಕಾಶ, ಬೈಕ್, ಕಾರು ಗ್ಯಾರೇಜ್‌ ಓಪನ್‌ಗೆ ಅಸ್ತು, ಹೋಟೆಲ್ ಗಳಲ್ಲಿ ಪಾರ್ಸೆಲ್ ಗಳಿಗೆ ಅವಕಾಶ, ಖಾಸಗಿ ಕಾರುಗಳಲ್ಲಿ ಇಬ್ಬರು ಜಿಲ್ಲೆಯೊಳಗೆ ಮಾತ್ರ ಪ್ರಯಾಣ, ಹಾಲು-ಹಾಲು ಉತ್ಪನ್ನ ಸಾಗಟ ಮಾಡಬಹುದು, ಆಸ್ಪತ್ರೆಗಳು, ನರ್ಸಿಂಗ್ ಹೋಮ್ಸ್, ಕ್ಲಿನಿಕ್​ಗಳಲ್ಲಿ ಎಂದಿನಂತೆ ಸೇವೆ, ಮೆಡಿಕಲ್​ ಶಾಪ್​ಗಳು, ಲ್ಯಾಬೋರೇಟರಿಗಳೂ ಓಪನ್, ವೆಟರ್ನರಿ ಆಸ್ಪತ್ರೆಗಳು, ಡಿಸ್ಪೆನ್ಸರೀಸ್, ಪೆಥಾಲಜಿ ಸೇವೆಗಳು ಲಭ್ಯ, ರೈತರ ಕೃಷಿ ಚಟುವಟಿಕೆಗಳಿಗೆ ಅವಕಾಶ, ಕೃಷಿಗೆ ಸಂಬಂಧಿಸಿದ ಉಪಕರಣಗಳ ಮಾರಾಟಕ್ಕೆ ಅನುಮತಿ, ಎಪಿಎಂಸಿ ಮಾರ್ಕೆಟ್​ಗಳಲ್ಲಿ ತರಕಾರಿ ಮಾರಾಟಕ್ಕೆ ಗ್ರೀನ್ ಸಿಗ್ನಲ್, ಕಡಲ ನಗರಿಗಳಲ್ಲಿ ಮೀನುಗಾರಿಕೆಗೆ ಅನುಮತಿ ಬ್ಯಾಂಕ್​ಗಳು, ಎಟಿಎಂಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ, ಕಿರಾಣಿ ಅಂಗಡಿ, ಮಾಂಸದ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ, ಕೋರಿಯರ್, ಅಂಚೆ ಸೇವೆಗೆ ಅನುಮತಿ ನೀಡಿದ ಸರ್ಕಾರ, ಅಮೆಜಾನ್, ಫ್ಲಿಪ್​ಕಾರ್ಟ್​ಗಳ ಆನ್​ಲೈನ್​ ಖರೀದಿ ಸೇವೆ ಲಭ್ಯ, ವಿಮಾನ ನಿಲ್ದಾಣ, ರೇಲ್ವೆ ಸ್ಟೇಷನ್, ಕಂಟೇನರ್ ಡಿಪೋಗಳಲ್ಲಿ ಸಂಸ್ಕರಣಾ ಘಟಕ ಸೇವೆ,ಲಾಕ್​ಡೌನ್​ನಿಂದ ಸಿಲುಕಿಕೊಂಡಿರುವ ಪ್ರವಾಸಿಗರಿಗೆ ವಸತಿ ಕಲ್ಪಿಸಿರುವ ಹೋಟೆಲ್, ಹೋಮ್​​ಸ್ಟೇ, ಲಾಡ್ಜ್​ಗಳಿಗೆ ಅನುಮತಿ, ರಸ್ತೆ, ನೀರಾವರಿ ಯೋಜನೆ, ಕಟ್ಟಡ ನಿರ್ಮಾಣಕ್ಕೆ ಅನುಮತಿ ಸಣ್ಣ, ಅತೀ ಸಣ್ಣ ಕೈಗಾರಿಕೆ ಸೇರಿ ಎಲ್ಲಾ ರೀತಿಯ ಕೈಗಾರಿಕಾ ಉತ್ಪಾದನಾ ವಲಯಗಳಿಗೆ ಅನುಮತಿ, ಮೆಟ್ರೋ ರೈಲು ಯೋಜನೆ ಕಾಮಗಾರಿಗೆ ಅನುಮತಿ.

ಮದ್ಯ ಮಾರಾಟ ಮಾಡಲು ಅವಕಾಶವಿಲ್ಲ, ಸಭೆ ಸಮಾರಂಭ ಮಾಡುವಂತಿಲ್ಲ, ಸಾರ್ವಜನಿಕ ವಲಯಗಳಲ್ಲಿ ಕಾಫಿ, ಟೀ ಮಾರುವಂತಿಲ್ಲ,ರೈಲು, ಬಸ್ಸು, ಮೆಟ್ರೋ ಸೇವೆಗಳು ಇರುವುದಿಲ್ಲ, ವೈದ್ಯಕೀಯ ತುರ್ತು ಹೊರತುಪಡಿಸಿ ಅಂತಾರಾಜ್ಯ ಹಾಗೂ ಅಂತರ್ ಜಿಲ್ಲೆ ಓಡಾಟಕ್ಕೆ ಅವಕಾಶವಿಲ್ಲ, ಬೈಕ್ ಸಂಚಾರಕ್ಕೆ ಅನುಮತಿ ಇಲ್ಲ, ಚಿತ್ರಮಂದಿರ, ಬಾರ್, ಪಾರ್ಕ್, ಸ್ವಿಮ್ಮಿಂಗ್ ಪೂಲ್, ಶಾಪಿಂಗ್ ಮಾಲ್ ಗಳು ಬಂದ್ ಮುಂದುವರೆಯಲಿವೆ., ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಸಡಿಲಿಕೆ ಅನ್ವಯಿಸುವುದಿಲ್ಲ, ಆಟೋ, ಟ್ಯಾಕ್ಸಿ, ಕ್ಯಾಬ್ ಸೇವೆ ಇರುವುದಿಲ್ಲ, ಐಟಿ-ಬಿಟಿ ವಲಯಕ್ಕೆ ಮೇ.3 ರವರೆಗೆ ವಿನಾಯಿತಿ ಇಲ್ಲ. ಯಾರಾದರೂ ಮೃತಪಟ್ಟರೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು 20 ಜನರಿಗಷ್ಟೇ ಅವಕಾಶ.

Edited By

venki swamy

Reported By

venki swamy

Comments