ರಿಲಯನ್ಸ್ ಜೊತೆ ಹೂಡಿಕೆ ಮಾಡಿದ ಫೇಸ್ ಬುಕ್

22 Apr 2020 10:02 AM | General
350 Report

ಭಾರತೀಯ ಟೆಲಿಕಾಂನಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ಜಿಯೋ ತನ್ನ ಶೇ.9.99 ಷೇರನ್ನು ಅಮೆರಿಕದ ಟೆಕ್ ಸಂಸ್ಥೆ ಫೇಸ್ಬುಕ್ಗೆ ಮಾರಾಟ ಮಾಡಿದೆ. ಈ ಷೇರಿನ ಮೌಲ್ಯ 43,574 ಕೋಟಿ ರೂಪಾಯಿ ಆಗಿದೆ.

ಫೇಸ್​ಬುಕ್​ ತನ್ನ ಮೆಸೆಜಿಂಗ್​​ ಪ್ಲಾಟ್‌ಫಾರ್ಮ್​​​ ವಾಟ್ಸ್‌ಆಯಪ್​ ಮೂಲಕ ರಿಲಯನ್ಸ್​ ಇ-ಕಾಮರ್ಸ್​ ಉದ್ಯಮ ಜಿಯೋ ಮಾರ್ಟ್​ನೊಂದಿಗೆ ಸೇರಿ ಒಟ್ಟಿಗೆ ಕೆಲಸ ಮಾಡುವುದರ ಕಡೆ ಗಮನಹರಿಸಿದೆ. ಸಣ್ಣ ವ್ಯವಹಾರಗಳೊಂದಿಗೆ ಸಂಪರ್ಕ ಸಾಧಿಸಲು ಜನರನ್ನು ಸಕ್ರಿಯಗೊಳಿಸಲು ರಿಲಯನ್ಸ್​ ಮತ್ತು ಫೇಸ್​ಬುಕ್​ ಈ ನಿರ್ಧಾರಕ್ಕೆ ಬಂದಿವೆ ಎಂದು ಹೇಳಲಾಗುತ್ತಿದೆ.

Edited By

venki swamy

Reported By

venki swamy

Comments