ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಪಾತಾಳಕ್ಕೆ ಕುಸಿದ ಕಚ್ಚಾ ತೈಲ ದರ
ಕೊರೋನಾ ಸೋಂಕು ನಿಂದ ಆರ್ಥಿಕತೆಗೆ ನೀಡಿರುವ ಹೊಡೆತ, ಅಮೆರಿಕದ ಇತಿಹಾಸ ಕಂಡುಕೇಳರಿಯದ ದಾಖಲೆಯೊಂದನ್ನು ಸೃಷ್ಟಿಸಿದೆ.ಕೊರೊನಾ ಮೊದಲು ವಿಶ್ವದಲ್ಲಿ ಅವಶ್ಯಕ ಬಹುಬೇಡಿಕೆಯ ಸರಕು ಕಚ್ಚಾ ತೈಲ ಬೆಲೆ ಬ್ಯಾರಲ್ಗೆ ಒಂದು ಡಾಲರ್ಗಿಂತ ಕಡಿಮೆಯಾಗಿದೆ. ಈ ರೀತಿ ಆಗಿರುವುದು ಇತಿಹಾಸದಲ್ಲಿ ಇದೇ ಮೊದಲ ಬಾರಿ ಎನ್ನಲಾಗಿದೆ. ಅಮೆರಿಕಾದ ವೆಸ್ಟ್ ಟೆಕ್ಸಾಸ್ ಮಧ್ಯಂತರ(ಡಬ್ಲ್ಯುಟಿಐ) ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ -37.63 ಡಾಲರ್ನಲ್ಲಿ ಮುಕ್ತಾಯವಾಗಿದೆ.
ಅಮೆರಿಕ ಮಾತ್ರವಲ್ಲ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ತಿಂಗಳಿನಿಂದ ತೈಲಗಳ ಬೇಡಿಕೆ ಪಾತಾಳಕ್ಕೆ ಕುಸಿದಿದೆ. ಪರಿಣಾಮ ಈ ತಿಂಗಳ ಆರಂಭದಲ್ಲೇ ಅಂತಾರಾಷ್ಟ್ರೀಯ ಪೆಟ್ರೋಲಿಯಂ ರಫ್ತುಗಾರ ರಾಷ್ಟ್ರಗಳ ಸಂಘಟನೆಯಾದ ಒಪೆಕ್ ಸದಸ್ಯರು ಮತ್ತು ಅದರ ಮಿತ್ರರಾಷ್ಟ್ರಗಳು ಜಾಗತಿಕ ಉತ್ಪಾದನೆಯನ್ನು ಸುಮಾರು 10% ರಷ್ಟು ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ದಾಖಲೆ ಒಪ್ಪಂದಕ್ಕೆ ಸಹಿಹಾಕಿದ್ದಾರೆ. ಈ ಒಪ್ಪಂದವನ್ನು ಈವರೆಗೆ ಅತಿದೊಡ್ಡ ತೈಲ ಉತ್ಪಾದನಾ ಕಡಿತ ಒಪ್ಪಂದ ಎನ್ನಲಾಗುತ್ತಿದೆ. ವಿಶ್ವದಲ್ಲಿಯೇ ಬೇಡಿಕೆ ಕುಸಿತವಾಗಿ ಪೂರೈಕೆ ಹೆಚ್ಚಳವಾಗಿದೆ. ತೈಲ ಸಂಗ್ರಹಗಾರಗಳು ಭರ್ತಿಯಾಗಿರುವುದರಿಂದ ಕಚ್ಚಾತೈಲದ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. 1991ರ ಗಲ್ಫ್ ಯುದ್ಧದ ನಂತರ ಅಮೆರಿಕ ಇಂತಹ ದೊಡ್ಡ ಕುಸಿತ ಅನುಭವಿಸಿದೆ.
Comments