ವೈವಾಹಿಕ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಹಾಗೂ ರೇವತಿ ಇಂದು ಸರಳ ವಿವಾಹವಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬಿಡದಿಯ ಕೇತಿಗಾನಹಳ್ಳಿ ಬಳಿ ಇರುವ ಫಾರ್ಮ್ ಹೌಸ್ ನಲ್ಲಿ ನಿಖಿಲ್ ರೇವತಿ ಸರಳ ವಿವಾಹ ನಡೆದಿದ್ದು, ಇಂದು ಬೆಳಗ್ಗೆ 9 ರಿಂದ 9.45 ರ ಶುಭ ಗಳಿಗೆಯಲ್ಲಿ ಮಾಂಗಲ್ಯ ಧಾರಣೆ ನಡೆದಿದೆ. ಇಂದು ಸಂಜೆಯೇ ಸೊಸೆಯನ್ನು ಮನೆ ತುಂಬಿಸಿಕೊಳ್ಳಲಿದೆ ಗೌಡ್ರ ಕುಟುಂಬ. ಕೊರೋನಾ ಹಿನ್ನಲೆಯಲ್ಲಿ ಕುಟುಂಬದ ಅಪ್ತರಷ್ಟೇ ಭಾಗಿಯಾಗಿದ್ದಾರೆ.
Comments