ಚೀನಾದಿಂದ ಭಾರತಕ್ಕೆ 6.5 ಲಕ್ಷ ಮೆಡಿಕಲ್ ಕಿಟ್ ರವಾನೆ
ಮಹಾಮಾರಿ ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ನೆರವಾಗಲು ಚೀನಾ 6,5 ಲಕ್ಷ ಮೆಡಿಕಲ್ ಕಿಟ್ಗಳನ್ನು ರವಾನಿಸಿದೆ. ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಉಲ್ಬಣಗೊಂಡ ನಂತರಚೀನಾ ಭಾರತಕ್ಕೆ ನೀಡುತ್ತಿರುವ ಮೊದಲ ಸಹಾಯಇದಾಗಿದೆ.
ಚೀನಾದ ಒಟ್ಟು ಮೂರು ಕಂಪನಿಗಳಿಂದ ಭಾರತ ಈ ಕಿಟ್ ಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಚೀನಾದ ಗುವಾಂಗ್ಜ್ ನಲ್ಲಿ ಕಸ್ಟಮ್ಸ್ ನಿಂದ ಒಪ್ಪಿಗೆ ಸಿಕ್ಕಿದೆ. ಇಂದು ಸಂಜೆ ಈ ಕಿಟ್ ಗಳು ಭಾರತದ ರಾಜಧಾನಿ ದೆಹಲಿಗೆ ಬಂದಿಳಿಯಲಿದೆ. ಅಂತೆಯೇ ಮುಂದಿನ 15 ದಿನಗಳ ಅಂತರದಲ್ಲಿ ಭಾರತ ಇನ್ನೂ 20 ಲಕ್ಷ ಕಿಟ್ ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಿದೆ ಎಂದು ಹೇಳಿದರು.
ಈ ಹಿಂದೆ ಜರ್ಮನಿ, ಫ್ರಾನ್ಸ್, ದಕ್ಷಿಣ ಕೊರಿಯಾ, ಇಸ್ರೇಲ್ ದೇಶಗಳಿಗೆ ಚೀನಾದಿಂದ ಪರೀಕ್ಷೆ ನಡೆಸುವ ಕಿಟ್ ಗಳು ರಫ್ತಾಗಿತ್ತು. ಈ ದೇಶಗಳ ಆರೋಗ್ಯ ಸಚಿವಾಲಯಗಳು ಈ ಕಿಟ್ ಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ತಿರಸ್ಕರಿಸಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರವಾದ ಬಳಿಕ ಚೀನಾ ಸರ್ಕಾರ ಗುಣಮಟ್ಟದ ಟೆಸ್ಟ್ ಕಿಟ್ ತಯಾರಿಸುವ ಕಂಪನಿಯನ್ನು ಪಟ್ಟಿ ಮಾಡಿ ವಿವಿಧ ರಾಷ್ಟ್ರಗಳಿಗೆ ನೀಡಿತ್ತು. ಅಷ್ಟೇ ಅಲ್ಲದೇ ಚೀನಾದ ಕಸ್ಟಮ್ಸ್ ವಿಭಾಗವೂ ಈ ಕಿಟ್ ಗಳನ್ನು ಪರೀಕ್ಷೆ ಮಾಡಿ ನಂತರ ಒಪ್ಪಿಗೆ ನೀಡುತ್ತಿದೆ.
Comments