ಪ್ಲಾಸ್ಮಾ ಥೆರಪಿ ಅಂದ್ರೆನು..?
ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಲ್ಲಿನ ಆ್ಯಂಟಿಬಾಡಿಯನ್ನು ಪ್ರತ್ಯೇಕಿಸಿ ಅದನ್ನು ಕೊರೊನಾದಿಂದ ಬಳಲುತ್ತಿರುವ ರೋಗಿಯ ಅಥವಾ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುವ ವ್ಯಕ್ತಿಯ ದೇಹಕ್ಕೆ ಸೇರಿಸುವುದು.
ಕೊವಿಡ್ 19 ರೋಗದಿಂದ ಬಳಲುತ್ತಿರುವ ವ್ಯಕ್ತಿ ಚೇತರಿಸಿಕೊಂಡ ಬಳಿಕ ಆತನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಬೆಳೆದಿರುತ್ತದೆ. ಇದು ಆತನಿಗೆ ಆ ಸೋಂಕಿನಿಂದ ಸುದೀರ್ಘ ಕಾಲ ಅಥವಾ ಅಲ್ಪಾವಧಿ ರಕ್ಷಣೆ ನೀಡಬಲ್ಲದಾಗಿರುತ್ತದೆ. ಅದೇ ರೀತಿ ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ದೇಹದಲ್ಲೂ ಪ್ರತಿಜೀವಿಗಳು ಅಭಿವೃದ್ಧಿಗೊಂಡಿರುತ್ತವೆ. ಇವು ಪ್ಲಾಸ್ಮಾದಲ್ಲಿರುತ್ತದೆ. ಈ ಪ್ಲಾಸ್ಮಾಗಳು ಅಗತ್ಯ ಬಿದ್ದಾಗ ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತವೆ. ಈ ಪ್ಲಾಸ್ಮಾವನ್ನು ಕೊರೊನಾ ಸೋಂಕಿತರಿಗೆ ನೀಡಿದ ವೇಳೆ , ಅವು ಕೊರೊನಾ ಸೋಂಕನ್ನು ಗುರುತಿಸಿ ಅವುಗಳ ಮೇಲೆ ದಾಳಿ ಮಾಡುತ್ತವೆ.
Comments